ಅಂಬ್ಲಮೊಗರು ಗ್ರಾಮದಲ್ಲಿ ಕೃಷಿ ಭೂಮಿ ಕಬಳಿಕೆ ವಿರೋಧಿಸಿ ಪ್ರತಿಭಟನೆ

| Published : Feb 12 2025, 12:34 AM IST

ಸಾರಾಂಶ

ಖಾಸಗಿ ಭೂ ಕಬಳಿಕೆದಾರರು ಕೃಷಿ ಭೂಮಿಯನ್ನು ಎಗ್ಗಿಲ್ಲದೆ ಕಬಳಿಸುತ್ತಿದ್ದು, ರೈತರ ಬದುಕನ್ನು ಅಸಹನೀಯಗೊಳಿಸುತ್ತಿದ್ದಾರೆ. ರೈತರ ಭೂಮಿ, ಬದುಕನ್ನು ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿ ಅಂಬ್ಲಮೊಗರು ಗ್ರಾಮಸ್ಥರು, ಕೃಷಿಭೂಮಿ ಸಂರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಗರದ ಮಿನಿ ವಿಧಾನಸೌಧ ಎದುರು ಬೃಹತ್‌ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಂಬ್ಲಮೊಗರು ಗ್ರಾಮದಲ್ಲಿ ಖಾಸಗಿ ಭೂ ಕಬಳಿಕೆದಾರರು ಕೃಷಿ ಭೂಮಿಯನ್ನು ಎಗ್ಗಿಲ್ಲದೆ ಕಬಳಿಸುತ್ತಿದ್ದು, ರೈತರ ಬದುಕನ್ನು ಅಸಹನೀಯಗೊಳಿಸುತ್ತಿದ್ದಾರೆ. ರೈತರ ಭೂಮಿ, ಬದುಕನ್ನು ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿ ಅಂಬ್ಲಮೊಗರು ಗ್ರಾಮಸ್ಥರು, ಕೃಷಿಭೂಮಿ ಸಂರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಗರದ ಮಿನಿ ವಿಧಾನಸೌಧ ಎದುರು ಬೃಹತ್‌ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್‌ ಕಾಟಿಪಳ್ಳ, ಹೋರಾಟ ಸಮಿತಿಯ ಗೌರವ ಸಲಹೆಗಾರ ಸುನಿಲ್ ಕುಮಾರ್ ಬಜಾಲ್ ಮಾತನಾಡಿದರು. ರೈತ ಸಂಘಟನೆಯ ಜಿಲ್ಲಾ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಕೆ. ಯಾದವ ಶೆಟ್ಟಿ ಮಾತನಾಡಿದರು. ಮುಖಂಡರಾದ ಶೇಖರ್ ಕುಂದರ್, ವಿಶ್ವನಾಥ್ ತೇವುಲ, ಕಾರ್ಮಿಕ ಮುಖಂಡರಾದ ಸುಂದರ ಕುಂಪಲ, ವಿಲಾಸಿನಿ, ಪ್ರಮೋದಿನಿ, ಜನಾರ್ಧನ ಕುತ್ತಾರ್, ರಫೀಕ್ ಹರೇಕಳ, ಅನ್ಸಾರ್ ಬಜಾಲ್, ಜಯರಾಮ ತೇವುಲ, ಲೋಕೇಶ್ ಅಳಪೆ, ಯುವಜನ ನಾಯಕರಾದ ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ನವೀನ್ ಕೊಂಚಾಡಿ, ವಿದ್ಯಾರ್ಥಿ ನಾಯಕರಾದ ವಿನುಷ ರಮಣ, ಕೋಶಿನ್, ಮಾಜಿ ತಾಲೂಕು ಪಂಚಾಯ್ತಿ ಸದಸ್ಯೆ ಶಾಲಿನಿ ಪೂಜಾರಿ, ಮುನ್ನೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮಹಾಬಲ ದೆಪ್ಪಲಿಮಾರ್, ಪಂಚಾಯ್ತಿ ಸದಸ್ಯೆ ರಾಜೇಶ್ವರಿ ಮತ್ತಿತರರು ಇದ್ದರು.

ಬಳಿಕ ಹೋರಾಟ ಸಮಿತಿಯ ನಿಯೋಗ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ತಹಸೀಲ್ದಾರ್‌ ಮೂಲಕ ಮನವಿ ಸಲ್ಲಿಸಿತು.