ಶಿವಾಜಿ ಭಾವಚಿತ್ರಕ್ಕೆ ಅವಮಾನ ಖಂಡಿಸಿ ಪ್ರತಿಭಟನೆ

| Published : Nov 23 2023, 01:45 AM IST

ಸಾರಾಂಶ

ಛತ್ರಪತಿ ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿರುವ ಘಟನೆ ಖಂಡಿಸಿ ತಾಲೂಕಿನ ಹಿಂದೂ ಸಮಾಜ ಹಾಗೂ ಮರಾಠ ಸಮಾಜದ ಬಾಂಧವರು ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕಲಘಟಗಿ

ಛತ್ರಪತಿ ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿರುವ ಘಟನೆ ಖಂಡಿಸಿ ತಾಲೂಕಿನ ಹಿಂದೂ ಸಮಾಜ ಹಾಗೂ ಮರಾಠ ಸಮಾಜದ ಬಾಂಧವರು ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಎಪಿಎಂಸಿಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಆಂಜನೇಯ ಸರ್ಕಲ್ ಮೂಲಕ ತಹಸೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಉಪ ತಹಸೀಲ್ದಾರ್ ಬಸವರಾಜ ಹೊಂಕಣ್ಣವರ ಅವರಿಗೆ ಮನವಿ ಸಲ್ಲಿಸಲಾಯಿತು.

ಶಿವಾಜಿ ಮಹಾರಾಜರನ್ನು ಕೇವಲ ಒಂದು ಜಾತಿ ಮತ್ತು ಧರ್ಮಕ್ಕೆ ಸೀಮೀತಗೊಳಿಸಬೇಡಿ. ಅವರು ಅಖಂಡ ಭಾರತ ಸಂಕಲ್ಪ ಹೊತ್ತವರು. ಭಾರತೀಯರಲ್ಲಿ ಸಮಾನತೆ ತರಲು ಹೋರಾಡಿದವರು. ಸ್ವರಾಜ್ಯದ ಸ್ವಾಭಿಮಾನದ ಕಲ್ಪನೆ ಮೂಡಿಸಿದವರು. ಇಂತಹ ಮಹಾನ್ ವ್ಯಕ್ತಿಗೆ ಅಪಮಾನ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲಘಟಗಿ ತಾಲೂಕಿನಲ್ಲಿ ಎಲ್ಲರೂ ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಮುಗ್ಧ ಜನರ ಭಾವನೆಗಳ ಜೊತೆ ಆಟ ಆಡುವುದು ಸರಿಯಲ್ಲ. ತಾಲೂಕು ಸರ್ವಧರ್ಮಗಳ ಶಾಂತಿಯುತ ಬೀಡಾಗಿದೆ. ಕೆಲವು ಅಪಾಯಕಾರಿ ಶಕ್ತಿಗಳು ಶಾಂತಿ ಕದಡುವ ಕೃತ್ಯ ಮಾಡುತ್ತಿವೆ. ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಮುಖಂಡರಾದ ಮಹಾಂತೇಶ ತಹಸೀಲ್ದಾರ್, ಸದಾನಂದ ಚಿಂತಾಮಣಿ, ಫಕ್ಕಿರೇಶ ನೇಸರೇಕರ, ಶಶಿ ನಿಂಬಣ್ಣವರ, ಬಾಬು ಅಂಚಟಗೇರಿ, ನಿಂಗಪ್ಪ ಸುತಗಟ್ಟಿ, ಪರಶುರಾಮ ದುಂಡಿ, ಪರಶುರಾಮ ಹುಲಿಹೊಂಡ, ಗುರು ದಾನೇನವರ, ಸೋಮು ಕೊಪ್ಪದ, ಸುರೇಶ ಶೀಲವಂತರ, ಪುಂಡಲೀಕ ಜಾಧವ, ಬಸವರಾಜ ಕಡ್ಲಾಸ್ಕರ್, ರಾಘವೇಂದ್ರ ಹುಲಿಹೊಂಡ, ಬಸವರಾಜ ಹೊನ್ನಿಹಳ್ಳಿ, ಸಾಯಿ ಯಲ್ಲಾಪುರಕರ, ದುಂಡಿಬಾ ತಾಂಬೆ, ಮಾರುತಿ ಏಕೂಲಿ, ಬಸವರಾಜ ಮಾದರ, ಶ್ರೀಧರ ದ್ಯಾವಪ್ಪನವರ, ಸಚಿನ್ ಪವಾರ, ಚಂದ್ರಗೌಡ ಪಾಟೀಲ, ಮಂಜುನಾಥ ಕೋಟಿ, ಅಶೋಕ ತೇಗಣ್ಣವರ, ಅಶೋಕ ಮಿಶ್ರಿಕೋಟಿ, ಗಣೇಶ ವಾಲೀಕಾರ, ಕಿರಣ ದೈವಜ್ಞ ಸೇರಿದಂತೆ ಯುವಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.