ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ನಗರದ ಕಲರ್ ಕ್ರಿಯೇಷನ್ ಗಾರ್ಮೆಂಟ್ಸ್ ಒಂದರಲ್ಲಿ ವೇತನ ನೀಡದೆ ಕಿರುಕುಳ ನೀಡುತ್ತಿರುವ ಕಾರ್ಖಾನೆ ಮಾಲೀಕನ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.ನಗರದ ವಾಣಿ ಟಾಕೀಸ್ ಹಿಂಭಾಗದ ರಸ್ತೆಯಲ್ಲಿರುವ ಈ ಕಾರ್ಖಾನೆಯಲ್ಲಿ ನಲವತ್ತು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಮೂರು ತಿಂಗಳಿಂದ ವೇತನ ನೀಡದೆ, ಮಾಲೀಕ ಜಯಕುಮಾರ್ ಕಿರುಕುಳ ನೀಡುತ್ತಿದ್ದಾರೆ, ವೇತನ ನೀಡುವಂತೆ ಕೇಳಿದರೆ ಸುಮಾರು ಮೂರು ತಿಂಗಳಿನಿಂದ ಸಬೂಬು ಹೇಳಿಕೊಂಡು ಬರುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ಕಾರ್ಮಿಕರು ಆರೋಪಿಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮೂರು ತಿಂಗಳಿಂದ ವೇತನವಿಲ್ಲದೆ ಸಂಸಾರ ನಡೆಸಲು ಸಾಧ್ಯವಾಗದೆ ಭಿನ್ನಾಭಿಪ್ರಾಯಗಳು ಪ್ರಾರಂಭವಾಗಿವೆ, ದಿನನಿತ್ಯದ ಬಳಕೆಯ ವಸ್ತುಗಳು, ಆಹಾರ ಸಾಮಗ್ರಿಗಳು, ಹಾಲು, ಮನೆ ಬಾಡಿಗೆ, ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಪಡೆದಿರುವ ಸಾಲಗಳನ್ನು ಕಟ್ಟಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾರ್ಮಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.ಸಂಬಳ ವಿಷಯವಾಗಿ ನಾವುಗಳು ಎಷ್ಟು ಬಾರಿ ಫೋನ್ ಮಾಡಿದರೂ ಮಾಲಿಕರು ತೆಗೆಯುವುದಿಲ್ಲ. ವಾಯ್ಸ್ ಮೆಸೇಜ್ ಮಾಡಿದರೂ ಉತ್ತರ ನೀಡುತ್ತಿಲ್ಲ, ವೇತನ ವಿಲ್ಲದೇ ಹಲವಾರು ಸಮಸ್ಯೆಗಳು ಎದುರಾಗಿದ್ದು, ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾರ್ಮಿಕರು ತಮ್ಮ ನೋವು ತೋಡಿಕೊಂಡಿದ್ದಾರೆ.
ಸಮಸ್ಯೆ ಉಲ್ಬನಗೊಂಡಿರುವುದರಿಂದ ತಮಗೆ ನ್ಯಾಯ ಕೊಡಿಸುವಂತೆ ಕಾರ್ಮಿಕ ಇಲಾಖೆ ಮೊರೆ ಹೋಗಿದ್ದು ನಮಗೆ ವೇತನ ನೀಡುವವರೆಗೂ ಕೆಲಸವನ್ನು ಮಾಡದೆ ಕಾರ್ಖಾನೆ ಆವರಣದಲ್ಲೇ ಪ್ರತಿಭಟನೆ ನಡೆಸುವುದಾಗಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.ಬಾಕ್ಸ್ :ಕಲರ್ ಕ್ರಿಯೇಷನ್ ಗಾರ್ಮೆಂಟ್ಸ್ ಕಾರ್ಮಿಕರಿಗೆ ವೇತನ ನೀಡದೆ ಕಿರುಕುಳ ನೀಡುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿರುತ್ತದೆ, ಕಾರ್ಖಾನೆ ಮಾಲೀಕ ಜಯಕುಮಾರ್ ಅವರಿಗೆ ನೋಟಿಸ್ ನೀಡಲಾಗಿದೆ,ಉದ್ದಿಮೆ ಪ್ರಮಾಣಪತ್ರ ಪಡೆದಿರುವ ಬಗ್ಗೆ ನಗರಸಭಾ ಆಯುಕ್ತರಿಂದ ಮಾಹಿತಿಯನ್ನು ಕೇಳಲಾಗಿದೆ ಹಾಗೂ ಕಾರ್ಮಿಕರಿಂದ ವರದಿಯನ್ನು ಪಡೆಯಲಾಗಿದೆ, ಮೂರು ದಿನಗಳ ಒಳಗಾಗಿ ಕಾರ್ಖಾನೆ ಮಾಲೀಕರು ಪ್ರತಿಕ್ರಿಯೆ ನೀಡದಿದ್ದರೆ ನ್ಯಾಯಾಲಯದಲ್ಲಿ ದೂರು ದಾಖಲು ಮಾಡಲಾಗುವುದು.
ಜಯಪ್ರಕಾಶ್, ಕಾರ್ಮಿಕ ನಿರೀಕ್ಷಕಕೆ ಕೆ ಪಿ ಸುದ್ದಿ 01: ನಗರದ ವಾಣಿ ಟಾಕೀಸ್ ಬಳಿಯಿರುವ ಗಾರ್ಮೆಂಟ್ಸ್ ನೌಕರರು ವೇತನ ನೀಡದ ಮಾಲಿಕನ ವಿರುದ್ಧ ಪ್ರತಿಭಟನೆ ನಡೆಸಿದರು