ಮಾನವೀಯ ಮೌಲ್ಯಗಳ ಸಾರಿದ ಪ್ರವಾದಿ ಮಹಮದ್‌

| Published : Sep 18 2024, 01:52 AM IST

ಸಾರಾಂಶ

ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ಚಿಂತಕ ಪ್ರವಾದಿ ಮಹಮದ್ ಅವರ ಸಂದೇಶಗಳು ಸರ್ವಕಾಲಿಕ ಸತ್ಯವಾದವು ಎಂದು ಮುಸ್ಲಿಂ ಸಮಾಜ ಮುಖಂಡ ಖುದ್ದೂಸ್ ಉಲ್ಲಾ ಖಾನ್ ಜಗಳೂರಲ್ಲಿ ಹೇಳಿದ್ದಾರೆ.

- ಜಗಳೂರು ಸರ್ಕಾರಿ ಆಸ್ವತ್ರೆಯಲ್ಲಿ ಹಣ್ಣು, ಬ್ರೆಡ್ ವಿತರಿಸಿ ಖುದ್ದೂಸ್ ಉಲ್ಲಾ ಖಾನ್ - - - ಕನ್ನಡಪ್ರಭ ವಾರ್ತೆ ಜಗಳೂರು

ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ಚಿಂತಕ ಪ್ರವಾದಿ ಮಹಮದ್ ಅವರ ಸಂದೇಶಗಳು ಸರ್ವಕಾಲಿಕ ಸತ್ಯವಾದವು ಎಂದು ಮುಸ್ಲಿಂ ಸಮಾಜ ಮುಖಂಡ ಖುದ್ದೂಸ್ ಉಲ್ಲಾ ಖಾನ್ ಹೇಳಿದರು.

ಪಟ್ಟಣದ ತಾಲೂಕು ಸಾರ್ವಜನಿಕ ಆಸ್ವತ್ರೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಣ್ಣು, ಬ್ರೆಡ್ ವಿತರಿಸಿ ಮಾತನಾಡಿದ ಅವರು, ಜಾತಿ ಧರ್ಮಗಳನ್ನ ಮೀರಿ ಮಾನವ ಕುಲದ ಒಳತಿಗಾಗಿ ಪ್ರವಾದಿ ಮಹಮ್ಮದ್ ಉತ್ತಮ ಸಂದೇಶ ನೀಡಿದ್ದಾರೆ. ಅವರು ಪ್ರಪಂಚದ ದಾರ್ಶನಿಕರಲ್ಲಿ ಒಬ್ಬರಾಗಿದ್ದರು ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪಿ.ಎಸ್. ಅರವಿಂದ್ ಮಾತನಾಡಿ, ಪ್ರಪಂಚದ ಎಲ್ಲ ಧರ್ಮಗಳಲ್ಲೂ ಉತ್ತಮ ಸಾರವಿದೆ. ಎಲ್ಲರ ಸಂದೇಶವು ಕೂಡ ಸಮಾನತೆ ಭ್ರಾತೃತ್ವ ಸಹಬಾಳ್ವೆಯನ್ನು ಪ್ರತಿಪಾದಿಸಿದ್ದಾರೆ. ಅವರು ಕೊಟ್ಟ ಕೊಡುಗೆಗಳನ್ನು ಇಂದಿನ ಪೀಳಿಗೆಯವರು ಅಳವಡಿಸಿಕೊಂಡು ಸಾಮರಸ್ಯ ಜೀವನ ನಡೆಸಬೇಕು ಎಂದು ತಿಳಿಸಿದರು.

ಡಾ.ವಿಜಯ್ ಕುಮಾರ್ ಮಾತನಾಡಿದರು. ಮುಸ್ಸಿಂ ಮುಖಂಡರಾದ ಅಫೀಜ್ ಉಲ್ಲಾ, ನವಚೇತನಾ ಶಾಲೆ ಮುಖ್ಯಸ್ಥ ಪಿ.ಎಸ್. ಅರವಿಂದನ್‌, ಅಸೀಫ್‌ ಉಲ್ಲಾ, ಜುಲೈಲುದ್ದೀನ್, ಪ್ರಗತಿಪರ ಒಕ್ಕೂಟ ಸದಸ್ಯ ಧನ್ಯಕುಮಾರ್, ವಕೀಲ ಗೋಗುದ್ದು ತಿಪ್ಪೇಸ್ವಾಮಿ ಇತರರು ಇದ್ದರು.

- - - -17ಜೆ.ಎಲ್.ಆರ್.1:

ಜಗಳೂರು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ವತ್ರೆಯಲ್ಲಿ ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಮುಖಂಡರು ರೋಗಿಗಳಿಗೆ ಹಣ್ಣು- ಬ್ರೆಡ್ ವಿತರಿಸಿದರು.