ಸಾರಾಂಶ
ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರಗೆ ನಿಲ್ಲಿಸಿದ ಪ್ರಕರಣದಲ್ಲಿ, ತಮ್ಮ ತಂದೆಯ ಆತ್ಮಗೌರವ ಕಾಪಾಡುವಲ್ಲಿ ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ವಿಫಲರಾಗಿದ್ದಾರೆ ಎಂದು ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ವ್ಯಂಗ್ಯವಾಡಿದ್ದಾರೆ.
ನವದೆಹಲಿ: ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರಗೆ ನಿಲ್ಲಿಸಿದ ಪ್ರಕರಣದಲ್ಲಿ, ತಮ್ಮ ತಂದೆಯ ಆತ್ಮಗೌರವ ಕಾಪಾಡುವಲ್ಲಿ ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ವಿಫಲರಾಗಿದ್ದಾರೆ ಎಂದು ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ‘ಯಾವುದೇ ಒಳ್ಳೆಯ ಪುತ್ರ ತಮ್ಮ ತಂದೆಗೆ ಅವಮಾನ ಆಗದಂತೆ ತಡೆದು, ಅವರ ಆತ್ಮಗೌರವವನ್ನು ಕಾಪಾಡಲು ಹೋರಾಡುತ್ತಾರೆ. ಆದರೆ 12ನೇ ತರಗತಿ ಅನುತ್ತೀರ್ಣರಾಗಿರುವ ಕಾಂಗ್ರೆಸ್‌ನ ವಂಶಪಾರಂಪರ್ಯದ ಕುಡಿಯಾದ ಪ್ರಿಯಾಂಕ್ ಖರ್ಗೆ ಭಟ್ಟಂಗಿಯಾಗಿದ್ದಾರೆ ಮತ್ತು ಅವರ ಹಿತಾಸಕ್ತಿ ಏನಿದ್ದರೂ ಮಲ್ಲಿಕಾರ್ಜುನ ಖರ್ಗೆಗೆ ಅವಮಾನವಾದರೂ ಪರವಾಗಿಲ್ಲ, ಅವರ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಭೂಮಿ ಮತ್ತು ಹಣ ಲೂಟಿಯಷ್ಟೇ ಆಗಿದೆ’ ಎಂದಿದ್ದಾರೆ.