ದಾಬಸ್‍ಪೇಟೆ: ಕ್ಷೇತ್ರದಲ್ಲಿರುವ ಪ್ರತಿಯೊಂದು ಗ್ರಾಮಕ್ಕೂ ರಂಗೋಲಿ ಸ್ಪರ್ಧೆ ವೇಳೆ ವೈಯಕ್ತಿಕವಾಗಿ ಮಹಿಳೆಯರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿ ಸರ್ಕಾರದಿಂದ ಅನುದಾನ ತಂದು ಗ್ರಾಮಗಳ ಅಭಿವೃದ್ಧಿಗೆ ಚಾಲನೆ ನೀಡಿ ಸಮಸ್ಯೆಗಳ ಬಗೆಹರಿಸುತ್ತಿದ್ದೇನೆ ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು

ದಾಬಸ್‍ಪೇಟೆ: ಕ್ಷೇತ್ರದಲ್ಲಿರುವ ಪ್ರತಿಯೊಂದು ಗ್ರಾಮಕ್ಕೂ ರಂಗೋಲಿ ಸ್ಪರ್ಧೆ ವೇಳೆ ವೈಯಕ್ತಿಕವಾಗಿ ಮಹಿಳೆಯರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿ ಸರ್ಕಾರದಿಂದ ಅನುದಾನ ತಂದು ಗ್ರಾಮಗಳ ಅಭಿವೃದ್ಧಿಗೆ ಚಾಲನೆ ನೀಡಿ ಸಮಸ್ಯೆಗಳ ಬಗೆಹರಿಸುತ್ತಿದ್ದೇನೆ ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು.

ಸೋಂಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ 19.50 ಕೋಟಿ ವೆಚ್ಚದ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸೋಂಪುರ ಹೋಬಳಿ ಕೈಗಾರಿಕಾ ಪ್ರದೇಶವಾದ್ದರಿಂದ ವೇಗವಾಗಿ ಬೆಳೆಯುತ್ತಿದೆ. 30-35 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಈ ನಿಟ್ಟಿನಲ್ಲಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ್ದು, ಒಂದೂವರೆ ಎರಡು ತಿಂಗಳಲ್ಲಿ ಕಾಮಗಾರಿಗೆ ಪೂರ್ಣವಾಗಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ತಂದು ಅಭಿವೃದ್ಧಿ ಕಾಮಗಾರಿಗೆ ವೇಗ ನೀಡುತ್ತೇನೆ ಎಂದರು.

ದಾಬಸ್‍ಪೇಟೆ ಪಟ್ಟಣಕ್ಕೆ ಕಾವೇರಿ ನೀರು:

ಈಗಾಗಲೇ ನೆಲಮಂಗಲ ಪಟ್ಟಣಕ್ಕೆ 6ನೇ ಹಂತದಲ್ಲಿ ಕಾವೇರಿ ನೀರು ಬರಲಿದೆ. ದಾಬಸ್‍ಪೇಟೆ ಪಟ್ಟಣಕ್ಕೆ ಕಾವೇರಿ ನೀರು ತರುವ ಆಲೋಚನೆಯಿದ್ದು, ಈಗಾಗಲೇ ಸರ್ಕಾರದ ಹಂತದಲ್ಲಿ ಎಲ್ಲಾ ರೀತಿಯ ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಬೇರೆ ಮೂಲದಿಂದ ದಾಬಸ್‍ಪೇಟೆಗೂ ಕಾವೇರಿ ನೀರು ತರುವ ಪ್ರಯತ್ನ ಮಾಡಿದ್ದು, ಮುಖ್ಯಮಂತ್ರಿಗಳ ಬಳಿಯೂ ಈ ಬಗ್ಗೆ ಚರ್ಚಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಗಳಕುಪ್ಪೆ ಗೋವಿಂದರಾಜು ಮಾತನಾಡಿ, ಕಳೆದ ಮೂರುವರೆ ವರ್ಷದಲ್ಲಿ ಸೋಂಪುರ ಹೋಬಳಿಯ ಅಭಿವೃದ್ಧಿಗೆ ಶಾಸಕರು ಸುಮಾರು 25 ಕೋಟಿಗೂ ಹೆಚ್ಚು ಅನುದಾನ ನೀಡಿ ಹೋಬಳಿಯ ಪ್ರತಿಯೊಂದು ಗ್ರಾಮದ ಅಭಿವೃದ್ದಿಗೂ ಮುಂದಾಗಿದ್ದಾರೆ. ಇನ್ನಷ್ಟು ಅನುದಾನ ತಂದು ಹೋಬಳಿಯನ್ನು ಅಭಿವೃದ್ದಿಪಡಿಸುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಾಜಿ ಸದಸ್ಯ ಅಂಚೆಮನೆ ಪ್ರಕಾಶ್, ಬೀರಗೊಂಡನಹಳ್ಳಿ ಮಲ್ಲೇಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ಶಿವಕುಮಾರ್, ಹನುಮಂತರಾಜು, ಮುಖಂಡರಾದ ದಿನೇಶ್ ನಾಯಕ್, ಮರಿಯಪ್ಪ, ಮನುಪ್ರಸಾದ್, ನಾರಾಯಣಸ್ವಾಮಿ ಹನುಮಂತರಾಯಪ್ಪ, ಲಂಕೇಶ್, ಮಂಜುನಾಥ್, ವೀರಣ್ಣ, ಸುರೇಶ್, ಚಂದ್ರಶೇಖರ್, ಸಿದ್ದರಾಜು, ಪಾರ್ಥ, ಜಗದೀಶ್, ಟಗರು ಶಿವಸ್ವಾಮಿ, ಚಿಕ್ಕಣ್ಣ, ಗಂಗಾಧರ್, ಹನುಮಂತರಾಜು ಇತರರಿದ್ದರು.

ಪೋಟೋ 3 :

ಸೋಂಪುರ ಹೋಬಳಿಯ ಶಿವಾನಂದನಗರ-ಗಂಗೇನಪುರ ರಸ್ತೆ ಕಾಮಗಾರಿಗೆ ಶಾಸಕ ಶ್ರೀನಿವಾಸ್ ಹಾಗೂ ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಗಳಕುಪ್ಪೆ ಗೋವಿಂದರಾಜು ಚಾಲನೆ ನೀಡಿದರು.