ಸಾರಾಂಶ
ದೊಡ್ಡೆತ್ತಿನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 2024-25ನೇ ಸಾಲಿನಲ್ಲಿ ₹6,74,415 ಲಾಭಾಂಶ ಗಳಿಸಿದೆ ಎಂದು ಶಿವಮೊಗ್ಗ ಹಾಲು ಒಕ್ಕೂಟ ಮಾರ್ಗ ವಿಸ್ತರಣಾಧಿಕಾರಿ ವಸಂತ್‌ಕುಮಾರ್ ನ್ಯಾಮತಿಯಲ್ಲಿ ಹೇಳಿದ್ದಾರೆ.
- 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ
- - -ನ್ಯಾಮತಿ: ದೊಡ್ಡೆತ್ತಿನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 2024-25ನೇ ಸಾಲಿನಲ್ಲಿ ₹6,74,415 ಲಾಭಾಂಶ ಗಳಿಸಿದೆ ಎಂದು ಶಿವಮೊಗ್ಗ ಹಾಲು ಒಕ್ಕೂಟ ಮಾರ್ಗ ವಿಸ್ತರಣಾಧಿಕಾರಿ ವಸಂತ್‌ಕುಮಾರ್ ಹೇಳಿದರು. ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮದಲ್ಲಿ ಬುಧವಾರ ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸದರಿ ಸಹಕಾರ ಸಂಘದಲ್ಲಿ ಒಟ್ಟು ಸದಸ್ಯರು 190 ಇದ್ದು, ಅವರಲ್ಲಿ 125 ಸದಸ್ಯರು ಹಾಲು ಹಾಕುತ್ತಿದ್ದಾರೆ. 2024-25ನೇ ಸಾಲಿನಲ್ಲಿ ಸಂಘವು ₹12,58,497.95 ವ್ಯಾಪಾರ ವಹಿವಾಟು ನಡೆಸಿ, ₹5,93,809 ನಿರ್ವವಣಾ ವೆಚ್ಚ ಕಳೆದು ₹6,74,415 ನಿವ್ವಳ ಲಾಭಾಂಶ ಕಂಡಿದೆ ಎಂದರು. ಹೈನುಗಾರಿಕೆಯಲ್ಲಿ ಲಾಭಾಂಶ ಪಡೆಯಲು ರಾಸುಗಳಿಗೆ ಪ್ರತಿದಿನ ಸಮಯ ನಿಗದಿಪಡಿಸಿ, ಮೇವು ಹಾಕಬೇಕು. ರಾಸುಗಳಿಗೆ ಕೆಚ್ಚಲು ಬಾವು ಬಂದಾಗ ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸಬೇಕು. ಕರುಗಳನ್ನು ಸರಿಯಾಗಿ ಸಾಕಲು ಅಗತ್ಯ ಮಾಹಿತಿ ತಿಳಿದಿರಬೇಕು. ರಾಸುಗಳು ಗರ್ಭ ಧರಿಸಿದ ಮೇಲೆ ಸರಿಯಾಗಿ ಪೋಷಣೆ ಮಾಡಬೇಕು. ಹಾಲು ಉತ್ಪಾದಕರ ಸಹಕಾರ ಸಂಘ ಕಾಯ್ದೆ ಬಗ್ಗೆ ತಿಳಿದಿರಬೇಕು ಎಂದು ಸದಸ್ಯರಿಗೆ ಮಾಹಿತಿ ನೀಡಿದರು.ಸಭೆಯಲ್ಲಿ ಬಿ.ಮಲ್ಲಪ್ಪ, ಟಿ.ಬಸವಣ್ಯಪ್ಪ, ಕೆ.ರಾಜಪ್ಪ, ಎಂ.ಶೇಖರಪ್ಪ, ಕೆ.ದಾನಪ್ಪ ಮತ್ತು ಸದಸ್ಯರು ಇದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಡಿ.ಎಂ.ಪ್ರವೀಣ ಸ್ವಾಗತಿಸಿ, ವಂದಿಸಿದರು.
- - -