ಸಾರಾಂಶ
ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು ಖಂಡನೀಯವಾಗಿದೆ ಎಂದು ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಶನಿವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಟೈರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಜೇವರ್ಗಿ
ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು ಖಂಡನೀಯವಾಗಿದೆ ಎಂದು ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಶನಿವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಟೈರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ನೇರಡಗಿ ಮಾತನಾಡಿ, ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ರಾಜಕೀಯ ಪ್ರೇರಿತವಾಗಿ ಸೇಡು ತೀರಿಸಿಕೊಳ್ಳಲು ಅನ್ಯ ಪಕ್ಷಗಳನ್ನು ಹವಣಿಸುತ್ತಿದ್ದು, ಅದಕ್ಕೆ ರಾಜ್ಯಪಾಲರು ಪೂರಕವಾಗಿ ನಡೆದುಕೊಳ್ಳುತ್ತಿದ್ದಾರೆ. ಪ್ರಜಾಸತ್ತಾತ್ಮಕವಾಗಿ ರಾಜ್ಯಭವನವನ್ನು ದುರ್ಬಲಗೊಳಿಸಲು ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಪತನಗೊಳಿಸಲು ತನ್ನ ಎಲ್ಲಾ ಅಸ್ತ್ರಗಳನ್ನು ಬಳಸುತ್ತಿದೆ. ಆದರೆ ಜನಾದೇಶದ ಸರ್ಕಾರಕ್ಕೆ ಇಡಿ ರಾಜ್ಯದ ಜನರು ರಾಜ್ಯಪಾಲರ ವಿರುದ್ಧ ಸಿಡಿದೇಳಲಿದ್ದಾರೆ ಎಂದು ಅವರು ಹೇಳಿದರು.ಈ ವೇಳೆ ರಸ್ತೆ ತಡೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದ್ದಾಗ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆಗೊಳಿಸಿದರು.
ಪ್ರತಿಭಟನೆಯಲ್ಲಿ ಚಂದ್ರಶೇಖರ ನೇರಡಗಿ, ರಾಜಶೇಖರ ಮುತ್ತಕೋಡ, ನಿಂಗಣ್ಣ ರದ್ದೆವಾಡಗಿ, ರವಿ ಕುರಳಗೇರ, ಭೀಮರಾಯ ಬಿಲ್ಲಾಡ, ಭೀಮು ಖಾದ್ಯಾಪೂರ, ಹಣಮಂತ ಮಯೂರ, ಸಿದ್ದರಾಮ ಗಡ್ಡದ, ದತ್ತಪ್ಪ ಪೂಜಾರಿ, ಪೀರಪ್ಪ ಬೇಲೂರ, ಮಲ್ಲಿಕಾರ್ಜುನ ಕಟ್ಟಿಮನಿ ಗಡ್ಡದ, ಶರಣಗೌಡ ಬಿರಾದಾರ, ಶರಣಗೌಡ ಸರಡಗಿ, ರಾಜಲಿಂಗು, ಶೇಖರ ಹಾಲಗಡ್ಲ, ಯಲ್ಲಪ್ಪ ದೂರೆ, ಮರೆಪ್ಪ ಬಣಮಿಗಿ, ಶೇಖಪ್ಪ ನೆಲೋಗಿ, ಸಿಕ್ರು ಕಟ್ಟಿಸಂಗಾವಿ ಸೇರಿದಂತೆ ನೂರಾರು ಸಿದ್ದರಾಮಯ್ಯನವರ ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.