ದೊಡ್ಡಬಳ್ಳಾಪುರ: ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ, ಹೋರಾಟ, ಪರಿಶ್ರಮ ಮತ್ತು ಸಾಧನೆಯು ಎಲ್ಲರಿಗೂ ಮಾದರಿಯಾಗಿದೆ ಎಂದು ಅಸ್ಸಾಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಶಶಿಕುಮಾರ್ ತಿಳಿಸಿದರು

ದೊಡ್ಡಬಳ್ಳಾಪುರ: ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ, ಹೋರಾಟ, ಪರಿಶ್ರಮ ಮತ್ತು ಸಾಧನೆಯು ಎಲ್ಲರಿಗೂ ಮಾದರಿಯಾಗಿದೆ ಎಂದು ಅಸ್ಸಾಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಶಶಿಕುಮಾರ್ ತಿಳಿಸಿದರು. ಅವರು ದೊಡ್ಡಬಳ್ಳಾಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಮಾದರ ಮಹಾಸಭಾ ಮತ್ತು ವಿಶ್ವಜ್ಞಾನಿ ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಪ್ರೇರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗ ಅಗತ್ಯವಾಗಿರುತ್ತದೆ. ವಿದ್ಯಾವಂತರು ತಮ್ಮ ಸಮುದಾಯಗಳ ಹಿತ ಕಾಪಾಡುವ ಕಡೆಗೆ ಆದ್ಯತೆ ನೀಡಬೇಕು. ತಾವು ಪಡೆದ ಜ್ಞಾನವನ್ನು ಸಮಾಜದ ಒಳಿತಿಗಾಗಿ, ವಿಶೇಷವಾಗಿ ತಳಸಮುದಾಯದವರ ಉದ್ಧಾರಕ್ಕಾಗಿ ಬಳಸಬೇಕು. ಪ್ರತಿಯೊಬ್ಬ ಸುಶಿಕ್ಷಿತರು‌ ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಮರೆಯಬಾರದು ಎಂದರು.

ಪ್ರೇರಣಾ‌ ಉಪನ್ಯಾಸ ನೀಡಿದ ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿ ಕೆ.ಆರ್.ಚೆನ್ನಕೇಶವಮೂರ್ತಿ, ಯಶಸ್ಸು ಮತ್ತು ಸಾಧನೆಗೆ ಪರಿಶ್ರಮವೇ ಮೂಲಾಧಾರ. ಕಠಿಣ ಪರಿಶ್ರಮ, ಸತತ ಪ್ರಯತ್ನ, ಮತ್ತು ಅಚಲವಾದ ಗುರಿಯಿದ್ದರೆ ಮಾತ್ರ ಜೀವನದಲ್ಲಿ ಯಾವುದೇ ಉನ್ನತ ಶಿಖರವನ್ನು ತಲುಪಲು ಸಾಧ್ಯ. ಅಚಲವಾದ ಆತ್ಮವಿಶ್ವಾಸದಿಂದ ಸಾಧನೆಗೆ ಅಡ್ಡಿಯಾಗುವ ಯಾವುದೇ ಕಷ್ಟದ ಪರಿಸ್ಥಿತಿಯನ್ನೂ ಮೆಟ್ಟಿ ನಿಲ್ಲಬಹುದು. ವಿದ್ಯೆಯೊಂದಿಗೆ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಆನಂದ ಬುದ್ಧ ವಿಹಾರದ ಜ್ಞಾನಲೋಕ ಭಂತೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆಂಜನಪ್ಪ, ನಿರ್ದೇಶಕ ಎಚ್.ವೆಂಕಟೇಶ್, ಸಮಾಜ ಸೇವಕ ಪುರುಷೋತ್ತಮ್, ವಿಶ್ವಜ್ಞಾನಿ ಸೇವಾ ಟ್ರಸ್ಟ್ ಗೌರವ ಅಧ್ಯಕ್ಷ ರಾಮಣ್ಣ, ಅಧ್ಯಕ್ಷ ನಾರಾಯಣಪ್ಪ, ಕಾರ್ಯದರ್ಶಿಗಳಾದ ರಾಜೇಂದ್ರ, ಎಂ.ನಾರಾಯಣಪ್ಪ, ಲೆಕ್ಕಪರಿಶೋಧಕ ಜಯರಾಮ್, ಕರ್ನಾಟಕ ಮಾದರ ಮಹಾ ಸಭಾ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಬ್ಬರಾಜು, ಕಾರ್ಯದರ್ಶಿ ಬಚ್ಚಹಳ್ಳಿ ನಾಗರಾಜು, ರಾಜ್ಯ ಸಮಿತಿ ಸದಸ್ಯ ದೊಡ್ಡತುಮಕೂರು ರಾಮಕೃಷ್ಣ, ಜಿಲ್ಲಾ ಸಮಿತಿ ಸದಸ್ಯ ಆರ್.ಶಿವಣ್ಣ, ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ತಳಗವಾರ ನಾಗರಾಜ್, ಉಪಾಧ್ಯಕ್ಷ ಟಿ.ಡಿ.ಮುನಿಯಪ್ಪ, ಕಾರ್ಯದರ್ಶಿ ತೂಬಗೆರೆ ವೆಂಕಟೇಶ್, ಪದಾಧಿಕಾರಿಗಳಾದ ದೇವರಾಜು, ಅಪಕಾರನಹಳ್ಳಿ ಹನುಮಯ್ಯ, ಮಾದರ ಸಭಾ ದೊಡ್ಡತುಮಕೂರು ವೆಂಕಟೇಶ್, ಹಸನಘಟ್ಟ ಮುನಿಯಪ್ಪ, ಮುತ್ತುರಾಜು, ಕುರುವಿಗೆರೆ ಮುನಿರಾಜು, ಚಿಕ್ಕನರಸಪ್ಪ, ವಕೀಲ ಮುನಿರಾಜು, ಮುನಿಯಪ್ಪ, ಹರ್ಷ ಮುಂತಾದವರು ಭಾಗವಹಿಸಿದ್ದರು.

ಫೋಟೋ-

8ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನಡೆಯಿತು.