ಕನ್ನಡ ನಾಡು-ನುಡಿ ರಕ್ಷಣೆ ಎಲ್ಲರ ಹೊಣೆ: ಸಚಿವ ಡಾ.ಶರಣ ಪ್ರಕಾಶ ಪಾಟೀಲ್

| Published : Nov 02 2024, 01:16 AM IST

ಸಾರಾಂಶ

ರಾಯಚೂರಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಅವರು ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಕನ್ನಡ ನಾಡು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ನಾಡಿನ ಉಜ್ವಲ ಮತ್ತು ಭವ್ಯ ಸಾಂಸ್ಕೃತಿಕ ಪರಂಪರೆ, ನಾಡು-ನುಡಿ ಸಂರಕ್ಷಣೆಯ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ 69ನೇ ಕರ್ನಾಟಕ ರಾಜ್ಯೋತ್ಸವದ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು,ಸಾಮರಸ್ಯವೇ ನಮ್ಮ ನಾಡಿನ ಸಂಸ್ಕೃತಿಯಯ ಜೀವಾಳವಾಗಿದೆ. ಕರ್ನಾಟಕವು ಸರ್ವಧರ್ಮ ರಕ್ಷಣೆ, ಸತ್ಯಾರಾಧನೆ, ಧರ್ಮನೀತಿ, ಸರ್ವಧರ್ಮ ಸಹಿಷ್ಣುತೆ, ಧಾರ್ಮಿಕ ಸಮನ್ವಯ, ಸಹಬಾಳ್ವೆ, ಸೌಹಾರ್ದತೆ ಮತ್ತು ಭಾವೈಕ್ಯತೆಯ ದಿವ್ಯ ಸ್ವರ್ಗವಾಗಿದೆ ಎಂದರು.

ಇಂತಹ ಕನ್ನಡ ನಾಡಿನ ನುಡಿ, ನೆಲ,ಜಲ ಸಂರಕ್ಷಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಸದಾ ಸಿದ್ಧವಾಗಿದ್ದು, ರಾಯಚೂರು ಜಿಲ್ಲೆ ಸೇರಿದಂತೆ ಕನ್ನಡ ನಾಡಿನ ಸರ್ವಾಂಗಿಣ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸೇರಿ ಪಕ್ಷಾತೀತವಾಗಿ ಶ್ರಮಿಸಿ ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ಹೇಳಿದರು.

ಜಿಲ್ಲೆಯ ಜನರ ಬಹುದಿನಗಳ ಕನಸಾದ ರಾಯಚೂರು ವಿಮಾನ ನಿಲ್ದಾಣ ನನಸಾಗುವ ಹಂತಕ್ಕೆ ಬಂದಿದೆ. ಕೇಂದ್ರ ಸರ್ಕಾರ ಸೈಟ್ ಕ್ಲಿಯರೆನ್ಸ್ ನೀಡಿರುವುದರಿಂದ ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಯೋಜನಾ ವರದಿ ಸಿದ್ಧವಾಗುತ್ತಿದೆ. ನಗರದ ಹೊರವಲಯದ ಯರಮರಸ್ ನಲ್ಲಿ 404 ಎಕರೆ ಭೂಮಿ ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ₹40 ಕೋಟಿ ಹಾಗೂ ಎಂಎಫ್ ಅಡಿಯಲ್ಲಿ ₹10 ಕೋಟಿ ಸೇರಿ ಒಟ್ಟು ₹50 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದರು.

ಇದೇ ವೇಳೆ 12 ಪೊಲೀಸ್, ಅಗ್ನಿ ಶಾಮಕ, ಡಿಎಆರ್ ಮತ್ತು ಶಾಲಾ ವಿದ್ಯಾರ್ಥಿಗಳ ಕವಾಯತು ತಂಡಗಳು ಪರೇಡ್‌ ನಡೆಸಿ ಸಚಿವರಿಗೆ ಗೌರವ ವಂದನೆಯನ್ನು ಸಮರ್ಪಿಸಿದರು.

ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ಹಾಡುಗಳಿಗೆ ಶಾಲಾ ಮಕ್ಕಳು ಆಕರ್ಷಕ ನೃತ್ಯ ಪ್ರದರ್ಶನ ಮಾಡಿ ಗಮನ ಸೆಳೆದರು. ಬಳಿಕ ಆಕರ್ಷಕ ಪಥ ಸಂಚಲನ ನಡೆಯಿತು. ವಿಜೇತ ತಂಡಗಳಿಗೆ ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್, ಎಂಎಲ್ಸಿ ಎ.ವಸಂತ್‌ ಕುಮಾರ, ನಗರಸಭೆಯ ಅಧ್ಯಕ್ಷೆ ನರಸಮ್ಮ, ಜಿಲ್ಲಾಧಿಕಾರಿ ನಿತೀಶ ಕೆ., ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕಾರಾಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಉಪ ವಿಭಾಗೀಯ ಅಧಿಕಾರಿ ಗಜಾನನ ಬಾಳೆ ಸೇರಿ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಜನಪ್ರತಿನಿಧಿಗಳು,ಮುಖಂಡರು,ಶಾಲಾ-ಕಾಲೇಜಿನ ಮಕ್ಕಳು, ಸಾರ್ವಜನಿಕರು ಇದ್ದರು.

ಸಾಧಕರಿಗೆ ಸನ್ಮಾನ: ಕರ್ನಾಟಕ ರಾಜ್ಯೋತ್ಸದ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸನ್ಮಾನಿಸಿ ಗೌರವಿಸಿದರು. ಮಹಾಂತೇಶ ಮಸ್ಕಿ (ಸಾಹಿತ್ಯ), ಜಿ.ವೀರಾರಡ್ಡಿ (ಪತ್ರಿಕೋದ್ಯಮ) ಡಾ.ಶೈಲೇಶ ಎಸ್.ಅಮರ್ಖೇಡ (ವೈದ್ಯಕೀಯ), ಕರ್ನಾಟಕ ಸಂಘ (ಸಂಸ್ಥೆ), ಶರಣಬಸವ ಮಸ್ಕಿ (ಕೃಷಿ ಕ್ಷೇತ್ರ), ಚನ್ನಬಸವಸ್ವಾಮಿ ಹಿರೇಮಠ ಕಾರುಣ್ಯ ನೆಲೆವೃದ್ಧಾಶ್ರಮ ಹಾಗೂ ಸಿಂಧನೂರಿನ ವಯಸ್ಕರ ಬುದ್ದಿಮಾಂದ್ಯ ಆಶ್ರಮ ಪ್ರಮುಖರಿಗೆ ಸನ್ಮಾನ ಮಾಡಲಾಯಿತು.

ಉಸ್ತುವಾರಿ ಸಚಿವರಿಂದ ಧ್ವಜಾರೋಹಣ: ಇಲ್ಲಿನ ಕರ್ನಾಟಕ ಸಂಘದಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ನಿಮಿತ್ತ ನಾಡದೇವತೆ ಭುವನೇಶ್ವರಿಗೆ ಪೂಜೆ ಹಾಗೂ ರಾಷ್ಟ್ರ ಧ್ವಜಾರೋಹಣವನ್ನು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ ರುದ್ರಪ್ಪ ಪಾಟೀಲ್ ಅವರು ನೆರವೇರಿಸಿದರು.

ನಂತರ ಕನ್ನಡಾಂಭೆಯ ಮೂರ್ತಿ ಮೆರವಣಿಗೆಗೆ ಪೂಜೆ ಸಲ್ಲಿಸುವುದರ ಮುಖಾಂತರ ಚಾಲನೆ ನೀಡಿದರು. ಕರ್ನಾಟಕ ಸಂಘದಿಂದ ಕಲಾವಿದರೊಟ್ಟಿಗೆ ಹೊರಟ ಮೆರವಣಿಗೆ ಮುಖ್ಯರಸ್ತೆ-ವೃತ್ತದ ಮುಖಾಂತರ ಕ್ರೀಡಾಂಗಣಕ್ಕೆ ಬಂದು ತಲುಪಿತು. ಇದೇ ವೇಳೆ ಸಚಿವರು ಕರ್ನಾಟಕ ಸಂಘವನ್ನು ವೀಕ್ಷಣೆ ಮಾಡಿದರು.

ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ:

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಕರ್ನಾಟಕ ಸಂಭ್ರಮ-50 (ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ) ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. ಜಿಲ್ಲಾಡಳಿತ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣವನ್ನು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರು ನೆರವೇರಿಸಿದರು.ದೇಶದೆಲ್ಲೆಡೆ ಕನ್ನಡ ಭಾಷೆ ಪಸರಿಸಲಿ: ಶಾಸಕ ವಜ್ಜಲ್

ಲಿಂಗಸುಗೂರು: ಕನ್ನಡ ಭಾಷೆ ದೇಶದೆಲ್ಲೆಡೆ ಪಸರಿಸಿ ಜನರ ಮನೆ ಮಾತಾಗಲಿ ಎಂದು ಶಾಸಕ ಮಾನಪ್ಪ ವಜ್ಜಲ್ ಆಶಯ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಅವರು, ಹಲವು ಹಿರಿಯ, ಸಾಹಿತಿಗಳ ತ್ಯಾಗ ಬಲಿದಾನದಿಂದ ಕನ್ನಡ ಭಾಷೆ ತನ್ನ ಹಿರಿಮೆ ಉಳಿಸಿಕೊಂಡಿದೆ. ಹಿರಿಯರ ಆಶಯದಂತೆ ನಾಡಿನ ಮಕ್ಕಳಿಗೆ ಕನ್ನಡ ಕಲಿಸುವ ಮೂಲಕ ಕನ್ನಡ ಭಾಷೆಯನ್ನು ಎಲ್ಲೆಡೆ ಪಸರಿಸುವಂತೆ ಮಾಡಬೇಕು ಎಂದು ಹೇಳಿದರು.

ಇದೇ ವೇಳೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ತಾಲೂಕು ಆಡಳಿತದಿಂದ ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು, ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ, ತಹಸೀಲ್ದಾರ ಶಂಶಾಲಂ ನಾಗಡದಿನ್ನಿ, ತಾಲೂಕ ಪಂಚಾಯ್ತಿ ಇಓ ಉಮೇಶ, ಬಿಇಓ ಹುಂಬಣ್ಣ ರಾಠೋಡ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸನಗೌಡ ಮೇಟಿ, ಸಿಡಿಪಿಓ ಗೋಕುಲ ಹುಸೇನ್ ಸೇರಿದಂತೆ ನಾನಾ ಶಾಲೆಯ ವಿದ್ಯಾರ್ಥಿಗಳು ಹಾಗೂ ಕನ್ನಡಪರ ಸಂಘಟನೆಯ ಮುಖಂಡರುಗಳು ಇದ್ದರು.ತುರ್ವಿಹಾಳದಲ್ಲೂ ರಾಜ್ಯೋತ್ಸವ ಸಂಭ್ರಮ:

ತುರ್ವಿಹಾಳ: ಇಲ್ಲಿನ ಪಟ್ಟಣ ಪಂಚಾಯ್ತಿ ಸೇರಿ ವಿವಿಧೆಡೆ ಕರ್ನಾಟಕ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಅದ್ಧೂರಿಯಾಗಿ ಶುಕ್ರವಾರ ಆಚರಣೆ ಮಾಡಲಾಯಿತು.

