ಸಾರಾಂಶ
ಗಂಗಾವತಿ: ಅಂಗನವಾಡಿ ಯೋಜನೆ ಬಜೆಟ್ ಕಡಿತ, ಗೌರವಧನ ಹೆಚ್ಚಿಸದ ಕೇಂದ್ರ ಸರ್ಕಾರದ ವಿರುದ್ಧ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷೆ ಎಂ.ಮೇರಿ, ರಾಮರಾಜ್ಯ ಎನ್ನುವ ಸರ್ಕಾರದ ಹಸಿವಿನ ಸೂಚ್ಯಂಕ 111ನೇ ಸ್ಥಾನದಿಂದ ಭಾರತವನ್ನು ಮೇಲೆತ್ತಲು ಯಾವ ಪ್ರಯತ್ನವನ್ನೂ ಬಜೆಟ್‌ನಲ್ಲಿ ಮಾಡಲಿಲ್ಲ ಎಂದು ದೂರಿದರು.ಅನುದಾನ ಕಡಿತದಿಂದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ವೇತನ ವಿಳಂಬ, ಬಾಡಿಗೆ ಪಾವತಿ, ಪೌಷ್ಟಿಕ ಆಹಾರಕ್ಕಾಗಿ ಅನುದಾನವು ಕಾಲಾನುಕಾಲಕ್ಕೆ ಬಿಡುಗಡೆ ಆಗಿಲ್ಲ. ಬಜೆಟ್ ಕಡಿತಗೊಳಸುವ ಪರಿಕಲ್ಪನೆಯಿರುವ ಸರ್ಕಾರ 2 ಕೋಟಿ ತಾಯಂದಿರ, 8 ಕೋಟಿ ಮಕ್ಕಳ ಆರೋಗ್ಯ ಆಹಾರ, ಶಿಕ್ಷಣ ಹಕ್ಕನ್ನು ಕಾಪಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.ಫೆ.16ರಂದು ದೇಶಾದ್ಯಂತ ಮೊತ್ತೊಮ್ಮೆ ಅಂಗನವಾಡಿ ನೌಕರರು ಪ್ರತಿಭಟನೆಗೆ ಇಳಿಯಲಿದ್ದಾರೆ ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ದುರಗಮ್ಮ, ನಿರುಪಾದಿ ಬೆಣಕಲ್, ಮುಮ್ತಾಜ್ ಬೇಗಂ, ಗುರುಲಿಂಗಮ್ಮ, ಶಿವಬಸಮ್ಮ, ಸಂಗೀತಾ, ಜಲಾದೇವಿ, ಲಲಿತಾ ಭಾಗವಹಿಸಿದ್ದರು.