ಕಾರಿಂಜ ದೇವಸ್ಥಾನಕ್ಕೆ ಬ್ರಹ್ಮರಥ, ರಜತ ಪುಷ್ಪಕನ್ನಡಿ ಸಮರ್ಪಣಾ ಮೆರವಣಿಗೆ

| Published : Sep 15 2024, 01:50 AM IST

ಕಾರಿಂಜ ದೇವಸ್ಥಾನಕ್ಕೆ ಬ್ರಹ್ಮರಥ, ರಜತ ಪುಷ್ಪಕನ್ನಡಿ ಸಮರ್ಪಣಾ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮೆರವಣಿಗೆ ಬಿ.ಸಿ. ರೋಡಿನಿಂದ -ವಗ್ಗ - ಕಾವಳಕಟ್ಟೆ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಬಳಿಕ ಎನ್.ಸಿ. ರೋಡು- ಕೆದ್ದಳಿಕೆ ಮಾರ್ಗವಾಗಿ ಕಾರಿಂಜ ಕ್ಷೇತ್ರಕ್ಕೆ ತಲುಪಿತು. ಇದಕ್ಕೂ ಮುನ್ನ ಶ್ರೀರಕ್ತೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಐತಿಹಾಸಿಕ ಹಿನ್ನೆಲೆಯ ಬಂಟ್ವಾಳ ತಾಲೂಕಿನ ಮಹತೋಭಾರ ಶ್ರೀಕಾರಿಂಜ ಪಾರ್ವತಿ ಪರಮೇಶ್ವರ ದೇವಸ್ಥಾನಕ್ಕೆ ನಿರ್ಮಾಣಗೊಂಡ ನೂತನ ಬ್ರಹ್ಮರಥ ಹಾಗೂ ಉತ್ಸವ ಮೂರ್ತಿಗಳ ಬೆಳ್ಳಿಯ ಪುಪ್ಪಕನ್ನಡಿ (ಪ್ರಭಾವಳಿ) ಸಮರ್ಪಣಾ ಮೆರವಣಿಗೆಗೆ ಬಿ.ಸಿ. ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನ ಬಳಿ ಚಾಲನೆ ನೀಡಲಾಯಿತು.

ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ನಾಗರಾಜ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಕಾರಿಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ರಥ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಾರಾಮ ನಾಯಕ್, ಪ್ರಮುಖರಾದ ವೆಂಟರಮಣ ಮುಚ್ಚಿನ್ನಾಯ, ಗಣಪತಿ ಮುಚ್ಚಿನ್ನಾಯ, ರಥ ನಿರ್ಮಾಣದ ಶಿಲ್ಪಿ ರಾಜಗೋಪಾಲಾಚಾರ್ಯ ಕೋಟೇಶ್ವರ ಮತ್ತಿತರ ಪ್ರಮುಖರು ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.ವಿವಿಧ ವಾದ್ಯಗೋಷ್ಠಿ, ಚೆಂಡೆ, ಸ್ಥಳೀಯ ಸಂಘಸಂಸ್ಥೆ,ಹಿಂದೂಪರ ಸಂಘಟನೆಯ ಕಾರ್ಯಕರ್ತರ ವಾಹನ, ಬೈಕ್ ಜಾಥದೊಂದಿಗೆ ಬ್ರಹ್ಮರಥ ಹಾಗೂ ಪುಪ್ಪಕನ್ನಡಿಯ ಭವ್ಯ ಮೆರವಣಿಗೆ ಬಿ.ಸಿ. ರೋಡಿನಿಂದ -ವಗ್ಗ - ಕಾವಳಕಟ್ಟೆ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಬಳಿಕ ಎನ್.ಸಿ. ರೋಡು- ಕೆದ್ದಳಿಕೆ ಮಾರ್ಗವಾಗಿ ಕಾರಿಂಜ ಕ್ಷೇತ್ರಕ್ಕೆ ತಲುಪಿತು. ಇದಕ್ಕೂ ಮುನ್ನ ಶ್ರೀರಕ್ತೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಕಾವಳಮೂಡೂರು‌ ಗ್ರಾ.ಪಂ. ಅಧ್ಯಕ್ಷ ಅಜಿತ್ ಶೆಟ್ಟಿ, ಉಪಾಧ್ಯಕ್ಷ ಪ್ರಶಾಂತ್, ಪ್ರಮುಖರಾದ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ದೇವದಾಸ ಶೆಟ್ಟಿ ಬಂಟ್ವಾಳ, ಪ್ರಸಾದ್ ಕುಮಾರ್ ರೈ, ಸರಪಾಡಿ‌ ಆಶೋಕ್ ಶೆಟ್ಟಿ, ರಾಧಾಕೃಷ್ಣ ಅಡ್ಯಂತಾಯ, ಪ್ರಶಾಂತ್ ಕೆಂಪುಗುಡ್ಡೆ, ಚೆನ್ನಪ್ಪ ಆರ್. ಕೋಟ್ಯಾನ್, ದಿನೇಶ್ ಅಮ್ಟೂರು ಮತ್ತಿತರರು ಉಪಸ್ಥಿತರಿದ್ದರು.