ಪಪಂ ಅಧ್ಯಕ್ಷ ಕೆ.ಶಾಮಿದ್ ಸಾಬ್ ಅವರು ಪ.ಪಂ.ನಲ್ಲಿ ದ್ವಜಾರೋಹಣ ನೆರವೇರಿಸಿದರು. ಈ ವೇಳೆ ಮಾತನಾಡಿ ಕನ್ನಡಭಾಷೆ, ನೆಲ, ಜಲಕ್ಕೆ ಕನ್ನಡಿಗರಾದ ನಾವೆಲ್ಲರೂ ಗೌರವಿಸಬೇಕು. ಕಲಿಯೋಕೆ ಅನೇಕ ಭಾಷೆಗಳಿದ್ದರೂ ಆಡೋಕೆ ಒಂದೇ ಭಾಷೆ, ಅದೇ ಕನ್ನಡ ಭಾಷೆ. ಎಲ್ಲರೂ ಕನ್ನಡದಲ್ಲಿ ವ್ಯವಹರಿಸಿ, ಕನ್ನಡವನ್ನು ಬೆಳೆಸೋಣ ಎಂದರು.ಮುಖ್ಯಾಧಿಕಾರಿ ಸಾಬಣ್ಣ ಕಟ್ಟೆಕಾರ್ ಮಾತನಾಡಿ, ಕನ್ನಡ ರಾಜ್ಯೋತ್ಸ ವದ ಮಹತ್ವ ಹಾಗೂ ಕರ್ನಾಟಕ ಏಕೀಕರಣದ ಪ್ರಾಮುಖ್ಯತೆಯನ್ನು ವಿವರಿಸಿದರು. ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ರಮೇಶ ಯಾದವ್ ಧ್ವಜಾರೋಹಣ ನೆರವೇರಿಸಿದರು ಹಾಗೂ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸಂಪನ್ಮೂಲ ವ್ಯಕ್ತಿ ಹನುಮೇಶ್ ದ್ವಜಾರೋಹಣ ನೆರವೇರಿಸಿ ಬುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಮುಖಂಡರಾದ ಮಲ್ಲನಗೌಡ ದೇವರಮನಿ,ಪಾರೂಖ್ ಸಾಬ್ ಖಾಜಿ, ಮೌಲಪ್ಪಯ್ಯ ಗುತ್ತೇದಾರ,ಉಮರ ಸಾಬ್,ಆರ್ ಶಿವನಗೌಡ ನಾಯಕ, ಬಾಪುಗೌಡ ದೇವರ ಮನಿ,ಶರಣಪ್ಪ ಹೊಸಗೌಡ್ರು,ಶಂಕರಗೌಡ ದೇವರಮನಿ,

ಮರಿಯಪ್ಪ ನಾಮದ,ಬಜೇಪ್ಪ ಕುಂಟೋಜಿ,ಯಲ್ಲಪ್ಪ ಬೋವಿ,ಅರವಿಂದ ರೇಡ್ಡಿ,ಸೋಮನಾಥ ಮಟ್ಟೂರ,ಪಕೀರಪ್ಪ ಭಂಗಿ, ಮಹಾಂತೇಶ್ ಸಜ್ಜನ, ರಾಮಣ್ಣ ಉಪ್ಪಾರ್, ಮಹ್ಮದ್ ಉಸ್ಮಾನ್ ಸೇರಿದಂತೆ ಕನ್ನಡ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.ಮುದಗಲ್ ರಾಜ್ಯೋತ್ಸವಆಚರಣೆಗೆ ಸದಸ್ಯರ ಗೈರು

ಮುದಗಲ್: ಕನ್ನಡ ರಾಜ್ಯೋತ್ಸವದ ಆಚರಣೆಗೆ ಪುರಸಭೆ ಸದಸ್ಯರು, ಹಾಗೂ ಮುಖಂಡರುಗಳು ಗೈರಾಗಿದ್ದು, ಶುಕ್ರವಾರ ನಡೆದ ರಾಜ್ಯೋತ್ಸವ ಕಾರ್ಯಕ್ರಮವು ಕಾಟಾಚಾರದ ಆಚರಣೆಗೆ ಸೀಮಿತವಾದಂತೆ ಭಾಸವಾಯಿತು.

ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಮೊದಲೇ ಪುರಸಭೆ ಸದಸ್ಯರಿಗೆ ಮಾಹಿತಿ ನೀಡದ್ದರೂ ಕೂಡ ಬೆರಳಣಿಕೆಯಷ್ಟು ಸದಸ್ಯರು ಆಗಮಿಸಿ ಭಾಗಿಯಾದರು. ಮುದಗಲ್ ಪುರಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಮಹಾದೇವಮ್ಮ ಗುತ್ತೇದಾರ ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್, ಪುರಸಭೆ ಸದಸ್ಯ ದುರುಗಪ್ಪ ಕಟ್ಟಿಮನಿ, ಮುಖಂಡರಾದ ತಮ್ಮಣ್ಣ ಗುತ್ತೇದಾರ, ಮೈಬೂಬ್ ಸಾಬ್ ಬಾರಿಗಿಡ, ಹಸನ್ ಕವ್ವಾ, ಸೈಯದ್ ಸಾಬ್, ಕಸಾಪ ಅಧ್ಯಕ್ಷ ಹಾಜಿಮಲಂಗಬಾಬಾ, ಬಸವರಾಜ ಬಂಕದಮನಿ, ಸೇರಿದಂತೆ ಕರವೇ ಘಟಕದ ಪದಾಧಿಕಾರಿಗಳು, ಪುರಸಭೆ ಪೌರ ಕಾರ್ಮಿಕರು ಹಾಗೂ ನೌಕರರಿದ್ದರು.

ಮಾನ್ವಿಯಲ್ಲಿ ವೈಭವದ ಕನ್ನಡ ಹಬ್ಬ

ತಾಯಿ ಭುವನೇಶ್ವರಿ ಭಾವಚಿತ್ರ ಶಾಸಕ ಹಂಪಯ್ಯ ಪುಷ್ಪಾರ್ಚನೆ

ಮಾನ್ವಿ:ತಾಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವವನ್ನು ಅತ್ಯಂ ವೈಭವದಿಂದ ಶುಕ್ರವಾರ ಆಚರಿಸಲಾಯಿತು.

ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಶಾಸಕರು ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ, ಮಹಾತ್ಮಗಾಂಧಿ ಭಾವಚಿತ್ರ, ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪ ಸಮರ್ಪಿಸಿದರು. ನಂತರ ತಹಸೀಲ್ದಾರ್ ರಾಜು ಪಿರಂಗಿ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ಸಾಮೂಹಿಕವಾಗಿ ನಾಡಗೀತೆಯನ್ನು ಗಾಯನ ಮಾಡಲಾಯಿತು.

ಪಟ್ಟಣದ ಬಸವ ವೃತ್ತದಿಂದ ತಹಸೀಲ್ದಾರ್ ಕಚೇರಿಯವರೆಗೆ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಸಾರೋಟಿನಲ್ಲಿ ವಿವಿಧ ಜನಪದ ಕಲಾ ತಂಡಗಳು, ಜನಪದ ಕಲಾವಿದರೊಂದಿಗೆ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಕನ್ನಡ ಹಾಡುಗಳಿಗೆ ಶಾಸಕರು ಹಾಗೂ ಅಧಿಕಾರಿಗಳು ,ಸಾರ್ವಜನಿಕರು ಹೆಜ್ಜೆಹಾಕಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕನ್ನಡ ಭಾಷೆ ವಿಷಯದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ಪರ ಹೋರಾಟಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಾಸಕರ ಗರಂ:

ತಾಲೂಕು ಅಡಳಿತದ ನಿರ್ಲಕ್ಷ್ಯದ ನಡೆಗೆ ಶಾಸಕ ಹಂಪಯ್ಯ ನಾಯಕ ಗರಂಗೊಂಡರು. ಕನ್ನಡ ರಾಜ್ಯೋತ್ಸವ ಕನ್ನಡಿಗರ ಅತಿದೊಡ್ಡ ಹಬ್ಬವಾಗಿದ್ದು ತಾಲೂಕು ಅಡಳಿತದಿಂದ ಕಟಾಚಾರಕ್ಕೆ ಎಂದು ಅಯೋಜನೆ ಮಾಡಿರುವುದು ಸರಿಯಲ್ಲ, ತಾಲೂಕಿನ ಬೆರಳೆಣಿಕೆಯಷ್ಟು ಮಾತ್ರ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದು ಅವರ ನಿರ್ಲಕ್ಷ್ಯತೆಯನ್ನು ತೋರಿಸುತ್ತದೆ. ಗೈರಾಗಿರುವ 14 ಕ್ಕು ಹೆಚ್ಚು ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ತಹಸೀಲ್ದಾರ್ ರಾಜು ಪಿರಂಗಿಯವರಿಗೆ ಸೂಚಿಸಿದರು. ಈ ವೇಳೆ ಜನಪ್ರತಿನಿಧಿಗಳು, ಮುಖಂಡರು,ಕನ್ನಡ ಸೇರಿ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು.ಸಾರ್ವಜನಿಕರು ಭಾಗವಹಿಸಿದರು.ಮಾನ್ವಿಯಲ್ಲಿ ವೈಭವದ ಕನ್ನಡ ಹಬ್ಬ; ತಾಯಿ ಭುವನೇಶ್ವರಿ ಭಾವಚಿತ್ರ ಶಾಸಕ ಹಂಪಯ್ಯ ಪುಷ್ಪಾರ್ಚನೆ

