ಸಾರಾಂಶ
ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಕರ್ತವ್ಯ ಸಲ್ಲಿಸಿದ್ದ 8 ವರ್ಷ ಪ್ರಾಯದ ಪೃಥ್ವಿ ಹೃದಯಾಘಾತದಿಂದ ಮಂಗಳವಾರ ಮೃತಪಟ್ಟಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಕರ್ತವ್ಯ ಸಲ್ಲಿಸಿದ್ದ 8 ವರ್ಷ ಪ್ರಾಯದ ಪೃಥ್ವಿ ಹೃದಯಾಘಾತದಿಂದ ಮಂಗಳವಾರ ಮೃತಪಟ್ಟಿದೆ.6 ತಿಂಗಳು ಬೆಂಗಳೂರಿನಲ್ಲಿ ತರಬೇತಿ ಪಡೆದ ಪೃಥ್ವಿ ತದನಂತರ ಕೊಡಗು ಜಿಲ್ಲೆಗೆ ನಿಯೋಜನೆಗೊಂಡಿದ್ದು, ಸುಮಾರು 500ಕ್ಕೂ ಹೆಚ್ಚು ವಿಐಪಿ/ ವಿವಿಐಪಿ ಸುರಕ್ಷತಾ ಕರ್ತವ್ಯಗಳಲ್ಲಿ ಭಾಗಿಯಾಗಿದೆ.
ಗೋವಾ ಮತ್ತು ಪಾಂಡಿಚೇರಿಗಳಲ್ಲಿ ಪ್ರಧಾನ ಮಂತ್ರಿ ಕರ್ತವ್ಯ ನಿಮಿತ ಭಾಗಿಯಾಗಿ ಪ್ರಶಂಸನೆ ಗಳಿಸಿದ್ದಾನೆ. ರಾಜ್ಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 3 ಬಾರಿ ಹಾಗೂ ವಲಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 5 ಬಹುಮಾನವನ್ನು ಪಡೆದಿರುತ್ತದೆ.ದಕ್ಷಿಣ ವಲಯ ಮತ್ತು ಪೊಲೀಸ್ ಕರ್ತವ್ಯ ಕೋಟಗಳಲ್ಲಿ ಪದಕ ಗಳಿಸಿದ ಕೀರ್ತಿ ಪೃಥ್ವಿ ಗೆ ಇದೆ. ಚೆಕ್ ಪೋಸ್ಟ್‌ಗಳಲ್ಲಿ ಸ್ಪೋಟಕ ವಸ್ತುಗಳ ಸಾಗಾಟವನ್ನು ಪತ್ತೆ ಕರ್ತವ್ಯ ನಿರ್ವಹಿಸಿದೆ. ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲಿ ವಿಐಪಿ ಮತ್ತು ವಿವಿಐಪಿ ಗಳ ಭೇಟಿ ಸಂದರ್ಭ ಸ್ಪೋಟಕ ವಸ್ತುಗಳ ಪತ್ತೆ ಹಾಗೂ ಭದ್ರತಾ ಕರ್ತವ್ಯವನ್ನು ನಿರ್ವಹಿಸಿದೆ. ಏರ್ ಶೋ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಯುವ ಸಂದರ್ಭ ಕರ್ತವ್ಯ ನಿರ್ವಹಿಸಿದೆ.
ರಾಷ್ಟ್ರಪತಿ ಭೇಟಿ ಸಂದರ್ಭ ಸ್ಪೋಟಕ ವಸ್ತುಗಳ ಪತ್ತೆ ಕರ್ತವ್ಯವನ್ನು ನಿರ್ವಹಿಸಿದೆ. ಕೇಂದ್ರಾಡಳಿತ ಪ್ರದೇಶಗಳಾದ ಗೋವಾ, ಪಾಂಡಿಚೇರಿ ಮತ್ತು ಲಕ್ಷದ್ವೀಪದಲ್ಲಿ ಪ್ರಧಾನ ಮಂತ್ರಿಗಳ ಭೇಟಿ ಸಂದರ್ಭ ಸ್ಫೋಟಕ ವಸ್ತುಗಳ ಪತ್ತೆ ಕರ್ತವ್ಯವನ್ನು ನಿರ್ವಹಿಸಿದೆ.ಪೃಥ್ವಿಯ ಕರ್ತವ್ಯದ ಅವಧಿಯಲ್ಲಿನ ಅತ್ಯುತ್ತಮ ಸೇವೆಯನ್ನು ಸ್ಮರಿಸಿ ಕೊಡಗು ಜಿಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪೃಥ್ವಿಯ ಆತ್ಮಕ್ಕೆ ಶಾಂತಿ ಕೋರಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಗೆ ಅಂತಿಮ ಗೌರವ ವಂದನೆ ಸಲ್ಲಿಸಿದರು.