ಮೈತ್ರಿ ಅಭ್ಯರ್ಥಿಗೆ ಕನ್ನಡಪರ ಸಂಘಟನೆಗಳ ಬೆಂಬಲ

| Published : Apr 23 2024, 12:46 AM IST

ಮೈತ್ರಿ ಅಭ್ಯರ್ಥಿಗೆ ಕನ್ನಡಪರ ಸಂಘಟನೆಗಳ ಬೆಂಬಲ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ವೃತ್ತಿಯಲ್ಲಿ ಸಾಮಾಜಿಕ ಚಿಂತನೆ ಇಟ್ಟುಕೊಂಡು ಸ್ವಾರ್ಥವಿಲ್ಲದೆ ಬಡವ ಬಲ್ಲಿದ ಬೇಧ ಭಾವ ಇಲ್ಲದೆ ಸೇವೆ ಸಲ್ಲಿಸಿದ ಎನ್ ಡಿಎ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಅವರಿಗೆ 20ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಮನವಿ ಮಾಡಿದರು.

ರಾಮನಗರ: ವೃತ್ತಿಯಲ್ಲಿ ಸಾಮಾಜಿಕ ಚಿಂತನೆ ಇಟ್ಟುಕೊಂಡು ಸ್ವಾರ್ಥವಿಲ್ಲದೆ ಬಡವ ಬಲ್ಲಿದ ಬೇಧ ಭಾವ ಇಲ್ಲದೆ ಸೇವೆ ಸಲ್ಲಿಸಿದ ಎನ್ ಡಿಎ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಅವರಿಗೆ 20ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ, ಧರ್ಮ ನೋಡದೆ ಸೇವೆ ಸಲ್ಲಿಸಿದ ಮಂಜುನಾಥ್‌ ಅವರನ್ನು ಪಕ್ಷ ಮತ್ತು ಜಾತ್ಯತೀತವಾಗಿ ಅವಕಾಶ ನೀಡಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕು. ಡಾ.ಮಂಜುನಾಥ್ ಸಾಮಾಜಿಕ ಸೇವೆ ರಾಜ್ಯ ಮಾತ್ರವಲ್ಲ ದೇಶಕ್ಕೆ ಸಿಗಬೇಕು ಉದ್ದೇಶದಿಂದ ಕನ್ನಡಪರ ಸಂಘಟನೆಗಳು ಎನ್ ಡಿಎ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ ಎಂದು ಹೇಳಿದರು.

ಕಸ್ತೂರಿ ಜನಪರ ವೇದಿಕೆ ರಾಜ್ಯಾಧ್ಯಕ್ಷ ನೀಲೇಶ್ ಗೌಡ ಮಾತನಾಡಿ, ಕನ್ನಡಪರ ಸಂಘಟನೆಗಳು ನೆಲ ಜಲ ಭಾಷೆ ರಕ್ಷಣೆ ಮಾಡುತ್ತಿದ್ದ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ. ಈಗ 20ಕ್ಕೂ ಹೆಚ್ಚು ಕನ್ನಡಪರ ಸಂಘನೆಗಳು ಡಾ.ಮಂಜುನಾಥ್ ಅವರಿಗೆ ವ್ಯಕ್ತಿಗತವಾಗಿ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು.

ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ರತ್ನ ಇದ್ದಂತೆ. ಕೇಂದ್ರದಲ್ಲಿ ಆರೋಗ್ಯ ಸಚಿವರಾಗುವ ಅವಕಾಶವಿದ್ದು, ಇದರಿಂದ ಜಿಲ್ಲೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲಿದ್ದಾರೆ ಎಂದರು.

ಕರ್ನಾಟಕ ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಕನ್ನಡಪರ ಸಂಘಟನೆಗಳು ನಾಡಿನ ನೆಲ ಜಲ ಭಾಷೆ ಬಗ್ಗೆ ಹೋರಾಟ ಮಾಡಿಕೊಂಡು ಬಂದಿವೆ. ದೇಶದಲ್ಲಿ 543 ಕ್ಷೇತ್ರಗಳ ಅಭ್ಯರ್ಥಿಗಳ ಪೈಕಿ ಡಾ.ಮಂಜುನಾಥ್ ರವರು ಸಜ್ಜನ ವ್ಯಕ್ತಿಯಾಗಿದ್ದಾರೆ. ಇಡೀ ದೇಶ ಬೆಂಗಳೂರು ಗ್ರಾಮಾಂತರ ಕ್ಷೇತ್ರದತ್ತ ನೋಡುತ್ತಿದ್ದಾರೆ ಎಂದು ಹೇಳಿದರು.

ಈ ಕ್ಷೇತ್ರದ ಚುನಾವಣೆ ದೇಶದ ಗಮನ ಸೆಳೆದಿದೆ. ಇಲ್ಲಿ ಹಣ ಮತ್ತು ವ್ಯಕ್ತಿ ಪೈಕಿ ಯಾರಿಗೆ ಹೆಚ್ಚಿನ ಬೆಲೆ ಕೊಡುತ್ತಾರೆ ಎಂಬದನ್ನು ಇಡೀ ದೇಶ ಎದುರು ನೋಡುತ್ತಿದೆ. ಮತದಾರರು ಮಂಜುನಾಥ್ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಲೋಕೇಶ್ ಗೌಡ, ಬೆಟ್ಟಸ್ವಾಮಿ, ವಾಸು ಇತರರಿದ್ದರು.

ಯಾವ್ಯಾವ ಸಂಘಟನೆಗಳ ಬೆಂಬಲ:

ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಕನ್ನಡ ಮಂಜು, ಕರುನಾಡ ಸೇವಕ ರಾಜ್ಯಾಧ್ಯಕ್ಷ ಲೋಕೇಶಗೌಡ, ಕರ್ನಾಟಕ ಯುವ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸುನೀಲ್ , ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷರು ಟಿ.ರಮೇಶಗೌಡ, ಕರ್ನಾಟಕ ಕಾರ್ಮಿಕ ಪರೀಷತ ರಾಜ್ಯಾಧ್ಯಕ್ಷ ನಾರಾಯಣ, ಕರವೇ ಸ್ವಾಭಿಮಾನಿ ಬಣ ದ ಜಿಲ್ಲಾ ಉಪಾಧ್ಯಕ್ಷ ಬೆಟ್ಟೆಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸು ಜಿಲ್ಲಾ ಕಾರ್ಯದರ್ಶಿ ಮನು, ಪ್ರತತಾ, ರಮೇಶ ಅವರು ಎನ್ ಡಿಎ ಅಭ್ಯರ್ಥಿ ಕುಮಾರಸ್ವಾಮಿಗೆ ಬೆಂಬಲ ಸೂಚಿಸಿದ್ದಾರೆ.22ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.