371ಜೆ ಸಮರ್ಪಕ ಅನುಷ್ಠಾನ, ತಿದ್ದುಪಡಿಗೆ ಆಗ್ರಹ

| Published : Mar 22 2025, 02:00 AM IST

ಸಾರಾಂಶ

ಸಂಘಟನೆ ನಿಂತ ನೀರಲ್ಲ. ಕ್ರಿಯಾಶೀಲರಾಗಿ ತೊಡಗಿಕೊಳ್ಳುವವರಿಗೆ ಸ್ಥಾನ ಹುಡುಕಿ ಬರಲಿವೆ. ಆ ನಿಟ್ಟಿನಲ್ಲಿ ನೌಕರರ ಸಂಘ ಕಾರ್ಯ ಮಾಡುತ್ತಿದೆ. ಎಲ್ಲ ನೌಕರರ ಹಿತಕ್ಕಾಗಿ ಸಂಘ ಕಾರ್ಯ ಮಾಡುತ್ತಿದೆ.

ಕೊಪ್ಪಳ:

ಸರ್ಕಾರಿ ನೌಕರರ 371ಜೆ ಸಮರ್ಪಕ ಅನುಷ್ಠಾನ, ತಿದ್ದುಪಡಿಗೆ ಆಗ್ರಹಿಸುತ್ತೇವೆಂದು ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜ ಜುಮ್ಮನ್ನವರ ಹೇಳಿದರು.

ನಗರದ ನೌಕರರ ಸಾಂಸ್ಕೃತಿಕ ಭವನದಲ್ಲಿ ಸಂಘ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆ ನಿಂತ ನೀರಲ್ಲ. ಕ್ರಿಯಾಶೀಲರಾಗಿ ತೊಡಗಿಕೊಳ್ಳುವವರಿಗೆ ಸ್ಥಾನ ಹುಡುಕಿ ಬರಲಿವೆ. ಆ ನಿಟ್ಟಿನಲ್ಲಿ ನೌಕರರ ಸಂಘ ಕಾರ್ಯ ಮಾಡುತ್ತಿದೆ. ಎಲ್ಲ ನೌಕರರ ಹಿತಕ್ಕಾಗಿ ಸಂಘ ಕಾರ್ಯ ಮಾಡುತ್ತಿದೆ ಎಂದರು.

ಸಂಘಕ್ಕೆ 104 ವರ್ಷದ ಇತಿಹಾಸವಿದ್ದು ಮಹಿಳೆ ಸಂಘ ಕಟ್ಟಿದ್ದು ಎನ್ನುವುದು ವಿಶೇಷ. ಸಣ್ಣ ಪುಟ್ಟ ಇಲಾಖೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಹಿಂದಿನ ಅವಧಿಯಲ್ಲಿ ಆಗಿದೆ. ಇದೀಗ ಸರ್ಕಾರಿ ನೌಕರರ ಗೃಹನಿರ್ಮಾಣ ಸಂಘದಡಿ ಸರ್ಕಾರಿ ನೌಕರರ ಸಂಘದಿಂದ ಯೋಗ್ಯ ಬೆಲೆಯಲ್ಲಿ ನಿವೇಶನ ಕೊಡುವೆ ಕನಸಿದೆ ಎಂದರು.

ರಾಜ್ಯ ಪರಿಷತ್ ಸದಸ್ಯ ಆಸೀಫ್ ಅಲಿ ಮಾತನಾಡಿ, ಜಿಲ್ಲೆಯಿಂದ ರಾಜ್ಯಕ್ಕೆ ಆರು ಜನರನ್ನು ನಾಮನಿರ್ದೇಶನ ಮಾಡಿದ್ದಾರೆ. ಜಿಲ್ಲಾ ಘಟಕಕ್ಕೆ 34 ಪದಾಧಿಕಾರಿಗಳ ಹುದ್ದೆ ಹಾಗೂ 14 ನಾಮನಿರ್ದೇಶಿತ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲಾ ನೌಕರರ ಹಿತ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಪದಾಧಿಕಾರಿಗಳು:

