ಪೆಂಡಾಲ್‌ ಗಣಪತಿ ದರ್ಶನ ಪಡೆದ ಪ್ರೀತಂಗೌಡ ದಂಪತಿ

| Published : Sep 25 2024, 12:57 AM IST

ಸಾರಾಂಶ

ಹಾಸನ: ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಶ್ರೀ ಗಣಪತಿ ಪೆಂಡಾಲಿನಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಗಣೇಶನ ಉತ್ಸವ ಕಾರ್ಯಕ್ರಮದಲ್ಲಿ ಮಂಗಳವಾರ ಮಧ್ಯಾಹ್ನ ಮಹಾಮಂಗಳಾರತಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ದಂಪತಿ ಆಗಮಿಸಿ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.

ನಂತರ ಪ್ರೀತಂಗೌಡರು ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ನಗರದ ಪೆಂಡಾಲ್ ಗಣಪತಿ ಎಂದೇ ಹೆಸರಾಗಿರುವ ಗಣೇಶನ ಸೇವೆಯನ್ನು ಈ ದಿನ ನನಗೆ ಕಲ್ಪಿಸಿಕೊಟ್ಟಿದ್ದರು. ಈ ದಿನ ಪೂಜೆಯಲ್ಲಿ ಪಾಲ್ಗೊಂಡು ವಿಘ್ನ ನಿವಾರಕನ ಆಶೀರ್ವಾದ ಪಡೆದಿದ್ದೇವೆ. ವಿನಾಯಕ ಹಾಸನ ಜಿಲ್ಲೆ ಮತ್ತು ವಿಧಾನ ಸಭಾ ಕ್ಷೇತ್ರಕ್ಕೆ ಒಳಿತನ್ನು ಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.

ನಾನು ಗಣಪತಿ ಪೂಜೆಯಲ್ಲಿದ್ದುದ್ದರಿಂದ ರಾಜ್ಯದ ಮುಖ್ಯಮಂತ್ರಿಯವರ ಬಗ್ಗೆ ವಿಚಾರ ತಿಳಿದಿರುವುದಿಲ್ಲ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಯಾವುದನ್ನೂ ನಾನೀಗ ಮಾತನಾಡುವಂತಿಲ್ಲ. ತೀರ್ಪನ್ನು ವೀಕ್ಷಿಸಿ ಮುಂದೆ ಪ್ರತಿಕ್ರಿಯಿಸುವುದಾಗಿ ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಎಂಸಿಇ ಕಾಲೇಜು ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ, ಮ್ಯಾನೆಜರ್ ಶಿವರಾಂ ಕೃಷ್ಣಯ್ಯ, ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಡಾ ಎಚ್. ನಾಗರಾಜು, ಕಾರ್ಯದರ್ಶಿ ಚನ್ನವೀರಪ್ಪ, ಸಹಕಾರ್ಯದರ್ಶಿ ವೈ.ಎಸ್. ಮುರುಗೇಂದ್ರ, ಖಜಾಂಚಿ ಎಂ.ಎಸ್. ಶ್ರೀಕಂಠಯ್ಯ, ಧರ್ಮದರ್ಶಿಗಳಾದ ಬೂದೇಶ್, ಎಚ್.ಟಿ. ಶೇಖರ್, ಎಚ್.ಎಸ್. ಅನಂತನಾರಾಯಣ, ಎನ್.ಎಸ್. ಶಂಕರರಾವ್, ಸಿ. ರಾಮಚಂದ್ರಯ್ಯ, ಎಚ್.ಪಿ. ಕಿರಣ್, ಎಂ.ಕೆ. ಕಮಲ್ ಕುಮಾರ್, ಎಚ್.ಡಿ. ದೀಪಕ್, ಲೀಲಾಕುಮಾರ್, ಬಿಜೆಪಿ ಮುಖಂಡರಾದ ಪ್ರೀತಿ ವರ್ಧನ್, ಪ್ರಕಾಶ್ ಇತರರು ಉಪಸ್ಥಿತರಿದ್ದರು.