ಸಾರಾಂಶ
ವಿವಿಧ ರಂಗಗಳಲ್ಲಿ ಉತ್ತಮ ಶಿಕ್ಷಣ ಪಡೆದು ಬಂದಾಗ ಮಾತ್ರ ಸಮಾಜ, ದೇಶ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಶಾಸಕರು ಹೇಳಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಮಕ್ಕಳಿಗೆ ಜೀವನದಲ್ಲಿ ಪ್ರೌಢಶಾಲೆ ಬಹಳ ಪ್ರಮುಖ ಘಟ್ಟವಾಗಿದೆ. ಜ್ಞಾನವುಳ್ಳವರನ್ನು ಪ್ರಪಂಚವು ಕೈಬೀಸಿ ಕರೆಯುತ್ತದೆ. ನಮ್ಮ ಸಮಸ್ಯೆ ಪರಿಹರಿಸಕೊಳ್ಳಬೇಕಾದರೆ ಶಿಕ್ಷಣ ಪಡೆಯಬೇಕು ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.ಇಲ್ಲಿನ ಹುಲಿಗೆಪ್ಪ ಶಾಲಾವರಣದಲ್ಲಿ ಶಾಲೆ ಹಾಗೂ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ರಂಗಗಳಲ್ಲಿ ಉತ್ತಮ ಶಿಕ್ಷಣ ಪಡೆದು ಬಂದಾಗ ಮಾತ್ರ ಸಮಾಜ, ದೇಶ ಅಭಿವೃದ್ಧಿ ಹೊಂದಲು ಸಾಧ್ಯವೆಂದರು.
ಗುರುಮಠಕಲ್ ಖಾಸಮಠದ ಶಾಂತವೀರ ಸ್ವಾಮೀಜಿ ಮಾತನಾಡಿ, ಶಿಕ್ಷಕರು ದೇಶದ ನಿರ್ಮಾಪಕರಾಗಿದ್ದು, ಶಿಕ್ಷಕರು ಮಕ್ಕಳಿಗೆ ಮೌಲ್ಯಯುತ ಸಂಸ್ಕಾರಯುತ ಶಿಕ್ಷಣ ನೀಡಬೇಕು. ಜೀವನದಲ್ಲಿ ಯಾವಾಗಲೂ ದೊಡ್ಡ ಗುರಿಯಿಂದ ನಿರಂತರ ಪ್ರಯತ್ನ ಮಾಡಿ ಗುರಿ ತಲುಪಬೇಕು ಎಂದರು.ಸಭೆಯ ಅಧ್ಯಕ್ಷತೆ ಮಲ್ಲಿಕಾರ್ಜುನ್ ಕಾಡ್ಲೂರು ವಹಿಸಿದರು. ಮಹಿಳಾ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಸರ್ವೋದಯ ಶಿವಪುತ್ರ, ನಗರಸಭೆ ಸದಸ್ಯ ಗಣೇಶ್ ದುಪ್ಪಲ್ಲಿ, ಶಿಕ್ಷಣ ಇಲಾಖೆ ಅಧಿಕಾರಿ ಅಶೋಕ್ ಕಡತದ್, ಬಾಬುರಾವ್ ಕಾಡ್ಲೂರು, ಬಸವಂತರಾವ್ ಕಾಡ್ಲೂರ್ ಇತರರಿದ್ದರು.