ಮಾನವ ಹಕ್ಕುಗಳ‌ ಸಂರಕ್ಷಣೆ ಕಾಯ್ದೆ 1948, ಡಿ.19ರಂದು ವಿಶ್ವ ಸಂಸ್ಥೆ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿ 1950ರಿಂದ ಅಧಿಕೃತವಾಗಿ ಜಾರಿಯಾಯಿತು. ದೈನಂದಿನ‌ ಜೀವನದ ಮೂಲ ಅವಶ್ಯಕತೆಗಳಾಗಿದೆ ಎಂಬುದು 2025ರ ಘೋಷವಾಕ್ಯವಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಾನವ ಹಕ್ಕುಗಳ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ವಕೀಲರ ಸಂಘ, ಕಾನೂನು ಸೇವೆಗಳ ಸಮಿತಿ ಹಾಗೂ ಕಾರ್ಮಿಕ ಇಲಾಖೆ ಆಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ಹಾಗೂ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಕಾನೂನು ಅರಿವು, ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನವ ಹಕ್ಕುಗಳ‌ ಸಂರಕ್ಷಣೆ ಕಾಯ್ದೆ 1948, ಡಿ.19ರಂದು ವಿಶ್ವ ಸಂಸ್ಥೆ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿ 1950ರಿಂದ ಅಧಿಕೃತವಾಗಿ ಜಾರಿಯಾಯಿತು. ದೈನಂದಿನ‌ ಜೀವನದ ಮೂಲ ಅವಶ್ಯಕತೆಗಳಾಗಿದೆ ಎಂಬುದು 2025ರ ಘೋಷವಾಕ್ಯವಾಗಿದೆ ಎಂದರು.

ಗ್ರಾಹಕರ ಸಂರಕ್ಷಣೆ ಕಾಯ್ದೆಗೆ 2019ರಲ್ಲಿ ತಿದ್ದುಪಡಿಯಾಯಿತು. ದೋಷಯುಕ್ತ ಸರಕುಗಳ, ಅನ್ಯಾಯ ವ್ಯಾಪಾರದ ಬಗ್ಗೆ ಗ್ರಾಹಕರು ಜಾಗೃತಿಯಾಗಿರಬೇಕು. ತಾವು ಖರೀದಿಸುವ ಉತ್ಪನ್ನಗಳ ಗುಣಮಟ್ಟದ ಬಗ್ಗೆ ನಿಗಾ ವಹಿಸಬೇಕು. ಮೋಸ ಹೋದಾಗ ಸಂಬಂಧಿಸಿದ ಪ್ರಾಧಿಕಾರಕ್ಕೆ ದೂರು ಸಲ್ಲಿಸಬೇಕು. 1915 ಸಹಾಯವಾಣಿ ಸಂಖ್ಯೆಗೂ ಕರೆ‌ ಮಾಡಿ ದೂರು ನೀಡಬಹುದು ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ರಾಮಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ವಕೀಲ ಸೂರ್ಯದೇವ್ ಮಾನವ ಹಕ್ಕುಗಳ ಸಂರಕ್ಷಣೆ ಕಾಯ್ದೆ ಹಾಗೂ ಗ್ರಾಹಕರ ಸಂರಕ್ಷಣೆ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ವಕೀಲರ ಸಂಘದ ಕಾರ್ಯದರ್ಶಿ ಕೆ.ಎಸ್.ಮೋಹನ್ ಕುಮಾರ್, ನಿರ್ದೇಶಕಿ ಪುಷ್ಪಾ, ವಕೀಲ ಮಧು, ಕಾರ್ಮಿಕ ನಿರೀಕ್ಷಕ ಕೆ.ಹೇಮಚಂದ್ರ, ಸಿಬ್ಬಂದಿ ರೂಪಾ‌ ಸೇರಿದಂತೆ ಇತರರಿದ್ದರು.