ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ಮಕ್ಕಳ ಆರೋಗ್ಯಕರ ಬೆಳವಣಿಗೆ ಮತ್ತು ಬೆಳವಣಿಗೆಗೆ ಸರಿಯಾದ ಪೋಷಣೆ ಮುಖ್ಯ ಎಂದು ಸರ್ಕಾರಿ ಆಯುರ್ವೇದ ಆಸ್ಪತ್ರೆ ತಜ್ಞ ವೈದ್ಯ ಡಾ.ಕಿಶೋರ್ ಕುಮಾರ್ ಬಿ.ವಿ. ಹೇಳಿದ್ದಾರೆ.ಶನಿವಾರ ಕರ್ನಾಟಕ ಸರ್ಕಾರ, ಸರ್ಕಾರಿ ಆಯುರ್ವೇದ ಆಸ್ಪತ್ರೆ ತರೀಕೆರೆ, ಆಯುಷ್ಮಾನ್ ಆರೋಗ್ಯ ಮಂದಿರ ನಂದಿ, ರೋಟರಿ ಕ್ಲಬ್ ತರೀಕೆರೆ, ಸದ್ವಿಧ್ಯಾ ಪಬ್ಲಿಕ್ ಸ್ಕೂಲ್, ಗಾಳಿ ಹಳ್ಳಿ, ತರೀಕೆರೆ ಇವರ ಸಹಯೋಗದೊಂದಿಗೆ ಶಾಲೆಯಲ್ಲಿ ಏರ್ಪಡಾಗಿದ್ದ ಶಾಲಾ ಮಕ್ಕಳಿಗೆ ಜೀವನ ಶೈಲಿ ಹಾಗೂ ಸ್ವಚ್ಛತೆಯ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಿಗೆ ಪೌಷ್ಠಿಕಾಂಶ ಪೂರೈಸುವ ಸಮತೋಲನ ಆಹಾರ ಒದಗಿಸುವುದು ಅತ್ಯಗತ್ಯ. ಹಣ್ಣು ತರಕಾರಿಗಳು, ಧಾನ್ಯಗಳು, ಆರೋಗ್ಯಕರ ಕೊಬ್ಬುಗಳು, ಜಲಸಂಚಯನ ಮತ್ತು ಹಾಲಿನ ಉತ್ಪನ್ನಗಳು ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಅತ್ಯಗತ್ಯ. ಸ್ನಚ್ಚತೆಯೂ ಸಹ ಮಕ್ಕಳ ಬೆಳೆವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಿದರು.ಮಕ್ಕಳ ಜೀವನ ಶೈಲಿ, ಆಹಾರ ಕ್ರಮ, ಜಂಕ್ ಆಹಾರಗಳಿಂದ ಆಗುವ ದುಷ್ಪರಿಣಾಮಗಳು, ನಿದ್ರಾ ಕ್ರಮ, ಮಕ್ಕಳಲ್ಲಿ ದೈಹಿಕ ಚಟುವಟಿಕೆ, ದೇಹ, ಹಲ್ಲು, ಉಗುರು, ಕೂದಲು ಹಾಗೂ ಬಟ್ಟೆ ಸ್ವಚ್ಛತೆ, ಮಕ್ಕಳು ಯಾವ ರೀತಿ ಅಧ್ಯಯನ ಮಾಡ ಬೇಕು ಎಂಬುದರ ಬಗ್ಗೆ ಅವರು ಸಂಪೂರ್ಣ ಮಾಹಿತಿ ಮಕ್ಕಳಿಗೆ ನೀಡಿದರು. ಸದ್ವಿದ್ಯಾ ಪಬ್ಲಿಕ್ ಸ್ಕೂಲ್.ನ ಹರ್ಷಿಣಿ ಮುಖ್ಯೋಪಾಧ್ಯಾಯರಾದ ಹರ್ಷಿಣಿ, ಸಹಾಯಕ ಗವರ್ನರ್ ಜೋನ್ -7 , ಪ್ರವೀಣ್ ನಾಹರ್ ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ. ರವಿ ಕುಮಾರ್, ಕಾರ್ಯದರ್ಶಿ ಪ್ರವೀಣ್ ಪಿ, ಸದಸ್ಯರಾದ ಗೋವರ್ಧನ್ ಪಿ.ಬಿ. , ಎಂ. ಸಿ. ಶಂಕರ್, ಶಿವರಾಜ್ ಡಿ.ಎನ್., ಗಿರೀಶ್ ಟಿ.ಸಿ., ನಿತಿನ್ ಟಿ.ಜೆ. , ಗಣೇಶ್ ಟಿ.ಎಲ್, ಮಂಜುನಾಥ್, ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಅಮೃತ, ಮಂಜುನಾಥ್, ಶಿಕ್ಷಕರು, ಶಿಕ್ಷಕಿಯರು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. -
19ಕೆಟಿಆರ್.ಕೆ.3ಃತರೀಕೆರೆಯಲ್ಲಿ ಸದ್ವಿದ್ಯಾ ಪಬ್ಲಿಕ್ ಸ್ಕೂಲ್.ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ತಜ್ಞ ವೈದ್ಯ ಡಾ.ಕಿಶೋರ್ ಕುಮಾರ್ ಬಿ.ವಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ. ರವಿ ಕುಮಾರ್, ಸದ್ವಿದ್ಯಾ ಪಬ್ಲಿಕ್ ಸ್ಕೂಲ್ ನ ಹರ್ಷಿಣಿ ಮುಖ್ಯೋಪಾಧ್ಯಾಯ ಹರ್ಷಿಣಿ ಮತ್ತಿತರರು ಭಾಗವಹಿಸಿದ್ದರು.