ಸೈಕಲ್‌ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

| Published : Aug 12 2025, 12:30 AM IST

ಸಾರಾಂಶ

ಕನಕಪುರ: ಸ್ವರ್ಧೆಗಳು ಆರೋಗ್ಯಕರವಾಗಿರಬೇಕು, ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಸ್ಪರ್ಧೆಗಳು ಆತ್ಮವಿಶ್ವಾಸ ಹೆಚ್ಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ಹೇಳಿದರು.

ಕನಕಪುರ: ಸ್ವರ್ಧೆಗಳು ಆರೋಗ್ಯಕರವಾಗಿರಬೇಕು, ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಸ್ಪರ್ಧೆಗಳು ಆತ್ಮವಿಶ್ವಾಸ ಹೆಚ್ಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ಹೇಳಿದರು.

ಲಯನ್ಸ್ ಮತ್ತು ಲಿಯೋ ಸಂಸ್ಥೆಯಿಂದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ತಾಲೂಕು ಮಟ್ಟದ 43ನೇ ಸೈಕಲ್ ಸ್ವರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. 18 ವರ್ಷ ಮೇಲ್ಪಟ್ಟ ಬಾಲಕರ ವಿಭಾಗದಲ್ಲಿ ಮೊದಲ ಬಹುಮಾನ ಪ್ರಮೋದ್ ಕಲ್ಲಹಳ್ಳಿಗೆ 3 ಸಾವಿರದ ನಗದು, ಸೈಕಲ್‌ ನೀಡಿ ಸನ್ಮಾನಿಸಲಾಯಿತು. ಎರಡನೇ ಬಹುಮಾನ ಕಲ್ಲಹಳ್ಳಿ ನಿಖಿತ್‌ ಗೆ 2 ಸಾವಿರ ನಗದು, 3ನೇ ಬಹುಮಾನ ಹಿತೇಶ್‌ ಹಾಗು 4ನೇ ಬಹುಮಾನ ಶರತ್ ಒಂದು ಸಾವಿರ ನಗದು ಹಾಗೂ ಕಿರಣ್, ಕೆ.ವಿ.ಶ್ರೀನಿವಾಸ್ , ವಿನಯ್, ಎನ್.ಸಂತೋಷ್‌ಗೆ ಸಮಾಧಾನಕರ ಬಹುಮಾನ ನೀಡಲಾಯಿತು. 15ರಿಂದ 17 ವರ್ಷದ ಗಂಡು ಮಕ್ಕಳ ಸೈಕಲ್ ತುಳಿಯವ ಸ್ವರ್ಧೆಯಲ್ಲಿ ಆಕಾಶ್‌ಗೆ ಮೊದಲ ಬಹುಮಾನವಾಗಿ ಸೈಕಲ್ ನೀಡಿ ಸನ್ಮಾನಿಸಲಾಯಿತು. 10ರಿಂದ 14 ರ್ಷದೊಳಗಿನ ಹೆಣ್ಣುಮಕ್ಕಳ ವಿಭಾಗದಲ್ಲಿ ಮೊದಲ ಬಹುಮಾನವಾಗಿ ಲಿಖಿತ, 2ನೇ ಬಹುಮಾನ ಸೂಫಿಯ ಕೌಸರ್, 3ನೇ ಬಹುಮಾನ ಜಿ.ಡಿ.ರೇಷ್ಮ ಹಾಗೂ ಆರ್.ಹರ್ಷಿಣಿ, ಎಂ.ಚಿರಣ್ಯ ಸಮಾಧಾನಕರ ಬಹುಮಾನ ಪಡೆದರು. ಲಿಯೋ ಅಧ್ಯಕ್ಷ ಎಂ.ಎಸ್.ವರ್ಷಂತ್, ಕಾರ್ಯದರ್ಶಿ ಎಸ್.ಆಕಾಶ್, ಖಜಾಂಚಿ ಕಿರಣ್, ಲಿಯೋ ಅಡ್ವೈಸರ್ ಟಿ.ಕೆ. ವಿಶ್ವಕಾಂತ್, ಕೋ ಅಡ್ವೆಸರ್ ಎಂ.ಬಿ.ದರ್ಶನ್ ಪಸ್ಥಿತರಿದ್ದರು.

(ಫೋಟೋ ಕ್ಯಾಫ್ಷನ್‌)

ಕನಕಪುರದಲ್ಲಿ ಲಯನ್ಸ್ ಮತ್ತು ಲಿಯೋ ಸಂಸ್ಥೆಯಿಂದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ತಾಲೂಕು ಮಟ್ಟದ 43ನೇ ಸೈಕಲ್ ಸ್ವರ್ಧೆ ವಿಜೇತರಿಗೆ ವಿಧಾನ ಪರಿಷತ್ ಸದಸ್ಯ ಎಸ್.ರವಿ ಬಹುಮಾನ ವಿತರಿಸಿದರು. ಲಿಯೋ ಅಧ್ಯಕ್ಷ ಎಂ.ಎಸ್.ವರ್ಷಂತ್, ಕಾರ್ಯದರ್ಶಿ ಎಸ್.ಆಕಾಶ್, ಖಜಾಂಚಿ ಕಿರಣ್ ಇತರರಿದ್ದರು.