ಪ್ರಾಚೀನ ಪರಂಪರೆಯ, ಸಂಪ್ರದಾಯ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವವಾಗಿದೆ. ಗೋ ಸಂತತಿ ಉಳಿದರೆ ಮನುಕುಲ ಉಳಿಯುತ್ತದೆ.
ಲಕ್ಷ್ಮೇಶ್ವರ: ನಮ್ಮ ಪುರಾತನ ಸಂಸ್ಕೃತಿ, ಸಂಪ್ರದಾಯಗಳು ಅಳಿಯುತ್ತಿರುವ ಇಂದಿನ ದಿನಗಳಲ್ಲಿ ಆಕಳು ಕರುಗಳಿಗೆ ನಾಮಕರಣ ಕಾರ್ಯ ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರ ಸ್ವಾಮಿಗಳು ತಿಳಿಸಿದರು.
ಸೋಮವಾರ ಸಮೀಪದ ರಾಮಗೇರಿ ಗ್ರಾಮದ ನಾಗರಾಜ ಮಡಿವಾಳರ ಎಂಬವರ ಮನೆಯಲ್ಲಿ ನೂತನವಾಗಿ ಜನಿಸಿದ ಎರಡು ಆಕಳು ಕರುಗಳಿಗೆ ನಾಮಕರಣ ಕಾರ್ಯದಲ್ಲಿ ಮಾತನಾಡಿದರು.ಪ್ರಾಚೀನ ಪರಂಪರೆಯ, ಸಂಪ್ರದಾಯ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವವಾಗಿದೆ. ಗೋ ಸಂತತಿ ಉಳಿದರೆ ಮನುಕುಲ ಉಳಿಯುತ್ತದೆ. ಗೋವುಗಳು ಪರಿಸರವನ್ನು ಶುದ್ಧಿಕರಿಸುವ ಕಾರ್ಯ ಮಾಡುವುದಲ್ಲದೆ ರೋಗ ರುಜಿನಗಳು ಬಾರದಂತೆ ತಡೆಯುವ ಕಾರ್ಯ ಮಾಡುತ್ತವೆ. ಗೋವುಗಳಲ್ಲಿ ಉದರದಲ್ಲಿ ಮುಕ್ಕೋಟಿ ದೇವರುಗಳು ವಾಸಿಸಿದ್ದಾರೆ ಎನ್ನುವ ನಂಬಿಕೆ ನಮ್ಮ ಪರಂಪರೆಯಲ್ಲಿ ಇದೆ ಎಂದರು.ಗೋವಿನ ಹಾಲು, ಮೂತ್ರ, ಸಗಣಿಯಲ್ಲಿ ಔಷಧಿ ಗುಣಗಳಿವೆ ಎನ್ನುವುದು ಹಲವು ಸಂಶೋಧನೆಗಳಿಂದ ತಿಳಿದುಬಂದಿವೆ. ಗೋವಿನ ವಾಸದಿಂದ ಮನೆಯಲ್ಲಿ ಯಾವುದೇ ರೋಗ ರುಜಿನಗಳು ಬರದಂತೆ ತಡೆಯುವ ಶಕ್ತಿ ಹೊಂದಿವೆ ಎಂದರು.ಗಂಜಿಗಟ್ಟಿಯ ಚರಮೂರ್ತೇಶ್ವರ ವೈಜನಾಥ ಶಿವಯೋಗಿಗಳು ಮಾತನಾಡಿ, ಇಂತಹ ಸಂಪ್ರದಾಯವನ್ನು ಹಾಕಿಕೊಳ್ಳುವ ಮೂಲಕ ಹೊಸ ಪೀಳಿಗೆಯ ಜನರಿಗೆ ಉತ್ತಮ ಸಂದೇಶ ನೀಡುತ್ತಿರುವುದು ಸ್ವಾಗತಾರ್ಹ ಎಂದರು.ಜಿಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ಫಕ್ಕೀರೇಶ ಮ್ಯಾಟಣ್ಣವರ, ಶಿವರಾಜಗೌಡ ಪಾಟೀಲ, ತಿಪ್ಪಣ್ಣ ಸಂಶಿ, ಜಗದೀಶ ಹುಲಿಗೆಮ್ಮನವರ, ರಮಜಾನಸಾಬ ನದಾಫ್ ಸೇರಿದಂತೆ ಅನೇಕರು ಇದ್ದರು.ಇಂದು ಕುಮಾರವ್ಯಾಸ ಜಯಂತಿ ಆಚರಣೆ
