ಚಿಕ್ಕಮಗಳೂರುಆಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಾಗರಹಳ್ಳಿ ಗ್ರಾಮದ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾಲುದಾರಿ ಜಾಗವನ್ನು ಒತ್ತವರಿ ಮಾಡಿರುವ ಸಿ.ವಿ ವಿಜೇಂದ್ರ ಅವರು ಕೂಡಲೇ ಒತ್ತುವರಿ ತೆರವು ಮಾಡುವಂತೆ ಒತ್ತಾಯಿಸಿ ರೈತ ಸಂಘದ ಮುಖಂಡರು ಸೋಮವಾರ ಜಿಪಂ ಎದುರು ಪ್ರತಿಭಟನೆ ನಡೆಸಿ ಜಿಪಂ ಉಪಕಾರ್ಯದರ್ಶಿ ಗೌರವ್ ಕುಮಾರ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಆಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಾಗರಹಳ್ಳಿ ಗ್ರಾಮದ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾಲುದಾರಿ ಜಾಗವನ್ನು ಒತ್ತವರಿ ಮಾಡಿರುವ ಸಿ.ವಿ ವಿಜೇಂದ್ರ ಅವರು ಕೂಡಲೇ ಒತ್ತುವರಿ ತೆರವು ಮಾಡುವಂತೆ ಒತ್ತಾಯಿಸಿ ರೈತ ಸಂಘದ ಮುಖಂಡರು ಸೋಮವಾರ ಜಿಪಂ ಎದುರು ಪ್ರತಿಭಟನೆ ನಡೆಸಿ ಜಿಪಂ ಉಪಕಾರ್ಯದರ್ಶಿ ಗೌರವ್ ಕುಮಾರ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.ಸಿ.ಎಂ ಪ್ರೇಮ ಮತ್ತು ವಿಜೇಂದ್ರ ಎಂ.ಕೆ ಅವರ ಮನೆ ಮುಂಭಾಗದಲ್ಲಿ ಇದ್ದ ಕಾಲುದಾರಿ ಸೇರಿದಂತೆ ಏಳು ಕುಂಟೆ ಜಾಗ ಒತ್ತುವರಿ ಮಾಡಿ ಕಾಂಪೌಡ್ ನಿರ್ಮಿಸಿರುವುದರಿಂದ ಅಲ್ಲಿಯೇ 9 ಮನೆಗಳಲ್ಲಿ ವಾಸವಿರುವ ಜನರಿಗೆ ಓಡಾಡಲು ರಸ್ತೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಅರ್ಜಿ ವಿಚಾರಣೆಯಲ್ಲೂ ಗ್ರಾಪಂ ಜಾಗವೆಂದು ತಿಳಿದು ಬಂದಿದೆ. ಆಲ್ದೂರು ಗ್ರಾಮ ಪಂಚಾಯಿತಿಗೆ ಮೇಲಧಿಕಾರಿಗಳು ಒತ್ತವರಿ ತೆರುವುಗೊಳಿಸುವಂತೆ ನೋಟಿಸ್ ನೀಡಿದ್ದರೂ ಸಹ ಅಧಿಕಾರಿಗಳ ಆದೇಶವನ್ನು ಧಿಕ್ಕರಿಸಲಾಗಿದೆ ಎಂದು ಆರೋಪಿಸಿದರು.ಮನೆಯಲ್ಲಿ ತುರ್ತು ಸಂದರ್ಭ ಸೇರಿದಂತೆ ಯಾವುದೇ ಸಮಾರಂಭ ಹಾಗೂ ಚಿಕಿತ್ಸೆಗಾಗಲಿ ಓಡಾಡಲು ತೊಂದರೆ ಯಾಗುತ್ತದೆ ಎಂದು ಕೇಳಿಕೊಂಡರೂ ಅಧಿಕಾರಿಗಳು ಹೇಮಂತ್ ಅವರಿಗೆ ನ್ಯಾಯ ದೊರಕಿಸಿ ಕೊಡಲು ಪ್ರಯತ್ನಿಸದೇ ಇರುವುದು ಸಂದೇಹವನ್ನುಂಟು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ಜಿಲ್ಲಾ ಉಪಾಧ್ಯಕ್ಷ ಕುಮಾರ ಸ್ವಾಮಿ. ಗೌರವಾಧ್ಯಕ್ಷ ಎಂ.ಸಿ ಬಸವರಾಜ್, ಜಿಲ್ಲಾ ವಕ್ತಾರ ಶಿವಣ್ಣ, ಯುವ ಘಟಕ ಜಿಲ್ಲಾಧ್ಯಕ್ಷ ಯುವರಾಜ್, ಸಂಘಟನಾ ಕಾರ್ಯದರ್ಶಿ ಜೀವನ್, ಪ್ರಮುಖರಾದ ಹೇಮಂತ್ ಮತ್ತಿತರರಿದ್ದರು.ಫೋಟೋ:ಚಿಕ್ಕಮಗಳೂರು ಜಿಪಂ ಎದುರು ಪ್ರತಿಭಟನೆ ನಡೆಸಿದ ರೈತ ಸಂಘದ ಪದಾಧಿಕಾರಿಗಳು ಆಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಾಗರಹಳ್ಳಿ ಗ್ರಾಮದ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾಲುದಾರಿ ಜಾಗವನ್ನು ಸಿ.ವಿ ವಿಜೇಂದ್ರ ಅವರು ಒತ್ತವರಿ ಮಾಡಿಕೊಂಡಿದ್ದು, ಕೂಡಲೇ ಒತ್ತುವರಿ ತೆರವು ಮಾಡುವಂತೆ ಒತ್ತಾಯಿಸಿದರು. ಡಿ.ಮಹೇಶ್, ಹೇಮಂತ್, ಕುಮಾರಸ್ವಾಮಿ, ಎಂ.ಸಿ.ಬಸವರಾಜ್ ಮತ್ತಿತರರಿದ್ದರು.