ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ವಿಪ್ರರು ಒಗ್ಗೂಡಿ ಶ್ರಮಿಸಿದಾಗ ಸಮುದಾಯದ ಪ್ರಗತಿ ಸುಲಭ ಸಾಧ್ಯ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.ಮಧುಗಿರಿಯಲ್ಲಿ ಭಾನುವಾರ ವಿಪ್ರ ಸೇವಾ ಟ್ರಸ್ಟ್ ಹಾಗೂ ತಾಲೂಕು ಬ್ರಾಹ್ಮಣ ಸಭಾದಿಂದ ಪಟ್ಟಣದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ತಾಲೂಕು ಬ್ರಾಹ್ಮಣ ಸಭಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವಕರು ಹಿರಿಯರ ಸಲಹೆ, ಸಹಕಾರ , ಮಾರ್ಗದರ್ಶನದಲ್ಲಿ ಸಭೆ ಸಮಾರಂಭಗಳನ್ನು ನಡೆಸುವ ಮೂಲಕ ಸಮುದಾಯ ಸಂಘಟಿತವಾಗಬೇಕು. ವಿಪ್ರ ಸಮುದಾಯಕ್ಕೆ ವಿಧ್ಯೆ,ಜ್ಞಾನ ಸಂಪತ್ತು ರಕ್ತಗತವಾಗಿ ಬಂದಿದ್ದು, ಯುವ ಜನಾಂಗ ಹೆಚ್ಚು ವಿದ್ಯಾವಂತರಾಗಬೇಕು. ವಿಪ್ರರು ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲ ರಂಗಗಳಲ್ಲೂ ಭಾಗವಹಿಸುವ ನಿಟ್ಟಿನಲ್ಲಿ ಸಮುದಾಯದ ಏಳಿಗೆ ಕಾಣಲು ಸುಲಭ ಸಾಧ್ಯ ಎಂದರು.
ಬ್ರಾಹ್ಮಣ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ಕೊಡಿಸಲು ನಾನು ಹಾಗೂ ಸಚಿವ ದಿನೇಶ್ ಗುಂಡೂರಾವ್ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸುವುದಾಗಿ ಸಚಿವ ರಾಜಣ್ಣ ಭರವಸೆ ನೀಡಿದರು.ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ಅಧ್ಯಕ್ಷ ಎಸ್,ರಘುನಾಥ್ ಮಾತನಾಡಿ, ಈ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನಮ್ಮ ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ಇಲ್ಲಿನ ಬ್ರಾಹ್ಮಣರನ್ನು ಸಂಘಟಿಸುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ರಾಜ್ಯ ಸಂಘಕ್ಕೂ ಹೆಚ್ಚು ಸದಸ್ಯರನ್ನು ನೊಂದಾಯಿಸುವಂತೆ ಮನವಿ ಮಾಡಿದ ಅವರು,ಬ್ರಾಹ್ಮಣರು ಹತ್ತಾರು ವಿಚಾರ ಧಾರೆಗಳನ್ನು ತಿಳಿದುಕೊಳ್ಳುವ ಮೂಲಕ ಜ್ಞಾನ ಸಂಪಾದಿಸಿಕೊಳ್ಳುವ ಜೊತೆಗೆ ತಾಲೂಕು ಬ್ರಾಹ್ಮಣ ಸಭಾ ಪ್ರಬಲ ಸಂಘಟನೆಯಾಗಿ ಬೆಳೆಸಲು ಇಂದಿನ ಯುವಕರು ಮುಂದಾಗಬೇಕು ಎಂದರು.
ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಪಿ.ದತ್ತಾತ್ರೇಯ ಮಾತನಾಡಿ, ನಮ್ಮ ಸಮುದಾಯದ ಅಭ್ಯುದಯಕ್ಕಾಗಿ ಈ ಸಂಘ ಸ್ಥಾಪಿಸಲಾಗಿದೆ. ನಾವುಗಳೆಲ್ಲಾ ವಿಪ್ರರು ಎಂಬ ಭಾವನೆಯನ್ನು ನಮ್ಮ ಸಮುದಾಯದವರು ಮೈಗೂಡಿಸಿಕೊಂಡು ನಮ್ಮಲ್ಲಿರುವ ಕಡು ಬಡವರಿಗೆ ಸಹಾಯ ಹಸ್ತ ನೀಡುವ ಸದುದ್ದೇಶದಿಂದ ಈ ಸಂಘವನ್ನು ಹುಟ್ಟು ಹಾಕಿದ್ದು, ನಮ್ಮ ಬ್ರಾಹ್ಮಣ ಸಭಾ ರಾಜ್ಯಾಧ್ಯಕ್ಷರು ರಾಜ್ಯ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ನಮ್ಮ ಜನರಿಗೆ ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದರು.ವಿದ್ವಾಂಸ ಪಾವಗಡ ಪ್ರಕಾಶ್ ರಾವ್ ಮಾತನಾಡಿ, ಬ್ರಾಹ್ಮಣರು ತಮ್ಮ ಜೀವನದಲ್ಲಿ ಉತ್ತಮ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಗೌರವ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿದೇಶಿ ಉದ್ಯೋಗದ ವ್ಯಾಮೋಹದಿಂದ ಪಾಶ್ಚಿಮಾತ್ಯರ ಆಕರ್ಷಣೆ ಹೆಚ್ಚಾಗಿ ಪಾಶ್ಚಿಮಾತ್ಯ ಅನುಕರಣೆಯಿಂದಾಗಿ ನಮ್ಮ ಕರ್ಮಗಳನ್ನು ಮಾಡದೇ ಆಚಾರ ವಿಚಾರಗಳಿಂದ ವಿಮುಕರಾಗುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆ ಸಮುದಾಯದ ಸಂಸ್ಕಾರ ಸಂಪ್ರದಾಯಗಳನ್ನು ಪಾಲಿಸಲು ಸಂಘಟನೆಗಳು ಅತ್ಯಗತ್ಯ ಎಂದರು.
ಸಮಾರಂಭದಲ್ಲಿ ನಿವೃತ್ತ ನ್ಯಾಯಾಧೀಶ ಬಾಲಕೃಷ್ಣ ,ಸಂಘದ ಹಿರಿ ಉಪಾಧ್ಯಕ್ಷರಾದ ಲಕ್ಷ್ಮೀಕಾಂತ್, ಶಿರಾಂ, ಸುದರ್ಶನ್ಂ , ಅಡಿಟರ್ ಲಕ್ಷ್ಮೀಪ್ರಸಾದ್, ಜಿಲ್ಲಾಧ್ಯಕ್ಷ ಚಂದ್ರಶೇಖರ್, ಪ್ರತಿನಿಧಿ ಹರೀಶ್, ಗೌರವಾಧ್ಯಕ್ಷ ಬಿ.ಆರ್.ಸತ್ಯನಾರಾಯಣ್, ವಕೀಲರಾದ ಹೊಸಕೆರೆ ಮಂಜುನಾಥ್, ಬಿ.ಎಸ್.ರವೀಶ್ , ಕೆ.ನಾಗರಾಜಶಾಸ್ತ್ರಿ, ತಾಲೂಕು ಪ್ರತಿನಿಧಿ ಎಸ್.ಎ.ಶ್ಯಾಮನಾಥ್,ಪುರಸಭಾ ಸದಸ್ಯ ಕೆ.ನಾರಾಯಣ್ ಹಾಗೂ ಪದಾಧಿಕಾರಿಗಳು, ವಿಪ್ರ ಬಂಧುಗಳು ಇದ್ದರು.)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))