ಸಾರಾಂಶ
ಶೃಂಗೇರಿ, ಪ್ರತಿಯೊಬ್ಬ ವ್ಯಕ್ತಿಗೂ ನಮ್ಮ ಸಂವಿಧಾನದಲ್ಲಿ ಹಕ್ಕುಗಳನ್ನು ನೀಡಲಾಗಿದೆ. ಮಾನವ ಹಕ್ಕುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಶೃಂಗೇರಿ ಪೋಲೀಸ್ ಠಾಣೆ ಪಿಎಸ್ಐ ಎನ್.ಡಿ. ಜಕ್ಕಣನವರ್ ಹೇಳಿದರು.
ಭಾರತೀಯ ಮಾನವ ಹಕ್ಕುಗಳ ಸಂಸ್ಥೆ ತಾಲೂಕು ಘಟಕದ ಉದ್ಘಾಟನಾ ಸಮಾರಂಭ
ಕನ್ನಡಪ್ರಭ ವಾರ್ತೆ, ಶೃಂಗೇರಿಪ್ರತಿಯೊಬ್ಬ ವ್ಯಕ್ತಿಗೂ ನಮ್ಮ ಸಂವಿಧಾನದಲ್ಲಿ ಹಕ್ಕುಗಳನ್ನು ನೀಡಲಾಗಿದೆ. ಮಾನವ ಹಕ್ಕುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಶೃಂಗೇರಿ ಪೋಲೀಸ್ ಠಾಣೆ ಪಿಎಸ್ಐ ಎನ್.ಡಿ. ಜಕ್ಕಣನವರ್ ಹೇಳಿದರು.
ಪಟ್ಟಣದಲ್ಲಿ ನಡೆದ ಭಾರತೀಯ ಮಾನವ ಹಕ್ಕುಗಳ ಸಂಸ್ಥೆ ತಾಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸಮಾಜದ ಕಟ್ಚಕಡೆ ವ್ಯಕ್ತಿಗೂ ನ್ಯಾಯ ಸಿಗಬೇಕು. ಅನ್ಯಾಯ, ದೌರ್ಜನ್ಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ದೊರಕಿಸಿಕೊಡಲು ಮಾನವ ಹಕ್ಕು ಸಂಸ್ಥೆ ಕೆಲಸ ಮಾಡಬೇಕು. ಗ್ರಾಮಂತರ ಪ್ರದೇಶದ ಜನರಿಗೆ, ನೊಂದವರಿಗೆ ಕಾನೂನು ಅರಿವು ನೆರವು ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.ಸಮಾಜದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುವ ಕೆಲಸ ಮಾಡಬೇಕು. ಇದು ಭಾರತೀಯ ಮಾನವ ಹಕ್ಕು ಸಂಸ್ಥೆಯ ಮೂಲ ಉದ್ದೇಶವಾಗಬೇಕು. ಸಂಘ ಸಂಸ್ಥೆಗಳು ಸಾಂಘೀಕ ಮನೋಭಾವದಿಂದ ಕೆಲಸ ಮಾಡಬೇಕು. ಆಗಲೇ ಸಮಾಜದ ಉನ್ನತೀಕರಣ ಸಾಧ್ಯ ಎಂದರು.
ಸಂಸ್ಥೆ ರಾಜ್ಯಾಧ್ಯಕ್ಷ ನಾರಾಯಣ.ಜಿ ಈಳಿಗೇರ ಮಾತನಾಡಿ ಸಮಾಜದ ಏಳಿಗೆಗೆ ಭ್ರಷ್ಟಾಚಾರ ಮಾರಕವಾಗಿದೆ. ಆದರೆ ಸಮಾಜದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಇದನ್ನು ಬುಡ ಸಮೇತ ಕಿತ್ತುಹಾಕಬೇಕು. ಸಂಸ್ಥೆ ಭ್ರಷ್ಟಾಚಾರದ ವಿರುದ್ದ ಧ್ವನಿಯೆತ್ತುವ ಕೆಲಸ ಮಾಡುತ್ತದೆ ಎಂದರು. ಇದೇ ಸಂದರ್ಭದಲ್ಲಿ ಸಂಸ್ಥೆ ಪದಾಧಿಕಾರಿಗಳಿಗೆ ಗುರುತಿನ ಚೀಟಿ ಹಾಗೂ ಆದೇಶ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆ ಗಿರಿಧರ್, ಜಿ.ವಿ.ಮೋಹನ್, ನವೀನ್ ಕುಮಾರ್, ವೇಣುಗೋಪಾಲ್, ಮಹೇಶ್, ಬಾಲಗಂಗಾಧರ್ ಮತ್ತಿತರರು ಇದ್ದರು.21 ಶ್ರೀ ಚಿತ್ರ 1-
ಶೃಂಗೇರಿ ತಾಲೂಕು ಭಾರತೀಯ ಮಾನವ ಹಕ್ಕುಗಳ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಪಿಎಸ್ಐ ಎನ್.ಡಿ.ಜಕ್ಕಣನವರ್ ಮಾತನಾಡಿದರು.