ಸಾರಾಂಶ
ಆರೋಗ್ಯವಂತ ಹಲ್ಲುಗಳು ಸದೃಢ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳು ಪ್ರತಿದಿನ ಕ್ರಮಬದ್ಧವಾಗಿ ಹಲ್ಲುಜ್ಜುವುದರ ಮೂಲಕ ಬಾಯಿ ರಕ್ಷಣೆಗೆ ಮುಂದಾಗಬೇಕೆಂದು ಶಹರ ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.
ಗದಗ: ಆರೋಗ್ಯವಂತ ಹಲ್ಲುಗಳು ಸದೃಢ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳು ಪ್ರತಿದಿನ ಕ್ರಮಬದ್ಧವಾಗಿ ಹಲ್ಲುಜ್ಜುವುದರ ಮೂಲಕ ಬಾಯಿ ರಕ್ಷಣೆಗೆ ಮುಂದಾಗಬೇಕೆಂದು ಶಹರ ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.
ನಗರದ ಸಿ.ಎಸ್. ಪಾಟೀಲ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಆರೋಗ್ಯ ರಕ್ಷಣೆ ಕುರಿತು ತಿಳುವಳಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ೫ ವರ್ಷದ ಮಕ್ಕಳಲ್ಲಿ ಹಲ್ಲಿನ ಕ್ಷಯದ ಹರಡುವಿಕೆ ಶೇ. ೬೯.೧ ಮತ್ತು ೧೨ ವರ್ಷ ವಯಸ್ಸಿನ ಮಕ್ಕಳಲ್ಲಿ ಶೇ.೮೨.೮ ಆಗಿದೆ, ಇದಕ್ಕೆ ಪ್ರಮುಖ ಕಾರಣಗಳೆಂದರೆ ಹಲ್ಲಿನ ಆರೈಕೆಯ ಜ್ಞಾನದ ಕೊರತೆ. ಬಾಯಿಯ ಕಳಪೆ ನೈರ್ಮಲ್ಯ ಅಭ್ಯಾಸಗಳು ಮತ್ತು ಆಹಾರ ಪದ್ಧತಿ ಹಾಗೂ ಪೋಷಕರು ಬಾಯಿಯ ಆರೋಗ್ಯ ಕುರಿತು ಸರಿಯಾದ ತಿಳುವಳಿಕೆ ನೀಡದಿರುವುದಾಗಿದೆ ಎಂದರು.ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ ಮಾತನಾಡಿ, ಸರಿಯಾದ ಹಲ್ಲುಜ್ಜುವ ವಿಧಾನಗಳು ಮತ್ತು ಸಮತೋಲನ ಆಹಾರಗಳ ಮಹತ್ವವನ್ನು ಒಳಗೊಂಡಂತೆ ಬಾಯಿಯ ಆರೋಗ್ಯಕ್ಕೆ ಸಂಬಂಧಿಸಿದ ಜ್ಞಾನ ಮತ್ತು ಕೌಶಲ್ಯಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ತಿಳಿಸುವುದರಿಂದ ಹೆಚ್ಚು ಉಪಯುಕ್ತವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಎಕ್ಸ್‌ಲ್ ಐಡಿಯಾಸ್ ಸಂಸ್ಥೆಯ ಭಾಗವಾದ ಕ್ರೇಯಾನ್ ಎಂಟರ್‌ಟೈನ್‌ಮೆಂಟ್ ಪ್ರೈವೆಟ್ ಲಿಮಿಟೆಡ್ ಕಾಲ್ಗೆಟ್ ಪಾಮೋಲಿವ್ ಸಂಸ್ಥೆಯ ಸಂಯೋಗದೊಂದಿಗೆ ಬ್ರೈಟ್ ಸ್ಟೈಲ್ ಬ್ರೈಟ್ ಫ್ಯೂಚರ್ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಸಂಸ್ಥೆಯ ಯೋಜನಾ ಮುಖ್ಯಸ್ಥ ಆಶ್ಗಾರ ನಮಾಜಿ ಮಕ್ಕಳಿಗೆ ಕೋಲ್ಗೆಟ್ ಕಿಟ್‌ನ್ನು ವಿತರಿಸಿದರು.ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಣ ಸಂಯೋಜಕ ಶ್ಯಾಮ ಲಾಂಡೆ, ಬಿ.ಆರ್.ಪಿ. ಪ್ರಕಾಶ ಮಂಗಳೂರ ಹಾಗೂ ಸಿ.ಎಸ್. ಪಾಟೀಲ, ಶಿಕ್ಷಣ ಸಂಸ್ಥೆಯ ಶಿಕ್ಷಕ ಬಳಗ ಮುಂತಾದವರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))