ಸಂವಿಧಾನದ ಮಹತ್ವ ಅರಿತು ಎಲ್ಲರೂ ಗೌರವಿಸುವ ಮತ್ತು ಸಂರಕ್ಷಿಸುವ ಕೆಲಸದಲ್ಲಿ ನಿರತರಾಗಬೇಕು. ಜೊತೆಗೆ ಇದರ ರಕ್ಷಣೆ ನಮ್ಮೆಲ್ಲರ ಜವಾಬ್ಧಾರಿ ಎಂದು ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಕೆ .ಎಸ್. ಮೖತ್ಯುಂಜಯ ಹೇಳಿದರು.
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ಸಂವಿಧಾನದ ಮಹತ್ವ ಅರಿತು ಎಲ್ಲರೂ ಗೌರವಿಸುವ ಮತ್ತು ಸಂರಕ್ಷಿಸುವ ಕೆಲಸದಲ್ಲಿ ನಿರತರಾಗಬೇಕು. ಜೊತೆಗೆ ಇದರ ರಕ್ಷಣೆ ನಮ್ಮೆಲ್ಲರ ಜವಾಬ್ಧಾರಿ ಎಂದು ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಕೆ .ಎಸ್. ಮೖತ್ಯುಂಜಯ ಹೇಳಿದರು.ಪಟ್ಟಣದ ಗುರುಭವನದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನ ಆಯೋಜಿಸಿದ್ದ ಸಂವಿಧಾನ ಕುರಿತ ಜಾಗೃತಿ, ವಾಲ್ಮೀಕಿ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಂವಿಧಾನದ ಆಶಯಗಳು, ಅಲ್ಲಿರುವ ವಿಧಿಗಳನ್ನು ಅರಿತು ಗೌರವಿಸುವಂತಾಗಬೇಕು, ಸಂವಿಧಾನದ ಆಶಯಗಳನ್ನು ಗೌರವಿಸುವ ಜೊತೆಗೆ ಇದರ ರಕ್ಷಣೆಗೆ ಮುಂದಾಗಬೇಕು ಎಂದರು.
ಬೆಂಗಳೂರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ. ರಾಜಕುಮಾರ್ ಮಾತನಾಡಿ, ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶವನ್ನು ಬಾಬಾ ಸಾಹೇಬರು ನೀಡಿದ್ದಾರೆ. ಸಂವಿಧಾನ ಪವಿತ್ರ ಗ್ರಂಥವಾಗಿದ್ದು,ಸಂವಿಧಾನದಲ್ಲಿ ಪರಿಶಿಷ್ಟ ಪಂಗಡಗಳ ಅಭಿವೖದ್ದಿಗೂ ನಾನಾ ಅವಕಾಶ ಕಲ್ಪಿಸಲಾಗಿದ್ದು ಸರ್ಕಾರಗಳು ಸಹಾ ಹೆಚ್ಚು ಹೆಚ್ಚು ಸವಲತ್ತು ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು, ಬಾಬಾ ಸಾಹೇಬರು ಅಧ್ಯಯನ ಮಾಡಿದ ವಿಶ್ವ ವಿದ್ಯಾನಿಲಯದಲ್ಲಿ ನಮ್ಮ ಮಕ್ಕಳುಗಳು ಕಲಿಯುತ್ತಿದ್ದಾರೆ ಎಂದರೆ
ಇದನ್ನು ನಾವೆಲ್ಲರೂ ಹೆಮ್ಮ ಪಡಬೇಕಿದೆ. ಸ್ಪಧಾ೯ತ್ಮಕ ಪರೀಕ್ಷೆಗಳಲ್ಲಿ ಸಾಧನೆಗೈದು ಸಮಾಜದ ಬಂಧುಗಳು ಉನ್ನತ ಹುದ್ದೆ ಅಲಂಕರಿಸುವಲ್ಲಿ ಶ್ರಮಿಸಿ ಎಂದರು.ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆದಿರುವ ಸಮುದಾಯ 7 ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗೋವಿಂದರಾಜು, ರಘು, ಸಿದ್ದರಾಜು, ಪಿಳ್ಳಪ್ಪ, ಹೂವಮ್ಮ ಶ್ರೀಧರನಾಯಕ್, ಪುಷ್ಪ ಸೇರಿದಂತೆ ಹಲವು ಗಣ್ಯರಿಗೆ ವಾಲ್ಮೀಕಿ ಸೇವಾರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಈ ವೇಳೆ ಚಾ.ನಗರ, ಮೈಸೂರು ನಾಯಕ ಸಂಘದ ಅಧ್ಯಕ್ಷ ರಾಮಚಂದ್ರ, ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಎಚ್.ಎಸ್.ಮಂಜುನಾಥ್, ಹರದನಹಳ್ಳಿ ಪ್ರೊ.ನಂಜುಂಡಸ್ವಾಮಿ, ನಾಯಕ ಸಮುದಾಯ ಕಸಬಾ ಯಜಮಾನ ಚಿಕ್ಕಮಾದು, ತಾಲೂಕು ನಾಯಕರ ಸಂಘದ ಅಧ್ಯಕ್ಷ ಜಗದೀಶ್ ನಾಯಕ, ಕಾರ್ಯಕಾರಿ ಸಮಿತಿ ಸದಸ್ಯ ಶಾಂತರಾಜು, ಗೋವಿಂದರಾಜು, ಶ್ರೀಧರ್ ಇನ್ನಿತರಿದ್ದರು.