ಸಾರಾಂಶ
ತರೀಕೆರೆ, ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಅವಶ್ಯವಾಗಿದೆ. ಅಪರಿಚಿತರು ಹೆಣ್ಣು ಮಕ್ಕಳು ಕರೆದರೆ ಹೋಗಬಾರದು. ಅಪರಿಚಿತರನ್ನು ನಂಬಿ ಹೋದರೆ ನಿಮ್ಮನ್ನು ಅಪಹರಣ ಮಾಡಿ ಜೀವನ ಹಾಳು ಮಾಡುತ್ತಾರೆ ಎಚ್ಚರಿಕೆಯಿಂದ ರಿ ಎಂದು ಹಿರಿಯ ವಕೀಲ ಎಸ್.ಸುರೇಶ್ ಚಂದ್ರ ಹೇಳಿದರು.
ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ತರೀಕೆರೆಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಅವಶ್ಯವಾಗಿದೆ. ಅಪರಿಚಿತರು ಹೆಣ್ಣು ಮಕ್ಕಳು ಕರೆದರೆ ಹೋಗಬಾರದು. ಅಪರಿಚಿತರನ್ನು ನಂಬಿ ಹೋದರೆ ನಿಮ್ಮನ್ನು ಅಪಹರಣ ಮಾಡಿ ಜೀವನ ಹಾಳು ಮಾಡುತ್ತಾರೆ ಎಚ್ಚರಿಕೆಯಿಂದ ರಿ ಎಂದು ಹಿರಿಯ ವಕೀಲ ಎಸ್.ಸುರೇಶ್ ಚಂದ್ರ ಹೇಳೀದರು.
ತಾಲೂಕು ಕಾನೂನು ಅರಿವು ಸಮಿತಿ, ವಕೀಲರ ಸಂಘ, ಶಿಶು ಅಭಿವೃದ್ಧಿ ಇಲಾಖೆ, ತುದಿ ಪೇಟೆ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 18 ವರ್ಷ ತುಂಬಿದ ನಂತರ ಹೆಣ್ಣು ಮಕ್ಕಳು, 21ವರ್ಷ ತುಂಬಿದ ಗಂಡು ಮಕ್ಕಳು ಮದುವೆಯಾಗಬೇಕು. ಇದನ್ನು ಉಲ್ಲಂಘಿಸಿದರೆ ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗುತ್ತದೆ. ಇದನ್ನು ಬಾಲ್ಯವಿವಾಹ ಎಂದು ಕರೆಯುತ್ತಾರೆ ಎಂದು ಹೇಳಿದರು.ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ಅನುಪಾತದಲ್ಲಿ ಸಮಾನತೆ ಇರಬೇಕು. ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾನೂನು ಇದೆ ಎಂದು ಹೇಳಿದರು.
ಹಿರಿಯ ವಕೀಲ ಎಂ.ಕೆ.ತೇಜಮೂರ್ತಿ ಮಾತನಾಡಿ ಹೆಣ್ಣು ಮಕ್ಕಳು ಬಹಳ ಜಾಗೃತರಾಗಿ ಇರಬೇಕು. ನಿಮಗೆ ಸರ್ಕಾರ ಬಹಳ ರಕ್ಷಣೆ ನೀಡಿದೆ, ಧೈರ್ಯವಾಗಿ ಪರಿಸ್ಥಿತಿ ಎದುರಿಸಬೇಕು. ತೊಂದರೆ ಉಂಟಾದರೆ, ತಂದೆ ತಾಯಿ, ಶಾಲೆ ಉಪಾಧ್ಯಾಯರಿಗೆ ತಿಳಿಸಬೇಕು. ಕಾನೂನು ಎಲ್ಲರಿಗೂ ಒಂದೇ, ಶಾಲೆ ಉಪಾಧ್ಯಾಯರಿಗೆ ಒಳ್ಳೆಯ ಹೆಸರು ತಂದು ಒಳ್ಳೆಯ ವಿದ್ಯಾರ್ಥಿಗಳಾಗಲು ತಿಳಿಸಿದರು.ವಕೀಲರಾದ ಎನ್.ವೀರಭದ್ರಪ್ಪ ಮಾತನಾಡಿ ನಿಮಗೆ ತೊಂದರೆಯಾದರೆ ಮತ್ತು ಯಾರಾದರೂ ನಿಮ್ಮನ್ನು ಕೆಟ್ಟ ಕೆಲಸಕ್ಕೆ ಕರೆದರೆ ತಕ್ಷಣ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಲು ತಿಳಿಸಿದರು.
ಶಾಲೆ ಮುಖ್ಯೋಪಾಧ್ಯಾಯ ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 25ಕೆಟಿಆರ್.ಕೆ.8ಃ ತರೀಕೆರೆಯಲ್ಲಿ ತಾಲೂಕು ಕಾನೂನು ಅರಿವು ಸಮಿತಿ, ವಕೀಲರ ಸಂಘ, ಶಿಶು ಅಭಿವೃದ್ದಿ ಇಲಾಖೆ, ತುದಿ ಪೇಟೆ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಾಡಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದ ಉದ್ಗಾಟನೆಯನ್ನು ಹಿರಿಯ ವಕೀಲರಾದ ಎಸ್.ಸುರೇಶ್ ಚಂದ್ರ ಅವರು ನೆರವೇರಿಸಿದರು.ಹಿರಿಯ ವಕೀಲರಾದ ಎಂ.ಕೆ.ತೇಜಮೂರ್ತಿ, ವಕೀಲರಾದ ಎನ್.ವೀರಭದ್ರಪ್ಪ ಮತ್ತಿತರರು ಇದ್ದಾರೆ.