ಸಾರಾಂಶ
ಗುಳೇದಗುಡ್ಡ: ಪೋಲಿಯೋದಿಂದ ಮಕ್ಕಳು ಶಾಶ್ವತ ಅಂಗವಿಕಲರಾಗುವ ಸಾಧ್ಯತೆ ಇದೆ. ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ ನಿಮ್ಮ ಮಕ್ಕಳನ್ನು ಪೋಲಿಯೋದಿಂದ ರಕ್ಷಿಸಿಕೊಳ್ಳಬೇಕಿದೆ ಎಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕುರಿ ಹೇಳಿದರು.
ಕನ್ನಡಪ್ರಭವಾರ್ತೆ ಗುಳೇದಗುಡ್ಡಪೋಲಿಯೋದಿಂದ ಮಕ್ಕಳು ಶಾಶ್ವತ ಅಂಗವಿಕಲರಾಗುವ ಸಾಧ್ಯತೆ ಇದೆ. ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ ನಿಮ್ಮ ಮಕ್ಕಳನ್ನು ಪೋಲಿಯೋದಿಂದ ರಕ್ಷಿಸಿಕೊಳ್ಳಬೇಕಿದೆ ಎಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕುರಿ ಹೇಳಿದರು. ಭಾನುವಾರ ಇಲ್ಲಿನ ಅರಳಿಕಟ್ಟಿ ಬಸವಣ್ಣ ದೇವರ ದೇವಸ್ಥಾನದಲ್ಲಿ ಬೆಳಗ್ಗೆ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪೋಲಿಯೋ ಲಸಿಕೆ ಹಾಕಿಸುವುದರಿಂದ ಅಂಗವೈಕಲ್ಯತೆಯಿಂದ ತಡೆಯಲು ಪೋಷಕರು 5 ವರ್ಷ ವಯೋಮಿತಿಯೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಹತ್ತಿರದ ಲಸಿಕಾ ಕೇಂದ್ರಕ್ಕೆ ಕರೆದೊಯ್ದು ಲಸಿಕೆ ಹಾಕಿಸಬೇಕೆಂದರು.
ಡಾ.ಬಸವರಾಜ ತಾಂಡೂರ, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಪಿ. ಪಾಗಾದ, ಕ್ಷ-ಕಿರಣ ತಜ್ಞ ಆರ್.ಎಂ. ಕೊತವಾಲ್, ಆರೋಗ್ಯ ನಿರೀಕ್ಷಣಾಧಿಕಾರಿ ಶಂಕರ ವೈ.ಎಂ. ಶಂಕರ ಔರಸಂಗ, ಪಿ.ಆರ್. ಕೆಲವಡಿ, ಎಸ್.ಬಿ. ಅತ್ತಾರ, ಪ್ರವೀಣ ಪಟ್ಟಣಶೆಟ್ಟಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.