ಸಾರಾಂಶ
ನರಗುಂದ: ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ವಿವಿಧ ಸಂಘಟನೆಗಳು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಛತ್ರಪತಿ ಶಿವಾಜಿ ವೃತ್ತದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಯುವಕ ಮಂಡಳ, ವಿವಿಧ ಕನ್ನಡಪರ ಸಂಘಟನೆ ಹುಬ್ಬಳ್ಳಿ-ಸೋಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಗೃಹ ಸಚಿವರ ವಿರುದ್ಧ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿರು.ಆ ನಂತರ ಮಾತನಾಡಿದ ಸಂಘಟನೆಯ ಮುಖಂಡರು, ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಅಂಬೇಡ್ಕರ ಅವಹೇಳನಕಾರಿ ಪದ ಬಳಸಿದ್ದು ಸೂಕ್ತವಲ್ಲ, ಸಮಸ್ತ ಭಾರತೀಯ, ದಲಿತ ಬಾಂಧವರ ಭಾವನೆಗೆ ಧಕ್ಕೆ ಆಗಿದ್ದು ಇದು ಅಂಬೇಡ್ಕರಗೆ ಮಾಡಿದ ಅವಮಾನ ಅಷ್ಟೆ ಅಲ್ಲ ಇಡೀ ರಾಷ್ಟ್ರದ ಘನತೆಗೆ ಧಕ್ಕೆ ಉಂಟಾಗಿದ್ದು ತಕ್ಷಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯ ಮಾಡಿದರು.
ತಹಸೀಲ್ದಾರ್ ಶ್ರೀಶೈಲ ತಳವಾರ ಮನವಿ ಸ್ವೀಕರಿಸಿ ರಾಜ್ಯಪಾಲರಗೆ ರವಾನೆ ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ದತ್ತು ಜೋಗಣ್ಣವರ, ಗುರುನಾಥ ದೊಡ್ಡಮನಿ, ಯಶವಂತ ನಡುವಿನಮನಿ, ಲಿಂಗಣ್ಣ ಕಾಳೆ, ಯಲ್ಲಪ್ಪ ರಂಗಣ್ಣವರ, ಎಸ್.ಕೆ. ದಂಡಾಪೂರ, ವಾಸು ಹೆಬ್ಬಾಳ, ಕೃಷ್ಣಾ ಗೊಂಬಿ, ಚನ್ನಬಸು ಹುಲಜೋಗಿ, ಕೃಷ್ಣಾಪ್ಪ ಜೋಗಣ್ಣವರ, ರವಿ ಚಿಂತಾಲ, ವಿಜಯ ಚಲವಾದಿ, ಐ.ಪಿ. ಚಂದಣ್ಣವರ, ಡಿ.ಎಸ್. ಜೋಗಣ್ಣವರ, ರವಿ ಪೂಜಾರ, ಕಾಶಿನಾಥ ರಂಗಣ್ಣವರ, ದಾವಲಸಾಬ್ ರಾಜೇಖಾನ, ಇಬ್ರಾಹಿಂ ಸವಟಿಗಿ ಸೇರಿದಂತೆ ಮುಂತಾದವರು ಇದ್ದರು.