ಸಾರಾಂಶ
ಹಿಂದೂ ಸಂಪ್ರದಾಯದಲ್ಲಿ ಮಂದಿರ, ದೇವಸ್ಥಾನಗಳಲ್ಲಿ ಸನಾತನ ಕಾಲದಿಂದಲೂ ಪೂಜೆ, ಪುನಸ್ಕಾರ, ಜಾತ್ರೆ, ಉತ್ಸವ, ಪುಣ್ಯಸ್ಮರಣೆ ಸೇರಿದಂತೆ ಹಲವು ಭಿನ್ನ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಾನಸಿಕ ನೆಮ್ಮದಿ ಪಡೆಯುತ್ತಾರೆ.
ಬ್ಯಾಡಗಿ: ದೇವಸ್ಥಾನಗಳಲ್ಲಿ ಪಾವಿತ್ರ್ಯ ಕಾಪಾಡಿಕೊಳ್ಳುವ ಮೂಲಕ ನಿತ್ಯ ಆರಾಧನೆ ಸೇರಿದಂತೆ ಆಯಾ ಸಂಪ್ರದಾಯಗಳನ್ನು ಕೈಗೊಳ್ಳುವಲ್ಲಿ ಸ್ಥಳೀಯರು ಆದ್ಯತೆ ನೀಡಬೇಕಿದೆ ಎಂದು ದಿಂಡದಹಳ್ಳಿ ಹಿರೇಮಠದ ಪಶುಪತಿ ಶಿವಾಚಾರ್ಯ ಶ್ರೀಗಳು ತಿಳಿಸಿದರು.
ಪಟ್ಟಣದ ಅಗಸನಹಳ್ಳಿಯ ಮಹದೇವ ದೇವಸ್ಥಾನದ ಗರ್ಭಗುಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪ್ರತಿಯೊಂದು ಧರ್ಮಗಳು ಪ್ರಾರ್ಥನೆಗಾಗಿ ಕೇಂದ್ರಗಳನ್ನು ನಿರ್ಮಿಸಿಕೊಂಡು ನಿತ್ಯ ತಮ್ಮ ಸಂಪ್ರದಾಯದಂತೆ ಆರಾಧನೆ ಮಾಡುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಮಂದಿರ, ದೇವಸ್ಥಾನಗಳಲ್ಲಿ ಸನಾತನ ಕಾಲದಿಂದಲೂ ಪೂಜೆ, ಪುನಸ್ಕಾರ, ಜಾತ್ರೆ, ಉತ್ಸವ, ಪುಣ್ಯಸ್ಮರಣೆ ಸೇರಿದಂತೆ ಹಲವು ಭಿನ್ನ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಾನಸಿಕ ನೆಮ್ಮದಿ ಪಡೆಯುತ್ತಾರೆ ಎಂದರು.ದಾನ ಧರ್ಮಗಳಿಗೆ ಖ್ಯಾತಿ: ಸಾಯಿಬಾಬಾ ಮಂದಿರದ ಧರ್ಮಾಧಿಕಾರಿ ವೇ. ಮಂಜಯ್ಯ ಸ್ವಾಮಿಗಳು ಹಿರೇಮಠ ಮಾತನಾಡಿ, ಇಲ್ಲಿನ ಅಂತಾರಾಷ್ಟ್ರೀಯ ಮಾರುಕಟ್ಟೆ ದೇಶದಲ್ಲಿ ಪ್ರಸಿದ್ಧವಾಗಿದ್ದು, ಇಲ್ಲಿ ಸಾಕಷ್ಟು ಗಣ್ಯ ವ್ಯಾಪಾರಸ್ಥರಿದ್ದು, ದಾನ ಧರ್ಮಗಳಿಗೆ ಉತ್ತಮ ಹೆಸರನ್ನು ಪಡೆದುಕೊಂಡಿದ್ದಾರೆ ಎಂದರು. ಈ ವೇಳೆ ಬೀರಪ್ಪ ಬಣಕಾರ, ಪ್ರಕಾಶ ತಾವರಗಿ, ಈರಣ್ಣ ಹುರಿಗೆಜ್ಜಿ, ದೇವಾನಂದ ಚೌಡಪ್ಪನವರ, ಗುಡ್ಡಪ್ಪ ಕನವಳ್ಳಿ, ಗಿರೀಶ ಇಂಡಿಮಠ, ಮಹದೇವಪ್ಪ ಗಾಜೇರ, ಭರಮಣ್ಣ ಗಾಜೇರ, ಗುಡ್ಡಪ್ಪ ಹಳ್ಳಳ್ಳಿ, ಮಹದೇವಪ್ಪ ಪೂಜಾರ, ಮಹದೇವಪ್ಪ ಬೆಳಕೇರಿ, ಹನುಮಂತಪ್ಪ ತಿಳವಳ್ಳಿ, ಕರಿಯಪ್ಪ ಗಾಜೇರ, ಫಕ್ಕೀರಪ್ಪ ಕರಡೇರ, ಮಹದೇವಪ್ಪ ರಾಮನಹಳ್ಳಿ ಹನುಮಂತಪ್ಪ ಗೂರಣ್ಣನವರ, ಚಂದ್ರಪ್ಪ ಪೂಜಾರ, ರಮೇಶ ಅಡಿವೆಣ್ಣನವರ ಹಾಗೂ ಇತರರಿದ್ದರು.ಜಿಹ್ವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮ
ರಾಣಿಬೆನ್ನೂರು: ನಗರದ ತುಳಜಾಭವಾನಿ ದೇವಸ್ಥಾನದ ಜಿಹ್ವೇಶ್ವರ ಸಭಾಭವನದಲ್ಲಿ ಗುರುವಾರ ಸ್ವಕುಳಸಾಳಿ ಸಮಾಜ ವತಿಯಿಂದ ಭಗವಾನ್ ಜಿಹ್ವೇಶ್ವರ ಜಯಂತ್ಯುತ್ಸವ ಆಚರಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಸ್ವಕುಳಸಾಳಿ ಸಮಾಜದ ಅಧ್ಯಕ್ಷ ವಿಠ್ಠಲ ಏಡಕೆ ಮಾತನಾಡಿ, ಸಮಾಜದ ಯುವಕರು ಸಂಘಟನೆಯೊಂದಿಗೆ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದರು.ಇದೇ ಸಮಯದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.
ಸಮಾಜದ ಗೌರವ ಅಧ್ಯಕ್ಷ ಖಂಡೆಪ್ಪ ರೋಕಡೆ, ಜಿಹ್ವೇಶ್ವರ ಮಹಿಳಾ ಮಂಡಲದ ಅಧ್ಯಕ್ಷೆ ರಾಜೇಶ್ವರಿ ಏಕಬೋಟೆ, ಮಾಜಿ ಅಧ್ಯಕ್ಷೆ ತಾರಾಬಾಯಿ ಕ್ಷೀರಸಾಗರ, ಜಿಹ್ವೇಶ್ವರ ಯುವಕ ಮಂಡಲದ ಉಪಾದ್ಯಕ್ಷ ತುಕಾರಾಮ್ ಪಾಣಿಬಾತೆ, ಸುನಂದಮ್ಮ ಏಕಬೋಟೆ ಮತ್ತಿತರರಿದ್ದರು.