ಸಾರಾಂಶ
ರಿಪ್ಪನ್‍ಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಸಿಇಟಿ, ಎನ್‍ಇಇಟಿ, ಜೆಇಇ, ವೃತ್ತಿ ತರಬೇತಿ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ
ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್‍ನಲ್ಲಿ ವಾರದಲ್ಲಿ ಎರಡು ಮೂರು ದಿನ ನುರಿತ ಉಪನ್ಯಾಸಕರಿಂದ ಹಲವು ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿ ದೆಸೆಯಲ್ಲೆ ತರಬೇತಿ ನೀಡುವ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.ರಿಪ್ಪನ್‍ಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜ್‍ನಲ್ಲಿ ಆಯೋಜಿಸಲಾದ ಕೆಸಿಇಟಿ/ ಎನ್‍ಇಇಟಿ / ಜೆಇಇ / ವೃತ್ತಿ ತರಬೇತಿ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಪಟ್ಟಣದಲ್ಲಿ ಸಾಕಷ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ಖಾಸಗಿಯಾಗಿ ತರಬೇತಿ ಶಿಬಿರಗಳು ನಡೆಯುತ್ತಿರುತ್ತವೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚು ಹಣವನ್ನು ಖರ್ಚುಮಾಡಿಕೊಂಡು ಹೋಗಿ ಪಡೆಯುವುದು ದುಸ್ತರವಾಗಿದೆ ಎಂದರು.
ಮುಂದುವರಿದು, ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳು ಸಹ ಸ್ಪರ್ಧಾತ್ಮಕ ವೃತ್ತಿ ಪರ ಶಿಕ್ಷಣ ತರಬೇತಿ ಪಡೆಯುವ ಮೂಲಕ ಸರ್ಕಾರಿ ಮತ್ತು ಖಾಸಗಿ ಉದ್ಯೋಗವನ್ನು ಪಡೆಯುವುದರೊಂದಿಗೆ ಉನ್ನತ ಹುದ್ದೆಗಳಾದ ಐಎಎಸ್.ಐಪಿಎಸ್ ಹಾಗೂ ಐಎಫ್‍ಎಸ್ ಹೀಗೆ ಹಲವು ವಿವಿಧ ಇಲಾಖೆಗಳ ಉನ್ನತ ಹುದ್ದೆಗಳಲ್ಲಿ ಸೇವೆ ಪಡೆಯಲು ಸಾಧ್ಯವಾಗುವುದು. ನಾನು ವ್ಯಾಸಂಗ ಮಾಡುವ ಸಂದರ್ಭದಲ್ಲಿ ಸಾಕಷ್ಟು ಅರ್ಥಿಕವಾಗಿ ಹಿಂದೆ ಉಳಿದಿದ್ದು ಪೋಷಕರು ಸಾಕಷ್ಟು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಹ ಕಾಲದಲ್ಲಿ ದೂರದ ಸಾಗರಕ್ಕೆ ಬಂದು ವ್ಯಾಸಂಗ ಮಾಡುವಂತಾಗಿತ್ತು. ಈಗ ಅರ್ಥಿಕವಾಗಿ ಮುಂದೆ ಬಂದಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಹೆಚ್ಚು ಅಸಕ್ತಿ ವಹಿಸುತ್ತಿದ್ದು, ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ದೂರದ ಶಿವಮೊಗ್ಗ, ಸಾಗರ, ತೀರ್ಥಹಳ್ಳಿ ಹೋಗಿ ತರಬೇತಿ ಪಡೆಯುವುದು ಕಷ್ಟಕರವಾಗಿದೆ. ಅದನ್ನು ಮನಗಂಡು ನಾನು ಸರ್ಕಾರಿ ಪದವಿ ಪೂರ್ವ ಕಾಲೇಜ್‍ನಲ್ಲಿಯೇ ಇಂತಹ ಕಾರ್ಯಾಗಾರ ವನ್ನು ನಡೆಸುವುದರೊಂದಿಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಉಪಯುಕ್ತವಾಗುವಂತೆ ಮಾಡಿದ್ದು ಈ ಸೌಲಭ್ಯದ ಸದುಪಯೋಗ ಪಡೆದು ಕೊಳ್ಳುವಂತೆ ಕರೆ ನೀಡಿದರು.ಈ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಆಧ್ಯಕ್ಷತೆಯನ್ನು ಸಿಡಿಸಿ ಉಪಾಧ್ಯಕ್ಷ ಜಿ.ಆರ್.ಗೋಪಾಲಕೃಷ್ಣ ವಹಿಸಿದ್ದರು. ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಭಾರ ಪ್ರಾಚಾರ್ಯ ವಾಸುದೇವ,ಗ್ರಾಮ ಪಂಚಾಯಿತ್ ಆಧ್ಯಕ್ಷೆ ಧನಲಕ್ಷ್ಮಿ,ಉಪಾಧ್ಯಕ್ಷ ಸುದೀಂದ್ರಪೂಜಾರಿ,ಸಿಡಿಸಿ ಸಮಿತಿಯವರು ಮತ್ತು ಉಪನ್ಯಾಸಕ ವೃಂದ ಗ್ರಾಮ ಪಂಚಾಯಿತ್ ಸದಸ್ಯರಾದ ಡಿ.ಈ.ಮಧುಸೂಧನ್,ಮಹಾಲಕ್ಷ್ಮಿ,ಗಣಪತಿಗವಟೂರು,ತಾಲ್ಲೂಕ್ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಚಂದ್ರುಮೌಳಿಗೌಡರು.ಹಾಜರಿದ್ದರು.
ಪ್ರಾರಂಭದಲ್ಲಿ ವಿದ್ಯಾರ್ಥಿನಿ ಪ್ರಣತಿ ಪ್ರಾರ್ಥಿಸಿದರು, ಉಪನ್ಯಾಸಕ ಸ್ವಾಗತಿಸಿದರು.ಪ್ರಭಾರ ಪ್ರಚಾರ್ಯ ಪ್ರಸ್ತಾವಿಕವಾಗಿ ಮಾತನಾಡಿದರು.