ಗೌರವ ಅಧ್ಯಕ್ಷರಾಗಿ ಸಿದ್ಧಪ್ಪ ಮೇಳಿ, ಹಿರಿಯ ಉಪಾಧ್ಯಕ್ಷರಾಗಿ ಡಾ. ಕವಿತಾ ಎಚ್.ಎಸ್, ಗವಿಶಂಕರ ಕೆ, ಶ್ರೀನಿವಾಸ ಕುಲಕರ್ಣಿ, ಗೌರವ ಸಲಹೆಗಾರರಾಗಿ ಕೆ.ಸಿ. ಉಕ್ಕುಂದ, ಕೃಷ್ಣಮೂರ್ತಿ ದೇಸಾಯಿ, ಉಪಾಧ್ಯಕ್ಷರಾಗಿ ಸುರೇಶ ಕೆ, ಗೋಪಾಲಕೃಷ್ಣ ಮುಂಡರಗಿ, ಸುರೇಶ ಮೊರಗೇರಿ, ಹುಸೇನಸಾಬ್ ಕೆ, ಜಗದೀಶ ಪಿ. ಸೂಡಿ, ಗೂಡುಶಾ ಮಕಾನದಾರ, ರೇಣುಕಾ, ಸಾಂಸ್ಕೃತಿಕ ಕಾರ್ಯದರ್ಶಿ ರಾಮಣ್ಣ ಶ್ಯಾವಿ, ಸರೋಜಾಬಾಯಿ, ಪ್ರಚಾರ ಸಮಿತಿ ಸಂಚಾಲಕರಾಗಿ ನಾಗರಾಜ ನಾಯಕ ಡಿ. ಡೊಳ್ಳಿನ, ಆಂತರಿಕ ಲೆಕ್ಕಪರಿಶೋಧಕ ಆರ್.ಎಚ್. ನದಾಫ್, ಜಂಟಿ ಕಾರ್ಯದರ್ಶಿಗಳಾಗಿ ರಮೇಶ ಹುಬ್ಬಳ್ಳಿ, ಪಂಚಪ್ಪ, ಶ್ವೇತಾ ಕಟ್ಟಿಮನಿ, ಬಿ. ಸತ್ಯನಾರಾಯಣ, ಶರಣಪ್ಪ ಪತ್ತಾರ, ಗಂಗಾಧರ ವಿ.ಕೆ, ಸಂಘಟನಾ ಕಾರ್ಯದರ್ಶಿಗಳಾಗಿ ಮಹಾವೀರ ಕುಮಾರ, ದೇವಪ್ಪ ಕೊಳ್ಳದ, ರಮೇಶ ಗಬ್ಬೂರು, ವಿಜಯಕುಮಾರ ಮೈತ್ರಿ, ಬಿ. ಶಿವರಾಜ, ಸಹ ಕಾರ್ಯದರ್ಶಿಗಳಾಗಿ ಶಂಕರಪ್ಪ, ದೊಡ್ಡನಗೌಡ, ಕಾಶಪ್ಪ ಹಳ್ಳಿ, ಮಂಜುನಾಥ ಬುಲ್ಟಿ, ಕ್ರೀಡಾ ಕಾರ್ಯದರ್ಶಿಗಳಾಗಿ ಹುಸೇನಬಾಷಾ ರಡ್ಡೇರ ಶರಣಪ್ಪ ನೇಮಕವಾಗಿದ್ದಾರೆ.

ಜಿಲ್ಲಾ ಘಟಕಕ್ಕೆ ನೂತನವಾಗಿ ಹದಿನಾಲ್ಕು ನಾಮನಿರ್ದೇಶಿತ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರೇಣುಕಾ ಕಣಕಾಲ, ಸುಧೀರ ಅವರಾದಿ, ಜಯರಾಮ ಪವಾರ, ಶರಣಪ್ಪ ಮುಕುಂದ, ಸುಜಾತ ಕುರಿ, ತಾಯಮ್ಮ, ಬಸಪ್ಪ ಜೀರ, ಬಾಲನಾಗಮ್ಮ, ಭಾರತಿ ಹವಳೆ, ಶಾಂತಮೂರ್ತಿ, ವನಿತಾ ಪುರಾಣಿಕ, ಸೋಮಶೇಖರ ಸಿ, ಬಸವರಾಜ ಜೋಗಿನ, ಮಂಜುಳಾ ಆಯ್ಕೆಯಾಗಿದ್ದಾರೆ.