ಬಬಲೇಶ್ವರ ತಾ.ಪಂ ಇಒ ವಿರುದ್ಧ ಪ್ರತಿಭಟನೆ

| Published : Jan 04 2024, 01:45 AM IST

ಸಾರಾಂಶ

ಬಬಲೇಶ್ವರ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಪಠಾಣ ಅವರು ವಾಹನ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಹೋರಾಟಗಾರ ಭೀರಪ್ಪ ಸೊಡ್ಡಿ ಗಂಭೀರ ಆರೋಪ ಮಾಡಿದರು

ಕನ್ನಡಪ್ರಭ ವಾರ್ತೆ ತಿಕೋಟಾ

ಬಬಲೇಶ್ವರ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಪಠಾಣ ಅವರು ವಾಹನ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಹೋರಾಟಗಾರ ಭೀರಪ್ಪ ಸೊಡ್ಡಿ ಗಂಭೀರ ಆರೋಪ ಮಾಡಿದರು. ಬಬಲೇಶ್ವರದಲ್ಲಿ ಮಂಗಳವಾರದಿಂದ ಪ್ರಾರಂಭವಾಗಿರುವ ರೈತರ ಸಂಘ, ಜೈ ಜವಾನ ಜೈ ಕಿಸಾನ, ಜೈ ಭಾರತ ಮಾತೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಬಲೇಶ್ವರ ಇವರ ಸಹಯೋಗದಲ್ಲಿ ಬಬಲೇಶ್ವರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಬ್ರಹ್ಮಾಂಡ ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, 15ನೇ ಹಣಕಾಸಿನ ಯೋಜನೆಯಡಿ ಖರೀದಿಸಿದ ಸಕ್ಕಿಂಗ್ ಮತ್ತು ಜಟ್ಟಿಂಗ್ ಮಶಿನ ವಾಹನದ ನೋಂದಣಿ ಸಂಖ್ಯೆ, ಅರ್ ಸಿ ಬುಕ್ಕ, ಪರಮಿಟ್‌ ಹಾಗೂ ಇನ್ಸೂರನ್ಸ ದಾಖಲಾತಿಗಳ ನಕಲು ಪ್ರತಿ ನೀಡುತ್ತಿಲ್ಲ ಎಂದು ದೂರಿದರು. ಈ ವೇಳೆ ಪ್ರಕಾಶ ಸೊಡ್ಡಿ, ಗುರಪ್ಪ ಜಂಗಮಶೆಟ್ಟೆ, ಶ್ರೀಶ್ಲಲಗೌಡ ಬಿರಾದಾರ, ಸಿದ್ದು ವಾಣಿ, ಮೋತಿರಾವ ಪವಾರ, ಪ್ರಶಾಂತ ಬಿರಾದಾರ, ಸಂಗು ಜೃನಾಪುರ, ವಿಠಲ ನಾಟೀಕಾರ, ರಂಜಾನ ಮುಜಾವರ, ಶಂಕರ ಹಾಲಳ್ಳಿ, ಸಾಬು ತೇರದಾಳ ಇದ್ದರು,

,