ಗದಗ: ನಗರದ ಮುಳಗುಂದ ನಾಕಾ ಬಳಿಯ ಅಡವೀಂದ್ರಸ್ವಾಮಿ ಮಠದಲ್ಲಿ ಸಂಸ್ಕಾರಭಾರತಿ ಸಹಯೋಗದಲ್ಲಿ 343ನೇ ಮಾಸಿಕ ಶಿವಾನುಭವ ಹಾಗೂ ಕುಮಾರವ್ಯಾಸ ಜಯಂತಿ ಆಚರಣೆ ಜ. 6ರಂದು ಸಂಜೆ 6.30ಕ್ಕೆ ಜರುಗಲಿದೆ.ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಸಮ್ಮುಖ ವಹಿಸುವರು. ಶಿವಾನುಭವ ಸಮಿತಿ ಅಧ್ಯಕ್ಷ ಡಾ. ರಾಜೇಂದ್ರ ಗಡಾದ ಅಧ್ಯಕ್ಷತೆ ವಹಿಸುವರು. ಗಮಕ ಕಲಾರತ್ನ ಗುರುವಿನಹಳ್ಳಿಯ ವಿಶ್ವನಾಥ ಕುಲಕರ್ಣಿ ಅವರು ಗದುಗಿನ ಭಾರತ ವಾಚನ-ವ್ಯಾಖ್ಯಾನ ಕುರಿತು ಉಪನ್ಯಾಸ ನೀಡುವರು. ಸಂಗೀತ ಶಿಕ್ಷಕ ಶ್ರೀಕಾಂತ ಹೂಲಿ ಅವರು ಸಂವಾದಿನಿ ಸಾಥ್ ನೀಡುವರು. ಜಿಲ್ಲಾ ಸಂಸ್ಕಾರ ಭಾರತಿ ಅಧ್ಯಕ್ಷ ಪಿ.ಎ. ಕುಲಕರ್ಣಿ ಉಪಸ್ಥಿತರಿರುವರು.ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸದಾಶಿವಯ್ಯ ಎಸ್. ಮದರಿಮಠ, ಸುವರ್ಣ ಎಸ್. ಮದರಿಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿ ಪುರಸ್ಕೃತ ಬಿ.ಡಿ. ಕಿಲಬನವರ, ಕುಮಾರ ವೇದಾಂತ, ರಾಜು ಸಿಕ್ಕಲಗಾರ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಲಿಂ. ಶೋಭಾ ಶಿದ್ರಾಮಯ್ಯ ಸಂಶಿಮಠ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಜರುಗುವುದು. ಆರೋಗ್ಯ ಇಲಾಖೆಯ ಮಂಜುನಾಥ ಕಿಲಬನವರ, ರಾಜೇಶ್ವರಿ ಕಲಾ ಕುಟೀರದ ಸಂಸ್ಥಾಪಕ ಗಜಾನನ ಶೇಷಗಿರಿ ವೆರ್ಣೇಕರ, ಶಿವಾನುಭವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಭುಗೌಡ ಪಾಟೀಲ, ಸಾಂಸ್ಕೃತಿಕ ಕಾರ್ಯದರ್ಶಿ ಗುರಪ್ಪ ನಿಡಗುಂದಿ, ಕೋಶಾಧ್ಯಕ್ಷ ಸಿದ್ಧಣ್ಣ ಜವಳಿ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.