ಸಾರಾಂಶ
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದೆ. ಹಿಂದುಳಿದವರು, ದೀನ ದಲಿತರು, ಬಡವರ ಏಳಿಗೆ ಬಯಸಿ ತಾಂಡಾಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.
ರಾಣಿಬೆನ್ನೂರು: ಜನಪರ ಯೋಜನೆಗಳೇ ಕಾಂಗ್ರೆಸ್ ಸರ್ಕಾರದ ಮೂಲಮಂತ್ರವಾಗಿವೆ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.ತಾಲೂಕಿನ ಚಳಗೇರಿ, ಖಂಡೇರಾಯನಹಳ್ಳಿ ತಾಂಡಾ, ಶ್ರೀನಿವಾಸಪುರ ತಾಂಡಾ, ಪದ್ಮಾವತಿಪುರ ತಾಂಡಾ, ಸಿದ್ದಾಪುರ ತಾಂಡಾ, ಗೋವಿಂದ ಬಡಾವಾಣೆ, ಹುಣಸಿಕಟ್ಟಿ ತಾಂಡಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 2023- 24ನೇ ಸಾಲಿನ ಎಸ್‌ಸಿಪಿ ಯೋಜನೆಯಡಿ ಸಿಸಿ ರಸ್ತೆ ಮತ್ತು ಸಿಸಿ ಗಟಾರ ಕಾಮಗಾರಿಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದೆ. ಹಿಂದುಳಿದವರು, ದೀನ ದಲಿತರು, ಬಡವರ ಏಳಿಗೆ ಬಯಸಿ ತಾಂಡಾಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಪ್ರತಿ ಗ್ರಾಮಕ್ಕೆ ಕುಡಿಯುವ ನೀರು, ಗಟಾರ, ರಸ್ತೆ, ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯವನ್ನು ಕಲ್ಪಿಸಲಾಗಿದೆ. ಜತೆಗೆ ಶಾಸಕರ ಅನುದಾನದಲ್ಲಿ ನಾನು ಕೂಡಾ ಶಿಕ್ಷಣಕ್ಕೆ ವಿಶೇಷವಾದ ಪ್ರಾಧಾನ್ಯತೆ ನೀಡಿದ್ದೇನೆ. ಈಗಾಗಲೇ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಲಾಗಿದೆ. ಮಕ್ಕಳ ಕೌಶಲ್ಯ ಹೆಚ್ಚಿಸಲು ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಲಾಗಿದ್ದು, ಮಕ್ಕಳ ಮನೋವಿಕಾಸಕ್ಕೆ, ಅವರ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗೆ ನೆರವಾಗಲಿದೆ ಎಂದರು.ಭೂಸೇನಾ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಸಿದ್ದೇಶ್ವರ ವಿ.ಎ., ಸಹಾಯಕ ಎಂಜಿನಿಯರ್ ವಿಕಾಸರೆಡ್ಡಿ, ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ಇಕ್ಬಾಲಸಾಬ್ ರಾಣೇಬೆನ್ನೂರ, ತಿರುಪತಿ ಅಜ್ಜನವರ, ಡಾಕೇಶ ಲಮಾಣಿ, ಓಬೇಶ ಲಮಾಣಿ, ಆನಂದಪ್ಪ ಲಮಾಣಿ, ಶಿವಪ್ಪ ಲಮಾಣಿ, ಮಲ್ಲೇಶಪ್ಪ ಲಮಾಣಿ, ಉಮಾ ಲಮಾಣಿ, ನೇತ್ರಾವತಿ ಲಮಾಣಿ, ಪರಸಪ್ಪ ತೋಟೇರ, ಸುಭಾಸ ಕೊಡ್ಲೇರ, ಬೀರಪ್ಪ ಲಮಾಣಿ, ಮಂಜುನಾಥ ರಾಹುತನಕಟ್ಟಿ ಮತ್ತಿತರರಿದ್ದರು.ನವನಗರ ಪ್ರದೇಶಕ್ಕೆ ಶಾಸಕ ಶ್ರೀನಿವಾಸ ಮಾನೆ ಭೇಟಿಹಾನಗಲ್ಲ: ಸ್ಥಳೀಯ ಪುರಸಭೆ ವ್ಯಾಪ್ತಿಯ ನವನಗರ ಪ್ರದೇಶಕ್ಕೆ ಶಾಸಕ ಶ್ರೀನಿವಾಸ ಮಾನೆ ಭೇಟಿ ನೀಡಿ ನಿವಾಸಿಗಳ ಕುಂದು, ಕೊರತೆ ಆಲಿಸಿದರು.
ಚರಂಡಿಯಲ್ಲಿ ಮಲೀನ ನೀರು ಹರಿದು ಮುಂದೆ ಹೋಗುತ್ತಿಲ್ಲ. ಹಾಗಾಗಿ ಸೊಳ್ಳೆಗಳ ಹಾವಳಿ ವಿಪರೀತವಾಗಿದೆ. ದುರ್ವಾಸನೆಯಿಂದ ಅಸಹಯನೀಯ ಸ್ಥಿತಿ ಎದುರಿಸುವಂತಾಗಿದೆ ಎಂದು ನಿವಾಸಿಗಳು ಗಮನ ಸೆಳೆದಾಗ ಸ್ಪಂದಿಸಿದ ಶಾಸಕ ಮಾನೆ, ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಿ. ಕಸ ಸಂಗ್ರಹಿಸುವ ವಾಹನವನ್ನು ನಿಯಮಿತವಾಗಿ ಕಳುಹಿಸುವ ವ್ಯವಸ್ಥೆ ಮಾಡಿ ಎಂದು ಸ್ಥಳದಲ್ಲಿದ್ದ ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ ಅವರಿಗೆ ಸೂಚಿಸಿದರು.ಪುರಸಭೆ ಮಾಜಿ ಅಧ್ಯಕ್ಷರಾದ ಖುರ್ಷಿದ್ ಹುಲ್ಲತ್ತಿ, ಮಮತಾ ಆರೆಗೊಪ್ಪ, ನಿವಾಸಿಗಳಾದ ವಿಷ್ಣುಕಾಂತ ಬಾಬಜಿ, ಬಸಣ್ಣ ಹಾನಗಲ್, ಉಮೇಶ ಮಾಳಗಿ, ರಮೇಶ ವಾಗಮುಡಿ ಸೇರಿದಂತೆ ಇನ್ನೂ ಹಲವರು ಇದ್ದರು.