ಪ್ರೊ. ಭಗವಾನ್ ಒಕ್ಕಲಿಗರ ಕ್ಷಮೆಯಾಚಿಸಲಿ

| Published : Oct 20 2023, 01:00 AM IST

ಸಾರಾಂಶ

ಹೊಸಕೋಟೆ: ಚಿಂತಕರು ಹಾಗೂ ಪ್ರೊ.ಆದಂತಹ ಭಗವಾನ್ ಅವರು ಮಹಿಷ ದಸರಾ ಉದ್ಘಾಟನೆ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯವನ್ನು ಕುರಿತು ಒಕ್ಕಲಿಗರು ಸಂಸ್ಕೃತಿಹೀನರು ಎಂದು ಅವಮಾನಿಸಿದ್ದಾರೆ. ಆದ್ದರಿಂದ ಒಕ್ಕಲಿಗ ಸಮುದಾಯದ ಕ್ಷಮೆ ಕೇಳಬೇಕು ಎಂದು ಒಕ್ಕಲಿಗ ಸಮುದಾಯದ ಯುವ ಮುಖಂಡ ಕೋಡಿಹಳ್ಳಿ ಜನಾರ್ದನ್ ಒತ್ತಾಯಿಸಿದರು.
ಹೊಸಕೋಟೆ: ಚಿಂತಕರು ಹಾಗೂ ಪ್ರೊ.ಆದಂತಹ ಭಗವಾನ್ ಅವರು ಮಹಿಷ ದಸರಾ ಉದ್ಘಾಟನೆ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯವನ್ನು ಕುರಿತು ಒಕ್ಕಲಿಗರು ಸಂಸ್ಕೃತಿಹೀನರು ಎಂದು ಅವಮಾನಿಸಿದ್ದಾರೆ. ಆದ್ದರಿಂದ ಒಕ್ಕಲಿಗ ಸಮುದಾಯದ ಕ್ಷಮೆ ಕೇಳಬೇಕು ಎಂದು ಒಕ್ಕಲಿಗ ಸಮುದಾಯದ ಯುವ ಮುಖಂಡ ಕೋಡಿಹಳ್ಳಿ ಜನಾರ್ದನ್ ಒತ್ತಾಯಿಸಿದರು. ತಾಲೂಕಿನ ಕೋಡಿಹಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಸಮುದಾಯ ಎಂದರೆ ಶ್ರಮಿಕ ವರ್ಗಕ್ಕೆ ಸೇರಿದವರು. ಒಕ್ಕಲುತನವನ್ನೇ ಜೀವನಾಡಿಯನ್ನಾಗಿ ಮಾಡಿಕೊಂಡು ಸಂಸ್ಕೃತಿ ಪರಂಪರೆಯ ಮೂಲಕ ಬೇಸಾಯ ಮಾಡುತ್ತಾ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುವುದರ ಮೂಲಕ ಇಡೀ ದೇಶಕ್ಕೆ ಅನ್ನ ಕೊಡುವ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇಂತಹ ಸಮುದಾಯದ ಬಗ್ಗೆ ಪ್ರೊಫೆಸರ್ ಭಗವಾನ್ ರವರು ಸಂಸ್ಕೃತಿ ಹೀನರು ಎಂಬ ಪದ ಬಳಕೆ ಮಾಡುವುದರ ಮೂಲಕ ಸಮುದಾಯಕ್ಕೆ ಅಗೌರವ ತಂದಿದ್ದಾರೆ. ಭಗವಾನ್‌ ಓರ್ವ ಪ್ರೊಫೆಸರ್ ಆಗಿ, ಚಿಂತಕರಾಗಿ ಒಂದು ಸಮುದಾಯದ ವಿರುದ್ಧ ಈ ರೀತಿಯ ಹೇಳಿಕೆ ಕೊಡುವುದು ಸಮಂಜಸವಲ್ಲ. ಸಮಾಜ ಅಂಕುಡೊಂಕುಗಳನ್ನು ತಿದ್ದಬೇಕಾದ ಬುದ್ಧಿಜೀವಿಗಳೇ ಇಂತಹ ಹೇಳಿಕೆಗಳ ಮೂಲಕ ಸಮಾಜದ ಲ್ಲಿ ಘರ್ಷಣೆಗಳಿಗೆ ಅವಕಾಶ ಕಲ್ಪಿಸಿಕೊಡುವುದು ಸರಿಯಲ್ಲ. ಆದ್ದರಿಂದ ಪ್ರೊ. ಭಗವಾನ್ ಒಕ್ಕಲಿಗ ಸಮುದಾಯದ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಹೊಸಕೋಟೆ ನಗರದಲ್ಲಿ ಪ್ರತಿಭಟನೆ ಮಾಡುವುದರ ಮೂಲಕ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡುತ್ತೇವೆ ಎಂದು ತಿಳಿಸಿದರು. ಫೋಟೋ : 19 ಹೆಚ್‌ಎಸ್‌ಕೆ 1 ಹೊಸಕೋಟೆ ತಾಲೂಕಿನ ಕೋಡಿಹಳ್ಳಿಯಲ್ಲಿ ಒಕ್ಕಲಿಗ ಸಮುದಾಯದ ಯುವ ಮುಖಂಡ ಕೋಡಿಹಳ್ಳಿ ಜನಾರ್ದನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.