ಸಾರಾಂಶ
ಕನ್ನಡಪ್ರಭವಾರ್ತೆ ಚನ್ನಗಿರಿ
ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ ದೇಶದ ಐಕ್ಯತೆಗಾಗಿ ದುಡಿಯುತ್ತಿರುವ ವ್ಯಕ್ತಿಗೆ ಮತ್ತೊಮ್ಮೆ ಅವಕಾಶಗಳನ್ನು ನೀಡಿ ದೇಶದ ಪ್ರಗತಿಗೆ ಪ್ರತಿಯೊಬ್ಬ ನಾಗರೀಕನೂ ಮುಂದಾಗಬೇಕು ಎಂದು ಎಡೆಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ಅವರು ತಾಲೂಕಿನ ತಾವರೆಕೆರೆ ಗ್ರಾಮದ ಶ್ರೀ ಪ್ರಸನ್ನ ಅಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ವತಿಯಿಂದ ಏರ್ಪಡಿ ಸಿದ್ದ ನಮ್ಮ ಸಂಕಲ್ಪ ವಿಕಸಿತ ಭಾರತ ಎಂಬ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಪ್ರಪಂಚದಲ್ಲಿ ಮುಂದುವರೆದ ದೇಶಗಳಲ್ಲಿ ಭಾರತ ದೇಶವು ಒಂದಾಗಿದ್ದು, ಸರ್ಕಾರದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಬ್ಯಾಂಕುಗಳಿಂದ ರೈತರುಗಳಿಗೆ ನೀಡುವ ಸಣ್ಣ ಪ್ರಮಾಣದ ಸಾಲ ಸೌಲಭ್ಯಗಳನ್ನು ಬಳಸಿಕೊಳ್ಳ ಬೇಕು. ಹಾಗೆಯೇ, ವ್ಯಾಪಾರಸ್ಥರು ಹಾಗೂ ರೈತರು ಅಭಿವೃದ್ಧಿಯಾದರೆ ದೇಶವೇ ಅಭಿವೃದ್ಧಿಯಾದಂತೆ ಎಂದರಲ್ಲದೆ, ರೈತರುಗಳಿಗೆ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಇರುವುದರಿಂದ ರೈತರಿಗೆ ಸಹಾಯಕವಾಗಿದೆ ಎಂದರು.ದಾವಣಗೆರೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರ್ಥಿಕ ಸಲಹೆಗಾರ ಆನಂದ್ ಮಾತನಾಡಿ, ಸರ್ಕಾರದಿಂದ ವಯೋನಿವೃತ್ತಿಯ ಸಂದರ್ಭದಲ್ಲಿ ತಮ್ಮ ಜೀವನವನ್ನು ಸಾಗಿ ಸುವ ಸಲುವಾಗಿ ಪಿಂಚಣಿ ಯೋಜನೆಯಲ್ಲಿ ಊಡಿಕೆ ಮಾಡುವುದರಿಂದ ಸಾಮಾನ್ಯ ವರ್ಗದ ನಿವೃತ್ತ ನೌಕರರಿಗೆ ಸಹಕಾರಿಯಾಗಿದೆ ಎಂದು ಹೇಳುತ್ತಾ ಬ್ಯಾಂಕ್‌ನಿಂದ ಸಿಗಬ ಹುದಾದ ಯೋಜನೆಗಳ ಬಗ್ಗೆ ವಿವರಿಸಿದರು.ದಾವಣಗೆರೆ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ಸಂಶೋಧನಾ ವಿಜ್ಞಾನಿ ಡಾ.ಸಣ್ಣಗೌಡರ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿನ 194 ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಸಂಕಲ್ಪ ವಿಕಸಿತ ಎಂಬ ಭಾರತ ಯಾತ್ರೆ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದು ವಿವರಿಸಿದರು.ಈ ಕಾರ್ಯಕ್ರಮದಲ್ಲಿ ತಾವರೆಕೆರೆ ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರ್ಥಿಕ ಸಲಹೆಗಾರರಾದ ಉಜಾಲ, ಬ್ಯಾಂಕ್ ನ ವ್ಯವಸ್ಥಾಪಕ ಈರಾ ನಾಯ್ಕ್, ಗ್ರಾ.ಪಂ ಸದಸ್ಯರಾದ ಪಿ.ಪಿ.ಅಣ್ಣಾಮಲೈ, ಆರೋಗ್ಯ ಇಲಾಖೆಯ ಮಂಜನಾಯ್ಕ್, ಚಂದ್ರಶೇಖರ್, ಎಸ್.ಎಲ್.ಎನ್ ಗ್ಯಾಸ್ ಏಜೆಸ್ಸಿಯ ಮಾಲೀಕ ಸಿ.ಶಶಿಕುಮಾರ್ ಸೇರಿದಂತೆ ಆಶಾ ಕಾರ್ಯಕರ್ತೆಯರು ಸಾರ್ವಜನಿಕರು ಹಾಜರಿದ್ದರು.ಇದೇ ಸಂದರ್ಭದಲ್ಲಿ ನಮ್ಮ ಸಂಕಲ್ಫ ವಿಕಸಿತ ಭಾರತ ಎಂಬ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು..24ಕೆಸಿಎನ್ಜಿ2: ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆದ ನಮ್ಮ ಸಂಕಲ್ಪ ವಿಕಸಿತ ಭಾರತ ಎಂಬ ಕಾರ್ಯಕ್ರಮಕ್ಕೆ ಎಡೆಯೂರು ಶ್ರೀಗಳು ಚಾಲನೆ ನೀಡಿದರು. ಈ ವೇಳೆ ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ಇದ್ದರು.