ಸಾರಾಂಶ
ತಾಳಿಕೋಟೆ: ಪಟ್ಟಣದ ಶ್ರೀವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆಯ ಭರತನಾಟ್ಯ ಶಿಕ್ಷಕ ವಿನೋದಕುಮಾರ ಚಿಕ್ಕಮಠ ಅವರ ವಿದ್ಯಾರ್ಥಿನಿ ಪೃಥ್ವಿ ಹೆಗಡೆ ಅವರಿಗೆ ಅಹಿಲ್ಯಾಬಾಯಿ ಹೊಳ್ಕರ ರಾಷ್ಟ್ರೀಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಕೂಲ್ಹಾರ ತಾಲೂಕಿನ ಮಲಘಾಣ ಸರ್ಕಾರಿ ಪ್ರೌಡಶಾಲೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.