ಸಾರಾಂಶ
ಪ್ರೊ.ಸಂಜಯ ಖೋತ ಅವರು ಆಂಗ್ಲ ಭಾಷಾ ವಿಷಯದಲ್ಲಿ ಅಪಾರ ಪಾಂಡಿತ್ಯ ಉಳ್ಳವರಾಗಿದ್ದು. 37 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ನಿರಂತರ ಬೋಧನೆ ಮಾಡಿ ವಿದ್ಯಾರ್ಥಿಗಳ ಜ್ಞಾನ ಧಾರೆ ಎರೆದಿದ್ದಾರೆ. ಮಹಾವಿದ್ಯಾಲಯ ಅಭಿವೃದ್ಧಿಗೂ ಶ್ರಮಿಸಿದ್ದಾರೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ ಹೇಳಿದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ಪ್ರೊ.ಸಂಜಯ ಖೋತ ಅವರು ಆಂಗ್ಲ ಭಾಷಾ ವಿಷಯದಲ್ಲಿ ಅಪಾರ ಪಾಂಡಿತ್ಯ ಉಳ್ಳವರಾಗಿದ್ದು. 37 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ನಿರಂತರ ಬೋಧನೆ ಮಾಡಿ ವಿದ್ಯಾರ್ಥಿಗಳ ಜ್ಞಾನ ಧಾರೆ ಎರೆದಿದ್ದಾರೆ. ಮಹಾವಿದ್ಯಾಲಯ ಅಭಿವೃದ್ಧಿಗೂ ಶ್ರಮಿಸಿದ್ದಾರೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ ಹೇಳಿದರು.ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆಂಗ್ಲ ಬಾಷಾ ಸಹ ಪ್ರಾಧ್ಯಾಪಕ ಪ್ರೊ.ಸಂಜಯ ಬಿ.ಖೋತ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಮೂಡಲಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ,ವಿದ್ಯಾರ್ಥಿ ಹಾಗೂ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಪ್ರೊ.ಸಂಜಯ ಖೋತ ಸತ್ಕಾರ ಸ್ವೀಕರಿಸಿ ಮಾತನಾಡಿ, ಮೂಡಲಗಿ ಶಿಕ್ಷಣ ಸಂಸ್ಥೆ ನಮಗೆ ಪವಿತ್ರವಾದ ಪ್ರಾಧ್ಯಾಪಕ ವೃತ್ತಿಯನ್ನು ನೀಡಿ ಬದುಕಿಗೆ ದಾರಿ ಮಾಡಿಕೊಟ್ಟಿದೆ. ನನ್ನ 37 ವರ್ಷಗಳ ವೃತ್ತಿ ಜೀವನದಲ್ಲಿ ಒಂದು ದಿನವು ವರ್ಗಗಳನ್ನು ತಪ್ಪಿಸದೇ ಸೇವೆ ಮಾಡಿದ ತೃಪ್ತಿ ಇದ್ದು. ಅಪಾರ ವಿದ್ಯಾರ್ಥಿ ಬಳಗ ನನ್ನ ಜೊತೆಗಿದ್ದು, ನನ್ನ ಕೊನೆ ಉಸಿರು ಇರುವವರೆಗೂ ಶಿಕ್ಷಣ ಸಂಸ್ಥೆಯನ್ನು ಮರೆಯುವದಿಲ್ಲ ಎಂದರು.ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ರವೀಂದ್ರ ಸೋನವಾಲಕರ, ನಿರ್ದೇಶಕರಾದ ಅಪ್ಪಾಸಾಹೇಬ ಹೊಸಕೋಟಿ, ಎಸ್.ಆರ್.ಸೋನವಾಲಕರ, ಬಿ.ಎಚ್. ಸೋನವಾಲಕರ ಇದ್ದರು.
ಗ್ರಂಥಪಾಲಕ ಡಾ.ಬಸವಂತ ಬರಗಾಲಿ, ಭಾರತಿ ತಳವಾರ, ಎ.ಎಸ್.ಮೀಸಿನಾಯಕ, ಸವಿತಾ ಕೊತ್ತಲ, ಪ್ರೀತಿ ಬೆಳಗಲಿ, ಸಿದ್ರಾಮ ಸವಸುದ್ದಿ, ವಿಷ್ಣು ಬಾಗಡಿ, ಅರ್ಜುನ ಗಸ್ತಿ, ಲಕ್ಷ್ಮಣ ನಂದಿ, ಮನೋಹರ ಲಮಾಣಿ, ಪಾಂಡು ಬುದ್ನಿ, ರಮೇಶ ಖಾನಪ್ಪಗೋಳ, ಕಲಮೇಶ ಇಂಗಳೆ, ವಿದ್ಯಾರ್ಥಿಗಳು, ಅಭಿಮಾನಿ ಬಳಗದವರು ಉಪಸ್ಥಿತರಿದ್ದರು. ಪ್ರೊ.ಜಿ.ವಿ.ನಾಗರಾಜ ಸ್ವಾಗತಿಸಿದರು, ಪ್ರೊ.ಲೋಕೇಶ ಹಿಡಕಲ್ ನಿರೂಪಿಸಿದರು, ಡಾ.ಎಸ್.ಎಲ್ ಚಿತ್ರಾಗರ ವಂದಿಸಿದರು.