ಸಾರಾಂಶ
ಬೀರೂರು ಪಟ್ಟಣ ಸೌಹಾರ್ದ ಸಹಕಾರ ಬ್ಯಾಂಕ್‌ನ 17ನೇ ವಾರ್ಷಿಕ ಸಭೆ: ಷೇರುದಾರರಿಗೆ ಶೇ 7.5ರಷ್ಟು ಲಾಭಾಂಶ
ಕನ್ನಡಪ್ರಭ ವಾರ್ತೆ, ಬೀರೂರುಆಡಳಿತ ಮಂಡಳಿ ಜೊತೆ ಷೇರುದಾರರ ಸಹಭಾಗಿತ್ವ ಸಹಕಾರಿ ಪ್ರಗತಿಗೆ ಅವಶ್ಯಕ ಎಂದು ಬೀರೂರು ಪಟ್ಟಣ ಸೌಹಾರ್ದ ಪತ್ತಿನ ಸಹಕಾರಿ ಅಧ್ಯಕ್ಷ ಎ.ಸಿ.ಸತೀಶ್ ತಿಳಿಸಿದರು. ಪಟ್ಟಣದ ರೋಟರಿ ಭವನದಲ್ಲಿ ನಡೆದ ಸಹಕಾರ ಬ್ಯಾಂಕ್‌ನ 17ನೇ ವಾರ್ಷಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಸಂಘಗಳ ಪ್ರಗತಿಗೆ ಷೇರುದಾರ ಮತ್ತು ಆಡಳಿತ ಮಂಡಳಿ ಸಹಕಾರ ಹಾಗೂ ಸಹಭಾಗಿತ್ವ ಅಗತ್ಯ. 347 ಸದಸ್ಯ ರಿಂದ ಆರಂಭವಾದ ಸಂಸ್ಥೆ, ಇಂದು 1,090 ಸದಸ್ಯರನ್ನು ಹೊಂದಿ ₹28.62 ಲಕ್ಷ ಷೇರು ಬಂಡವಾಳ, ₹ 3.70 ಕೋಟಿ ಠೇವಣಿ ಹಾಗೂ ₹ 2.74 ಕೋಟಿ ಸಾಲ ವಿತರಣೆ ಮಾಡುವಷ್ಟು ಸಾಮರ್ಥ್ಯಕ್ಕೆ ಬೆಳೆದಿದೆ. ಷೇರುದಾರರಿಗೆ ಪ್ರಸಕ್ತ ಸಾಲಿನಲ್ಲಿ ಶೇ 7.5 ರಷ್ಟು ಲಾಭಾಂಶ ವಿತರಿಸಲಾಗುವುದು ಎಂದರು.ಪ್ರಸಕ್ತ ಸಾಲಿನಿಂದ ಅಡಕೆ ಅಡಮಾನ ಸಾಲ ವಿತರಿಸುವ ಯೋಜನೆ ರೂಪಿಸಿದ್ದು, ಷೇರುದಾರರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಕಡಿಮೆ ಬಡ್ಡಿ ದರದ ಸಾಲ, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉನ್ನತ ಸಾಧನೆ ಮಾಡಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.ಬ್ಯಾಂಕ್‌ನ ಪ್ರಗತಿಗೆ ಸದಸ್ಯರು ಚಟುವಟಿಕೆಗಳಲ್ಲಿ ಸಕ್ರಿಯ ವಾಗಿ ಪಾಲ್ಗೊಳ್ಳುವ ಮೂಲಕ ಸಹಕಾರಿ ಪ್ರಗತಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು. ಉಪಾಧ್ಯಕ್ಷ ಜಿ.ಪಿ.ನವೀನ್ ಮಾತನಾಡಿ, ಸದಸ್ಯರು ಸಹಕಾರಿ ಷೇರು ಹೆಚ್ಚಳ ಮತ್ತು ಸಹಕಾರಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಹೆಚ್ಚಿನ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು. ನಿರ್ದೇಶಕ ಎನ್.ಎಸ್. ರಾಜು ಮಾತನಾಡಿ , ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ ಗರಿಷ್ಠ ಮಟ್ಟದಲ್ಲಿ ಸಾಲಗಳನ್ನು ವಿತರಿಸಿದ್ದು ಸಾಲ ವಸೂಲಾತಿಯಲ್ಲೂ ಗಮನಾರ್ಹ ಸಾಧನೆ ಮಾಡಲಾಗಿದೆ. ಸಹಕಾರಿ ಸದಸ್ಯರ ಸಹಕಾರದಿಂದ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸದಸ್ಯಬಲ, ಷೇರು ಬಂಡವಾಳ,ಠೇವಣೆಯೊಂದಿಗೆ ಸೌಲಭ್ಯ ಹಾಗೂ ಸೇವೆ ನೀಡಲು ಬದ್ದವಾಗಿದ್ದೇವೆ ಎಂದರು.ಸಾಲ ಸಮಿತಿ ಅಧ್ಯಕ್ಷ ಕೆ.ಆರ್. ವಿಶ್ವನಾಥ್ 24-25ನೇ ಸಾಲಿನ ಆಯವ್ಯಯ ವಿವರ ನೀಡಿದರು. ನಿರ್ದೇಶಕ ರುದ್ರೇಶ್ ಲಾಭಾಂಶ ವಿಲೇವಾರಿ ವರದಿ ಓದಿದರು. ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೀತಾ ಮಧುಕುಮಾರ್ ವರದಿ ಮಂಡಿಸಿದರು.ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಪ್ರಣಯ್ ಕುಮಾರ್ ಜೈನ್, ಧನುಷ್, ಇಂದ್ರೇಶ್ ಉಪ್ಪಾರ್, ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕಪಡೆದ ದೀಪಿಕಾಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಸಹಕಾರಿ ನಿರ್ದೇಶಕರಾದ ಪಿ.ಶಾಂತಪ್ಪ, ಮಂಜುನಾಥ್.ಎಸ್, ಎಸ್.ಜಿ.ದೇವರಾಜ್, ಬಿ.ಜಿ.ಕವನಾ, ಜಿ.ಮಧುಕುಮಾರ್, ಕವಿತಾ, ಪರಮೇಶ್, ಹರೀಶ್‌ಕುಮಾರ್, ಮತ್ತಿತರರು ಇದ್ದರು.14 ಬೀರೂರು 1ಬೀರೂರು ರೋಟರಿ ಭವನದಲ್ಲಿ ನಡೆದ ಬೀರೂರು ಪಟ್ಟಣ ಸೌಹಾರ್ದ ಸಹಕಾರಿ 17ನೇ ವಾರ್ಷಿಕ ಸಭೆಯನ್ನು ಸಹಕಾರಿಯ ಉಪಾಧ್ಯಕ್ಷ ಜಿ.ಪಿ.ನವೀನ್ ಉದ್ಘಾಟಿಸಿದರು. ಅಧ್ಯಕ್ಷ ಎ.ಸಿ.ಸತೀಶ್, ನಿರ್ದೇಶಕರಾದ ಎಂ.ವಿ.ರುದ್ರೇಶ್, ಶಾಂತಪ್ಪ, ವಿಶ್ವನಾಥ್, ರಾಜು ಮತ್ತು ನಿರ್ದೇಶಕರು ಇದ್ದರು.