ಸಕ್ಕರೆ ಕಾರ್ಖಾನೆಗಳು ಪ್ರತಿಟನ್‌ ಕಬ್ಬಿಗೆ ₹4 ಸಾವಿರ ನೀಡಲಿ

| Published : Jul 10 2024, 12:33 AM IST

ಸಕ್ಕರೆ ಕಾರ್ಖಾನೆಗಳು ಪ್ರತಿಟನ್‌ ಕಬ್ಬಿಗೆ ₹4 ಸಾವಿರ ನೀಡಲಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಸಕ್ಕರೆ ಕಾರ್ಖಾನೆಗಳು 2024-25ನೇ ಹಂಗಾಮಿನಲ್ಲಿ ಖರೀದಿಸುವ ಪ್ರತಿಟನ್ ಕಬ್ಬಿಗೆ ₹4 ಸಾವಿರ ಪಾವತಿ ಮಾಡಬೇಕು ಮತ್ತು ರಾಜ್ಯ ಸರ್ಕಾರ ₹500 ಸಹಾಯಧನ ನೀಡಬೇಕೆಂದು ರಾಜ್ಯ ದಾಳಿಂಬೆ ಬೆಳೆಗಾರರ ಸಂಘದ ಅಧ್ಯಕ್ಷ, ಕೃಷಿ ಪಂಡಿತ ಪ್ರಶಸ್ತಿ ವಿಜೇತ, ಪ್ರಗತಿಪರ ರೈತ ಕೆ.ಎಲ್.ಬಿಲಕೇರಿ ಆಗ್ರಹಿಸಿದರು.

ಕನ್ನಡ ಪ್ರಭ ವಾರ್ತೆ ಮುಧೋಳ

ಸ್ಥಳೀಯ ವಾತ್ಸಲ್ಯ ಧಾಮ ಆಶ್ರಮದಲ್ಲಿ ನಡೆದ ರೈತರ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೃಷಿ ನಿರ್ವಹಣೆಯ ವೆಚ್ಚ ಬಹಳ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಬ್ಬಿನ ಬೆಲೆ ಹೆಚ್ಚಿಸುವುದು ತೀರ ಅವಶ್ಯವಾಗಿದೆ ಎಂದರು.

ಎಥೆನಾಲ್ ಉತ್ಪಾದನೆಯಿಂದ ಸಕ್ಕರೆ ಕಾರ್ಖಾನೆಗಳು ಚೆನ್ನಾಗಿ ಲಾಭಗಳಿಸುತ್ತಿವೆ. ರೈತರಿಗೆ ಅನುಕೂಲ ಮಾಡಿ ಕೊಡುವ ದೃಷ್ಟಿಯಿಂದ ಎಥೆನಾಲ್ ಬೆಲೆಯನ್ನು ಸರ್ಕಾರ ಹೆಚ್ಚಿಸಿದೆ. ಈ ಲಾಭ ರೈತರಿಗೂ ದೊರಕಬೇಕೆಂದರು.

ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ರೈತರು ದಾಳಿಂಬೆ, ಚಿಕ್ಕೂ, ಮಾವು, ಪೇರಲು, ಪಪ್ಪಾಯಿ, ದ್ರಾಕ್ಷಿ, ಬಾಳೆ ಇತ್ಯಾದಿ ಹಣ್ಣಗಳನ್ನು ಚೆನ್ನಾಗಿ ಬೆಳೆಯುತ್ತಾರೆ. ಸರ್ಕಾರ ಹಣ್ಣುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಬೇಕು. ವಿದೇಶಗಳಿಗೆ ಎಕ್ಸ್ ಪೋರ್ಟ್ ಮಾಡುವ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ಮನವಿ ಮಾಡಿದರು.

ಕಲಾದಗಿಯಲ್ಲಿ ನಿರ್ಮಿಸಿದ ಮಾದರಿಯಲ್ಲಿ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಪ್ರತಿ ತಾಲೂಕಿನಲ್ಲಿ ಹಣ್ಣು ಬಳೆಗಾರರ ಸಹಕಾರ ಸಂಘ ಸ್ಥಾಪಿಸಬೇಕು. ಇದರಿಂದ ಹಣ್ಣು ಬೆಳೆಯುವ ರೈತರಿಗೆ ಬಹಳ ಅನುಕೂಲ ವಾಗುವುದು ಎಂದು ಅವರು ಹೇಳಿದರು.

ವಾತ್ಸಲ್ಯದಾಮ ಆಶ್ರಮದ ರಮೇಶ ಭಯಾ, ಬಾಗಲಕೋಟ ಜಿ.ಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ರಮೇಶ ಶಿರೋಳ , ಲಕ್ಷ್ಮಣ ಬಿಳೂರ, ಮಲ್ಲಿಕಾರ್ಜುನ ಹೆಗ್ಗಳಗಿ, ಬಿ.ಹೆಚ್.ಬೀಳಗಿ ಇತರರು ಉಪಸ್ಥಿತರಿದ್ದರು.