ಮಾನ್ವಿ:ತಾಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವವನ್ನು ಅತ್ಯಂ ವೈಭವದಿಂದ ಶುಕ್ರವಾರ ಆಚರಿಸಲಾಯಿತು.

ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಶಾಸಕರು ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ, ಮಹಾತ್ಮಗಾಂಧಿ ಭಾವಚಿತ್ರ, ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪ ಸಮರ್ಪಿಸಿದರು. ನಂತರ ತಹಸೀಲ್ದಾರ್ ರಾಜು ಪಿರಂಗಿ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ಸಾಮೂಹಿಕವಾಗಿ ನಾಡಗೀತೆಯನ್ನು ಗಾಯನ ಮಾಡಲಾಯಿತು.

ಪಟ್ಟಣದ ಬಸವ ವೃತ್ತದಿಂದ ತಹಸೀಲ್ದಾರ್ ಕಚೇರಿಯವರೆಗೆ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಸಾರೋಟಿನಲ್ಲಿ ವಿವಿಧ ಜನಪದ ಕಲಾ ತಂಡಗಳು, ಜನಪದ ಕಲಾವಿದರೊಂದಿಗೆ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಕನ್ನಡ ಹಾಡುಗಳಿಗೆ ಶಾಸಕರು ಹಾಗೂ ಅಧಿಕಾರಿಗಳು ,ಸಾರ್ವಜನಿಕರು ಹೆಜ್ಜೆಹಾಕಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕನ್ನಡ ಭಾಷೆ ವಿಷಯದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ಪರ ಹೋರಾಟಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಾಸಕರ ಗರಂ: ತಾಲೂಕು ಅಡಳಿತದ ನಿರ್ಲಕ್ಷ್ಯದ ನಡೆಗೆ ಶಾಸಕ ಹಂಪಯ್ಯ ನಾಯಕ ಗರಂಗೊಂಡರು. ಕನ್ನಡ ರಾಜ್ಯೋತ್ಸವ ಕನ್ನಡಿಗರ ಅತಿದೊಡ್ಡ ಹಬ್ಬವಾಗಿದ್ದು ತಾಲೂಕು ಅಡಳಿತದಿಂದ ಕಟಾಚಾರಕ್ಕೆ ಎಂದು ಅಯೋಜನೆ ಮಾಡಿರುವುದು ಸರಿಯಲ್ಲ, ತಾಲೂಕಿನ ಬೆರಳೆಣಿಕೆಯಷ್ಟು ಮಾತ್ರ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದು ಅವರ ನಿರ್ಲಕ್ಷ್ಯತೆಯನ್ನು ತೋರಿಸುತ್ತದೆ. ಗೈರಾಗಿರುವ 14 ಕ್ಕು ಹೆಚ್ಚು ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ತಹಸೀಲ್ದಾರ್ ರಾಜು ಪಿರಂಗಿಯವರಿಗೆ ಸೂಚಿಸಿದರು. ಈ ವೇಳೆ ಜನಪ್ರತಿನಿಧಿಗಳು, ಮುಖಂಡರು,ಕನ್ನಡ ಸೇರಿ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದರು.ಮೀರಜ್ ಚಿತ್ರಮಂದಿರದಲ್ಲಿ ಅನ್ಯಭಾಷೆ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ, ಆಕ್ರೋಶ

ರಾಯಚೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಒಂದು ವಾರದಿಂದ ಕನ್ನಡ ಚಲನಚಿತ್ರ ಪ್ರದರ್ಶನ ಮಾಡಬೇಕೆಂದು ನಿಯಮವಿದ್ದರೂ ಅದನ್ನು ಉಲ್ಲಂಘಿಸಿದ ನಗರದ ಮೀರಜ್ ಚಿತ್ರಮಂದಿರದಲ್ಲಿ ಅನ್ಯಭಾಷೆ ಚಲನಚಿತ್ರ ಪ್ರದರ್ಶನವನ್ನು ನಡೆಸುತ್ತಿರುವ ಕ್ರಮವನ್ನು ಖಂಡಿಸಿ ಚಲನಚಿತ್ರಕ್ಕೆ ನುಗ್ಗಿದ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಸಂಘಟನೆ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಚಿತ್ರಪ್ರದರ್ಶನವನ್ನು ರದ್ದುಪಡಿಸಿದ ಘಟನೆ ಶುಕ್ರವಾರ ನಡೆದಿದೆ.

ಸ್ಥಳೀಯ ಗಂಜ್ ರಸ್ತೆಯಲ್ಲಿರುವ ಜಿಯೋ ಸ್ಮಾರ್ಟ್ ಮಾಲ್‌ನ ಮೀರಜ್ ಚಿತ್ರಮಂದಿರದ ನಾಲ್ಕು ತೆರೆ(ಸ್ಕ್ರೀನ್)ನಲ್ಲಿ ಒಂದರಲ್ಲಿ ಮಾತ್ರ ಕನ್ನಡ ಚಲನಚಿತ್ರ ಪ್ರದರ್ಶನ ಉಳಿದಂತೆ ಮೂರು ಕಡೆಗೆ ಅನ್ಯಭಾಷೆಯ ಚಲನಚಿತ್ರಗಳನ್ನು ಪ್ರದರ್ಶಿಸುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದರು.

ಕರವೇ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಜೈನ್ ಮಾತನಾಡಿ, ಮೀರಜ್ ಚಿತ್ರಮಂದಿರವು ಕನ್ನಡ ವಿರೋಧಿಯಾಗಿದೆ. ಕನ್ನಡ ರಾಜೋತ್ಸವ ದಿನದಂದೂ ಅನ್ಯಭಾಷೆಯ ಚಿತ್ರ ಪ್ರದರ್ಶನ ಮಾಡುವ ಮೂಲಕ ಕನ್ನಡ ಭಾಷೆಗೆ ಅಗೌರವ ತೋರುತ್ತಿದೆ. ಕೂಡಲೇ ಅನ್ಯಭಾಷೆ ಚಲನಚಿತ್ರ ಪ್ರದರ್ಶನ ರದ್ದುಪಡಿಸಬೇಕು, ಪ್ರೇಕ್ಷಕರಿಗೆ ಹಣ ಮರಳಿ ನೀಡಬೇಕು ಎಂದು ಆಗ್ರಹಿಸಿದರು.

ಚಿತ್ರಮಂದಿರದ ವ್ಯವಸ್ಥಾಪಕರು ಕೂಡಲೇ ಎಚ್ಚೆತ್ತುಕೊಂಡು ಪ್ರೇಕ್ಷಕರಿಗೆ ಹಣ ಮರಳಿ ನೀಡಿ, ಅನ್ಯಭಾಷೆಯ ಚಿತ್ರಗಳ ಪ್ರದರ್ಶನವನ್ನು ಸ್ಥಗಿತಗೊಳಿಸಿ ಕನ್ನಡ ಚಿತ್ರಗಳನ್ನು ಪ್ರದರ್ಶನಕ್ಕೆ ಮುಂದಾದರು. ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಾದ ಸುಧಾಕರ ಕುರ್ಡಿ, ಮಲ್ಲಿಕಾರ್ಜುನ, ರಂಗಮುನಿದಾಸ, ಅಜೀಜ್, ಪ್ರಕಾಶ ಸೇರಿದಂತೆ ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.