ಸಂಘವು 2025- 26 ಸಾಲಿನಲ್ಲಿ 484.78 ಕೋಟಿ ರು. ವಹಿವಾಟುಗಳನ್ನು ಮಾಡಿದ್ದು, 54.25 ಲಕ್ಷ ಲಾಭಾಂಶ ಗಳಿಸಿದೆ. ಪ್ರಸ್ತುತ 70 ಲಕ್ಷ ಪಾಲು ಬಂಡವಾಳ, 3184 ಸದಸ್ಯರು, ಒಟ್ಟು44.93 ಕೋಟಿ ರು. ಠೇವಣಿ ಇದ್ದು, 37 ಕೋಟಿ ರು. ಸಾಲ ನೀಡಲಾಗಿದೆ. ಶೇ. 97.5 ಸಾಲ ವಸೂಲಾತಿ ಮಾಡಿದ್ದು, ಈ ಬಾರಿ ಕೂಡ ಆಡಿಟ್ ವರ್ಗೀಕರಣದಲ್ಲಿ ‘ಎ’ ದರ್ಜೆಯ ಸ್ಥಾನಮಾನ ದೊರಕಿದೆ ಎಂದು ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್ ಹೇಳಿದರು.
ಮೂಲ್ಕಿ: ಸಂಘವು 2025- 26 ಸಾಲಿನಲ್ಲಿ 484.78 ಕೋಟಿ ರು. ವಹಿವಾಟುಗಳನ್ನು ಮಾಡಿದ್ದು, 54.25 ಲಕ್ಷ ಲಾಭಾಂಶ ಗಳಿಸಿದೆ. ಪ್ರಸ್ತುತ 70 ಲಕ್ಷ ಪಾಲು ಬಂಡವಾಳ, 3184 ಸದಸ್ಯರು, ಒಟ್ಟು44.93 ಕೋಟಿ ರು. ಠೇವಣಿ ಇದ್ದು, 37 ಕೋಟಿ ರು. ಸಾಲ ನೀಡಲಾಗಿದೆ. ಶೇ. 97.5 ಸಾಲ ವಸೂಲಾತಿ ಮಾಡಿದ್ದು, ಈ ಬಾರಿ ಕೂಡ ಆಡಿಟ್ ವರ್ಗೀಕರಣದಲ್ಲಿ ‘ಎ’ ದರ್ಜೆಯ ಸ್ಥಾನಮಾನ ದೊರಕಿದೆ ಎಂದು ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್ ಹೇಳಿದರು. ಸೊಸೈಟಿಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಸದಸ್ಯರು ಮೃತರಾದಲ್ಲಿ ಅವರ ಶವ ಸಂಸ್ಕಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಎಚ್. ನಾರಾಯಣ ಸನಿಲ್ ಮರಣೋತ್ತರ ನಿಧಿ ಸ್ಥಾಪಿಸಿ, ಮರಣದ ಸಂದರ್ಭದಲ್ಲಿ 10,000 ರು. ನೀಡಲಾಗುವುದು. ಹಳೆಯಂಗಡಿ, ಪಡುಬಿದ್ರಿ, ಕಿನ್ನಿಗೋಳಿ, ಮೂಡುಬಿದಿರೆ ಸೇರಿದಂತೆ ನಾಲ್ಕು ಕಡೆಗಳಲ್ಲಿ ಶಾಖೆಯನ್ನು ಹೊಂದಿದ್ದು, ಈ ವರ್ಷ ಉಡುಪಿಯಲ್ಲಿ ಶಾಖೆಯನ್ನು ತೆರೆಯಲು ಸಿದ್ಧತೆ ನಡೆದಿದೆ. ಸದಸ್ಯರಿಗೆ ಶೇ, 9.5 ಡಿವಿಡೆಂಡ್ ನೀಡುವುದಾಗಿ ತಿಳಿಸಿದರು.
ಈ ಸಂದರ್ಭ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಪ್ರಿಯದರ್ಶಿನಿ ಸ್ವಸಹಾಯ ಸಂಘಗಳಲ್ಲಿ ಉತ್ತಮ ಸಾಧನೆಗೆ ಮಾಡಿದ ಎರಡು ಸಂಘವನ್ನು ಗುರುತಿಸಿ ಹಾಗೂ ಪಿಎಚ್ ಡಿ ಪದವಿ ಪಡೆದ ಸೊಸೈಟಿಯ ನಿರ್ದೇಶಕಿ ಡಾ. ಶೆರಿಲ್ ಅಯೊನಾ ಐಮನ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸೊಸೈಟಿ ಉಪಾಧ್ಯಕ್ಷ ವಿಜಯ್ ಕುಮಾರ್ ಸನಿಲ್ , ನಿರ್ದೇಶಕರಾದ ಉಮಾನಾಥ್ ಜೆ. ಶೆಟ್ಟಿಗಾರ್, ಧನಂಜಯ ಮಟ್ಟು, ಗೌತಮ್ ಜೈನ್, ಗಣೇಶ್ ಪ್ರಸಾದ್ ದೇವಾಡಿಗ, ಜೈ ಕೃಷ್ಣ ಕೋಟ್ಯಾನ್, ಡಾ. ಶೆರಿಲ್ ಅಯೋನ ಐಮನ್, ರೇಖಾ ಶೆಟ್ಟಿ, ಹರೀಶ್ ಎನ್. ಪುತ್ರನ್, ನವೀನ್ ಸಾಲ್ಯಾನ್ ಪಂಜ, ಮೋಹನ್ ದಾಸ್, ಅನಿಲ್. ಪೂಜಾರಿ ಸಸಿಹಿತ್ಲು, ರಜೀಯಾ ಬಾನು, ಕರಿಯ ಕಾಡಿಗ, ಹಿರಿಯ ಶಾಖಾ ಪ್ರಬಂಧಕ ಮೋಹನ್ ದಾಸ್, ಮೂಡುಬಿದಿರೆ ಶಾಖಾ ಪ್ರಬಂಧಕಿ ಅಭಿಷ್ಟಾ ಕುಮಾರಿ, ಪಡುಬಿದ್ರಿ ಶಾಖಾ ಪ್ರಬಂಧಕಿ ಅಂಜಲಿ ಉಳ್ಳಾಲ್ ಎಸ್. ಉಪಸ್ಥಿತರಿದ್ದರು.ರಕ್ಷಿತ್ ಪ್ರಾರ್ಥಿಸಿದರು. ಅಕ್ಷತಾ ಶೆಟ್ಟಿ, ಪ್ರಜ್ಞಾಶ್ರೀ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ಸ್ವಾಗತಿಸಿದರು, ಲೋಲಾಕ್ಷಿ ವಂದಿಸಿದರು.