ಸಾರಾಂಶ
ಭಾಗ್ಯನಗರ ಸರ್ಕಲ್‌ನಿಂದ ಕುಷ್ಟಗಿ ರಸ್ತೆಯ 2 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕಕನ್ನಡಪ್ರಭ ವಾರ್ತೆ ಕೊಪ್ಪಳ
ಸಂಚಾರಕ್ಕೆ ಅನುಕೂಲ ಆಗಲು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.ನಗರದ ಕಿನ್ನಾಳ ರಸ್ತೆಯ ಭಾಗ್ಯನಗರ ಸರ್ಕಲ್‌ನಿಂದ ಕುಷ್ಟಗಿ ರಸ್ತೆ ಸಂಪರ್ಕ ಒದಗಿಸುವ ರಸ್ತೆಗೆ ₹ 2 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡುವ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಈ ರಸ್ತೆಯ ಅಭಿವೃದ್ಧಿ ಕಾಮಗಾರಿ ಬಹುದಿನಗಳ ಬೇಡಿಕೆ ಆಗಿತ್ತು. ಕುಷ್ಟಗಿ ರೈಲ್ವೆ ಮೇಲ್ಸೇತುವೆಯ ಕಾಮಗಾರಿ ನಡೆಯುವ ಸಂಧರ್ಭದಲ್ಲಿ ಪ್ರಯಾಣಿಕರಿಗೆ ಈ ರಸ್ತೆ ಮೂಲಕ ಸಂಚಾರ ನಡೆಸಿದ್ದರು. ಇಂದು ಇದಕ್ಕೆ ₹2 ಕೋಟಿ ಅನುದಾನ ಮಿಸಲಿಟ್ಟು ಭೂಮಿಪೂಜೆ ನೆರವೇರಿಸಿದ್ದೇವೆ. ನಾಳೆಯಿಂದಲೇ ಕಾಮಗಾರಿ ಪ್ರಾರಂಭ ಮಾಡುವಂತೆ, ಗುಣಮಟ್ಟವಾದ ರಸ್ತೆ ನಿರ್ಮಿಸಿ ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಬಹುದಿನಗಳ ಬೇಡಿಕೆ ಆಗಿದ್ದ ಕೊಪ್ಪಳ-ಕಿನ್ನಾಳ ರಸ್ತೆ ಅಭಿವೃದ್ಧಿಗೆ ಕೂಡ ₹9.50 ಕೋಟಿ ಅನುದಾನವನ್ನು ಮಂಜೂರು ಮಾಡಿ ಭೂಮಿಪೂಜೆ ಕೂಡ ನೆರವೇರಿಸಿದ್ದೆವು. ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ಕ್ಷೇತ್ರದಲ್ಲಿನ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಕೂಡ ಹೆಚ್ಚಿನ ಮಹತ್ವ ನೀಡಿದ್ದೇವೆ ಎಂದರು.ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ, ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ತುಕಾರಾಮಪ್ಪ ಗಡಾದ್, ಉಪಾಧ್ಯಕ್ಷ ಹೊನ್ನೂರ್ ಸಾಬ್, ಪ್ರಸನ್ನ ಗಡಾದ್, ಕೃಷ್ಣ ಇಟ್ಟಂಗಿ,ಮುತ್ತುರಾಜ್ ಕುಷ್ಟಗಿ, ಗುರು ಹಲಿಗೇರಿ,ರವಿ ಕುರಗೋಡ, ಶರಣಪ್ಪ ಸಜ್ಜನ್, ಜ್ಯೋತಿ ಗೊಂಡಬಾಳ, ಪದ್ಮಾವತಿ ಕಂಬಳಿ, ಶಿವರಾಮ್ ಮ್ಯಾಗಳಮನಿ, ಅಶೋಕ್ ಗೊರಂಟ್ಲಿ, ಅಕ್ಬರ್ ಪಲ್ಟಾನ್ ಇತರರಿದ್ದರು.