ಸಮರ್ಪಕ ದಾಖಲೆಗಳಿದ್ದಲ್ಲಿ ತ್ವರಿತವಾಗಿ ಕಡತ ವಿಲೇವಾರಿ: ಎಚ್.ಪ್ರಶಾಂತ್

| Published : Jul 13 2024, 01:31 AM IST

ಸಮರ್ಪಕ ದಾಖಲೆಗಳಿದ್ದಲ್ಲಿ ತ್ವರಿತವಾಗಿ ಕಡತ ವಿಲೇವಾರಿ: ಎಚ್.ಪ್ರಶಾಂತ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ದಾಖಲೆಗಳು ಸಮರ್ಪಕವಾಗಿದ್ದಲ್ಲಿ ಪುರಸಭೆಯಲ್ಲಿ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಹೇಳಿದ್ದಾರೆ.

- ತರೀಕೆರೆಯಲ್ಲಿ ಕಡತಗಳ ತ್ವರಿತ ವಿಲೇವಾರಿ ಆಂದೋಲನ ಕಾರ್ಯಕ್ರಮಕನ್ನಡಪ್ರಭ ವಾರ್ತೆ, ತರೀಕೆರೆ

ದಾಖಲೆಗಳು ಸಮರ್ಪಕವಾಗಿದ್ದಲ್ಲಿ ಪುರಸಭೆಯಲ್ಲಿ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುವುದು

ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಹೇಳಿದ್ದಾರೆ.

ಶುಕ್ರವಾರ ಪುರಸಭಾ ಕಾರ್ಯಾಲಯದಿಂದ ಪಟ್ಟಣದ ಕನಕ ಕಲಾ ಭವನದಲ್ಲಿ ಏರ್ಪಡಿಸಿದ್ದ ಕಡತಗಳ ತ್ವರಿತ ವಿಲೇವಾರಿ ಆಂದೋಲನದಲ್ಲಿ ಮಾತನಾಡಿದರು. ಅರ್ಜಿಗಳು ಎಷ್ಟು ವರ್ಷಗಳಿಂದ ಬಾಕಿ ಉಳಿದಿದ್ದರೂ ಕೂಡ ಅವುಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು, ಸಾರ್ವಜನಿಕರು, ಜನಪ್ರತಿನಿಧಿಗಳು ಮತ್ತು ಪುರಸಭೆ ಸಿಬ್ಬಂದಿ ಸಹಕಾರದಿಂದ ಕಡತ ಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುವುದು ಎಂದು ಹೇಳಿದರು.ಪುರಸಭೆ ಸದಸ್ಯ ಟಿ.ಜಿ.ಲೋಕೇಶ್ ಮಾತನಾಡಿ ಸಾರ್ವಜನಿಕರು ಇ-ಸ್ವತ್ತು ಇತ್ಯಾದಿಗಳಿಗೆ ಪುರಸಭೆಗೆ ಅರ್ಜಿ ಸಲ್ಲಿಸಿರು ತ್ತಾರೆ. ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿದರೆ ಸಾರ್ವಜನಿಕರಿಗೆ ಇಂತಹ ಕಾರ್ಯಕ್ರಮಗಳಿಂದ ಅನುಕೂಲವಾಗುತ್ತದೆ. ಇದು ಬಹಳ ಉತ್ತಮ ಕಾರ್ಯಕ್ರಮ ಎಂದು ಹೇಳಿದರು.

ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ ಪ್ರತಿ ತಿಂಗಳು ತ್ವರಿತ ಕಡತಗಳ ವಿಲೇವಾರಿಗೆ ಒಂದು ದಿನ ಮೀಸಲಿಡಬೇಕು. ಕಡತಗಳ ತ್ವರಿತ ವಿಲೇವಾರಿ ಕಾರ್ಯಕ್ರಮ ಒಂದು ಮಹತ್ವದ ಹೆಜ್ಜೆಯಾಗಿದೆ. ನಾಗರಿಕರು ಕಾರ್ಯ ಕ್ರಮದ ಉಪಯೋಗ ಪಡೆಯಬೇಕು. ಪಟ್ಟಣದಲ್ಲಿ ಜನಜಂಗುಳಿ ಪ್ರದೇಶಗಳು, ಮಾರುಕಟ್ಟೆ, ಬಸ್ ನಿಲ್ದಾಣ ಇತ್ಯಾದಿ ಕಡೆಗಳಲ್ಲಿ ಕೊಳಚೆ ನೀರು ನಿಲ್ಲದ ಹಾಗೆ ಗಮನ ಹರಿಸಬೇಕು. ಮನೆ ಮನೆಗೆ ತೆರಳಿ ಡೆಂಘೀ ಜ್ವರದ ಬಗ್ಗೆ ಹೆಚ್ಚು ಜಾಗೃತಿ ಉಂಟುಮಾಡಬೇಕು. ಹೆಚ್ಚು ಸ್ವಚ್ಛತೆ ಕಾಪಾಡಬೇಕು. ಪ್ಲಾಸ್ಟಿಕ್ ನ್ನು ನಿಷೇಧಿಸಬೇಕು ಎಂದು ಹೇಳಿದರು.

ಪುರಸಭೆ ಸದಸ್ಯೆ ಗೀತಾ ಗಿರಿರಾಜ್ ಮಾತನಾಡಿ ಪಟ್ಟಣದಲ್ಲಿ ಎಲ್ಲ ವಾರ್ಡುಗಳ ಜನರ ಸಮಸ್ಯೆಗಳನ್ನು ಬಗೆ ಹರಿಸಬೇಕು ಎಂದು ಹೇಳಿದರು.

ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಕಡತ ವಿಲೇವಾರಿಯಾಗದಿರುವ ಸಮಸ್ಯೆ ಸ್ಥಳೀಯ ಸಂಸ್ಥೆಗಳಷ್ಟೇ ಅಲ್ಲ, ರಾಜ್ಯ ಮತ್ತು ಕೇಂದ್ರಕ್ಕೂ ಬಾಧಿಸುತ್ತಿದೆ. ನಿಗದಿತ ಸಮಯದಲ್ಲಿ ಕಡತಗಳು ವಿಲೇವಾರಿ ಮಾಡುವಂತೆ ಮಾಡುವುದು ಜನಸ್ನೇಹಿ ಆಡಳಿತ. ಈ ನಿಟ್ಟಿನಲ್ಲಿ ಪುರಸಭೆ ಪ್ರಯತ್ನ ಶ್ಲಾಘನೀಯ. ಅಧಿಕಾರಿಗಳಲ್ಲಿ ಸಾಮಾಜಿಕ ಹಾಗೂ ವೈಯಕ್ತಿಕ ಒತ್ತಡಗಳು ಹೆಚ್ಚಾಗಿರುತ್ತದೆ. ಸಿಬ್ಬಂದಿ ಕೊರತೆ ಸಹ ಕಡತಗಳು ವಿಲೇವಾರಿಯಾಗದೆ ಉಳಿಯಲು ಕಾರಣ ಇವೆಲ್ಲ ಮೀರಿ

ಸಿಬ್ಬಂದಿ ಕೆಲಸ ಮಾಡಿದಾಗ ಮಾತ್ರ ಆಡಳಿತಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಕಡತಗಳನ್ನು ವಿಲೇವಾರಿ ಮಾಡಲಾಯಿತು. ಪುರಸಭೆ ಮಾಜಿ ಸದಸ್ಯ ಮಿಲ್ಟ್ರಿ ಶ್ರೀನಿವಾಸ್, ಪುರಸಭೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

12ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ಪುರಸಭಾ ಕಾರ್ಯಾಲಯದಿಂದ ಕಡತಗಳ ತ್ವರಿತ ವಿಲೇವಾರಿ ಆಂದೋಲನ ನಡೆಯಿತು. ಪುರಸಭೆ

ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಪುರಸಬೆ ಸದಸ್ಯರು ಮತ್ತಿತರರು ಇದ್ದರು.