ಗೃಹ ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ

| Published : Dec 21 2024, 01:17 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಅಂಬೇಡ್ಕರ್ ಕುರಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಯನ್ನು ಖಂಡಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಅಲ್ಪಸಂಖ್ಯಾತ ಮುಸ್ಲಿಂ ಅಭಿವೃದ್ಧಿ ಸಮಿತಿ ಪ್ರತಿಭಟನೆ ನಡೆಸಿ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು. ಅಂಬೇಡ್ಕರ್ ಅವರ ಗೌರವವನ್ನು ಕಾಪಾಡುವ ಸಲುವಾಗಿ ಸರ್ಕಾರದಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಸಮುದಾಯದ ಮುಖಂಡರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ:

ಅಂಬೇಡ್ಕರ್ ಕುರಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಯನ್ನು ಖಂಡಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಅಲ್ಪಸಂಖ್ಯಾತ ಮುಸ್ಲಿಂ ಅಭಿವೃದ್ಧಿ ಸಮಿತಿ ಪ್ರತಿಭಟನೆ ನಡೆಸಿ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು. ಅಂಬೇಡ್ಕರ್ ಅವರ ಗೌರವವನ್ನು ಕಾಪಾಡುವ ಸಲುವಾಗಿ ಸರ್ಕಾರದಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಸಮುದಾಯದ ಮುಖಂಡರು ಒತ್ತಾಯಿಸಿದರು.

ಇರಫಾನ ಶೇಖ ಮಾತನಾಡಿ, ಭಾರತವು ತನ್ನ ಸಂವಿಧಾನದ ಮೂಲಕ ಸಮಾನತೆ, ನ್ಯಾಯ, ಮತ್ತು ಸಹಬಾಳ್ವೆಯ ತತ್ವಗಳಿಗೆ ಬದ್ಧವಾಗಿದೆ. ಭಾರತರತ್ನ ಡಾ.ಅಂಬೇಡ್ಕರ್‌ ಅವರು ಈ ತತ್ವಗಳಿಗೆ ಜೀವ ತುಂಬಿ, ದೇಶದ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ ಮಹಾನ್ ನಾಯಕ. ಇಂತಹ ನಾಯಕರ ಬಗ್ಗೆ ಕೇವಲವಾಗಿ ಮಾತನಾಡಿದ ಅಮಿತ್ ಶಾ ಅವರ ಮೇಲೆ ತಕ್ಷಣ ಕ್ರಮ ಕೈಗೊಂಡು ಅವರನ್ನು ಸಚಿವ ಸಂಪುಟದಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಸೈಯದ್ ಜೈನುಲ್ ಅಬಿದಿನ್, ಅಕ್ರಂ ಮಾಶಾಳಕರ, ಹಫಿಜ್ ಸಿದ್ದಿಕಿ ಮಾತನಾಡಿದರು. ಮುಖಂಡರಾದ ಮುನ್ನಾ ಬಕ್ಷಿ, ಕುಲದೀಪ ಪೋತಿವಾಲೆ, ಇಖಲಾಸ್ ಸುನೇವಾಲೆ, ಇಮ್ರಾನ್ ಜಹಾಗಿರದಾರ, ಹಿದಾಯತ್ ಮಾಶಾಳಕರ, ಇಂಮ್ತಿಯಾಜ್ ಮುಲ್ಲಾ, ಹಬ್ಬು ಅಂಬಾರಖಾನೆ, ಅತಿಕ್ ನಾಲ್ಬಂದ, ಮುಸ್ತಫಾ ಆಲಮೇಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.