ಸಾರಾಂಶ
ರಬಕವಿ-ಬನಹಟ್ಟಿ: ಡಾ.ಅಂಬೇಡ್ಕರ್ ಪ್ರತಿಮೆಗೆ ಅವಮಾನ ಖಂಡಿಸಿ ರಬಕವಿ-ಬನಹಟ್ಟಿಯಲ್ಲಿ ಅಂಬೇಡ್ಕರ್ ಸೇನೆ, ದಲಿತ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನಗರದ ಗಾಂಧಿ ವೃತ್ತದಿಂದ ಎಂ.ಎಂ. ಬಂಗ್ಲೆವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಿತು. ನಂತರ ಅಂಬೇಡ್ಕರ್ ಸೇನೆಯ ಉತ್ತರ ಪ್ರಾಂತ ಅಧ್ಯಕ್ಷ ಶಿವಲಿಂಗ ಗೊಂಬಿಗುಡ್ಡ ಮಾತನಾಡಿ, ಕಲಬುರಗಿ ನಗರದ ಕೋಟನೂರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಉಗ್ರಗಾಮಿಗಳೆಂದು ಪರಿಗಣಿಸಿ ಕಠಿಣ ಶಿಕ್ಷೆಗೆ ಗುರಿಪರಿಸಬೇಕೆಂದು ತಹಸೀಲ್ದಾರಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಅಂಬೇಡ್ಕರ್ ಪ್ರತಿಮೆಗೆ ಅವಮಾನ ಖಂಡಿಸಿ ರಬಕವಿ-ಬನಹಟ್ಟಿಯಲ್ಲಿ ಅಂಬೇಡ್ಕರ್ ಸೇನೆ, ದಲಿತ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ನಗರದ ಗಾಂಧಿ ವೃತ್ತದಿಂದ ಎಂ.ಎಂ. ಬಂಗ್ಲೆವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಿತು. ನಂತರ ಅಂಬೇಡ್ಕರ್ ಸೇನೆಯ ಉತ್ತರ ಪ್ರಾಂತ ಅಧ್ಯಕ್ಷ ಶಿವಲಿಂಗ ಗೊಂಬಿಗುಡ್ಡ ಮಾತನಾಡಿ, ಕಲಬುರಗಿ ನಗರದ ಕೋಟನೂರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಉಗ್ರಗಾಮಿಗಳೆಂದು ಪರಿಗಣಿಸಿ ಕಠಿಣ ಶಿಕ್ಷೆಗೆ ಗುರಿಪರಿಸಬೇಕೆಂದು ತಹಸೀಲ್ದಾರಗೆ ಮನವಿ ಸಲ್ಲಿಸಿದರು.
ಹೀನದೃಷ್ಟಿಯ ಮನಸ್ಥಿತಿಯವರಿಂದ ಕೃತ್ಯ ನಡೆದಿದ್ದು, ಅಗೌರವ ತೋರುವ ಬಟಾಲಿಯನ್ ಬಂಧಿಸಿ ಇವರ ಹಿಂದಿನ ವ್ಯಕ್ತಿಗಳ ಬಗ್ಗೆ ತನಿಖೆಯಾಗಬೇಕೆಂದು ಗೊಂಬಿಗುಡ್ಡ ಆಗ್ರಹಿಸಿದರು.ಬಂದ್ ಹಿಂಪಡೆತ : ತಾಲೂಕು ಬಂದ್ ಘೋಷಿಸಿದ್ದ ಸಂಘಟನೆಗಳು ಜನರ ಅನುಕೂಲಕ್ಕಾಗಿ ಹಾಗೂ ವ್ಯಾಪಾರಿಗಳ ಮನವಿಗೆ ಸ್ಪಂದಿಸುವ ಮೂಲಕ ಬಂದ್ ವಾಪಸ್ ಪಡೆದಿದ್ದ ಕಾರಣ ಎಂದಿನಂತೆ ವ್ಯಾಪಾರ ವಹಿವಾಟ, ಬಸ್ ಸಂಚಾರ ಯಥಾಸ್ಥಿತಿಯಿತ್ತು.
ತಹಸೀಲ್ದಾರ್ ವಿಳಂಬ : ಪ್ರತಿಭಟನಾಕಾರರಿಂದ ರಸ್ತೆ ಮೇಲೆ ಮಾನವ ಸರಪಳಿ ಮಾಡಿದ್ದ ಕಾರಣ ಜಮಖಂಡಿ-ಕುಡಚಿ ರಸ್ತೆ ಕೆಲ ಕಾಲ ಸ್ಥಗಿತಗೊಂಡಿತ್ತು. ಮನವಿ ಸ್ವೀಕರಿಸಲು ತಹಸೀಲ್ದಾರ್ ವಿಳಂಬವಾಗಿ ಆಗಮಿಸಿದ ಕಾರಣ ಸಂಚಾರ ಮತ್ತಷ್ಟು ವಿಳಂಬಕ್ಕೆ ಕಾರಣವಾಯಿತು. ಶಿವಾನಂದ ಕಾಂಬಳೆ, ರಮೇಶ ಕಾಂಬಳೆ, ರವಿ ಕರಿಶೆಟ್ಟಿ, ದಿಲೀಪ ಕಾಂಬಳೆ, ಈರಪ್ಪ ಕಾಂಬಳೆ, ರಾಕೇಶ ಸಿಂಘೆ, ನರಸಿಂಹ ಗಡಕರ, ದಾನೇಶ ಭಜಂತ್ರಿ, ಪ್ರಭಾಕರ ಚಲವಾದಿ, ಚಂದ್ರು ಹರಿಜನ ಸೇರಿದಂತೆ ಅನೇಕರಿದ್ದರು.