ಸಾರಾಂಶ
ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯ ವಿಶ್ರಾಂತ ಉಪ ಕುಲಪತಿ ವಿದ್ವಾನ್ ಡಾ. ಪರಮೇಶ್ವರ ನಾರಾಯಣ ಶಾಸ್ತ್ರೀ ಅವರು ಸಂಸ್ಥೆಯ ಪರವಾಗಿ ಎಲ್ಲ ವಿದ್ವಾಂಸರನ್ನು ಸಮ್ಮಾನಿಸುವರು.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಶಂಕರಮಠ ರಸ್ತೆಯಲ್ಲಿರುವ ವೇದ ಶಾಸ್ತ್ರ ಪೋಷಿಣಿ ಸಭಾ ವತಿಯಿಂದ ಮಾ. 10ರ ಸಂಜೆ 4.30ಕ್ಕೆ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ರಾಜ್ಯಸ್ತರಿಯ ವಿದ್ವತ್ಸಂಮಾನ ಪ್ರದಾನ ಸಮಾರಂಭ ನಡೆಯಲಿದ್ದು, 10 ಅರ್ಹ ವೇದ-ಶಾಸ್ತ್ರ ವಿದ್ವಾಂಸರನ್ನು ಸನ್ಮಾನಿಸಲಿದೆ.ಮೊದನೆಯ ನಾಲ್ವರಿಗೆ ವೇದವಿದ್ಯಾನಿಧಿ ಹಾಗೂ ಇನ್ನುಳಿದ 6 ಮಂದಿಗೆ ಶಾಸ್ತ್ರವಿದ್ಯಾನಿಧಿ ಬಿರುದಿನೊಂದಿಗೆ ತಲಾ 35 ಸಾವಿರ ರು.ಗಳ ಗೌರವಧನ ನೀಡಿ ಸಪತ್ನಿಕರಾಗಿ ಸಮ್ಮಾನಿಸಲಿದೆ.
ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯ ವಿಶ್ರಾಂತ ಉಪ ಕುಲಪತಿ ವಿದ್ವಾನ್ ಡಾ. ಪರಮೇಶ್ವರ ನಾರಾಯಣ ಶಾಸ್ತ್ರೀ ಅವರು ಸಂಸ್ಥೆಯ ಪರವಾಗಿ ಎಲ್ಲ ವಿದ್ವಾಂಸರನ್ನು ಸಮ್ಮಾನಿಸುವರು.ಸಮ್ಮಾನ ಸ್ವೀಕರಿಸಲಿರುವ ವಿದ್ವಾಂಸರ ವಿವರ- ಎಸ್.ಎನ್. ಶ್ರೀನಿವಾಸಮೂರ್ತಿ- ಶಿವಮೊಗ್ಗ, ಕೃಷ್ಣ ಮಾಣೇಶ್ವರ ಜೋಗಭಟ್ಟ- ಗೋಕರ್ಣ, ಪುಟ್ಟಯ್ಯ ನಾರಾಯಣ ಭಟ್ಟ- ಸಾಗರ, ಕೆ.ಆರ್. ಮಂಜುನಾಥ ಶ್ರೌತಿ- ಮೈಸೂರು, ಡಾ. ಗೋಪಾಲಕೃಷ್ಣ ಭಟ್ಟ- ಮಂಗಳೂರು, ಡಾ.ಕೆ. ಶ್ರೀಧರ್ ಮೇಲುಕೋಟೆ- ಬೆಂಗಳೂರು, ಡಾ.ಎನ್. ಲಕ್ಷ್ಮಿ ನಾರಾಯಣ ಭಟ್ಟ, -ಉಡುಪಿ, ಡಾ.ಎ. ರಾಮಸ್ವಾಮಿ ಅಯ್ಯಂಗಾರ್- ಬೆಂಗಳೂರು, ಎಚ್.ಸಿ. ಬಾಲಚಂದ್ರಶಾಸ್ತ್ರೀ- ಶಿರಸಿ, ಮಧುಸೂದನ ಶಾಸ್ತ್ರೀ, ಹಂಪೀಹೊಳಿ- ಧಾರವಾಡ.
--------