ಸಾರಾಂಶ
ವಾಲ್ಮೀಕಿ ಸಮಾಜದ ಸೌವಲತ್ತುಗಳು ಅನ್ಯ ಸಮಾಜಗಳ ಪಾಲಾಗುತ್ತಿದ್ದರಿಂದ ನಮ್ಮ ಸಮಾಜದ ಫಲಾನುಭವಿಗಳಿಗೆ ಮೋಸವಾಗುತ್ತಿದೆ
ಕನಕಗಿರಿ: ಪರಿಶಿಷ್ಟ ಪಂಗಡಕ್ಕೆ ಅನ್ಯ ಸಮುದಾಯಗಳ ಸೇರ್ಪಡೆಗೊಳಿಸುವುದನ್ನು ಖಂಡಿಸಿ ಗುರುವಾರ ಪಟ್ಟಣದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲೂಕು ಘಟಕದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
ಮಹಾಸಭಾದ ತಾಲೂಕು ಗೌರವಾಧ್ಯಕ್ಷ ಮುದಿಯಪ್ಪ ನಾಯಕ ಮಲ್ಲಿಗೆವಾಡ ಮಾತನಾಡಿ, ಕೋಲಿ, ಕಬ್ಬಲಿಗ, ಬೆಸ್ತ ಸೇರಿ ಅನ್ಯ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವುದಲ್ಲದೆ ಎಸ್.ಟಿ ಹಾಗೂ ಸಿಂಧುತ್ವ ಪ್ರಮಾಣ ಪತ್ರ ನೀಡಿ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ವಾಲ್ಮೀಕಿ ಸಮಾಜದ ಸೌವಲತ್ತುಗಳು ಅನ್ಯ ಸಮಾಜಗಳ ಪಾಲಾಗುತ್ತಿದ್ದರಿಂದ ನಮ್ಮ ಸಮಾಜದ ಫಲಾನುಭವಿಗಳಿಗೆ ಮೋಸವಾಗುತ್ತಿದೆ. ಸರ್ಕಾರ ಈ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿ ಯಾರಿಗೆಲ್ಲ ನಕಲಿ ಎಸ್.ಟಿ ಪ್ರಮಾಣ ಪತ್ರ ಹಾಗೂ ಸಿಂಧುತ್ವ ನೀಡಿರುವ ಎಲ್ಲ ಪತ್ರ ವಾಪಸ್ ಪಡೆದು ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.ಮಹಾಸಭಾದ ತಾಲೂಕು ಉಪಾಧ್ಯಕ್ಷ ನಿಂಗಪ್ಪ ನಾಯಕ ಮಾತನಾಡಿ, ತಳವಾರ ಎನ್ನುವ ಹೆಸರಿನಲ್ಲಿ ಬೆಳಗಾವಿ, ಯಾದಗಿರಿ, ಕಲಬುರ್ಗಿ, ಬೀದರ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡದ ಪ್ರಮಾಣಪತ್ರ ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಿಎಂ ಸಿದ್ರಾಮಯ್ಯ ವಾಲ್ಮೀಕಿ ಸಮುದಾಯ ತುಳಿಯಲಾರಂಭಿಸಿದ್ದಾರೆ. ಈಗಾಗಲೇ ಇಬ್ಬರು ವಾಲ್ಮೀಕಿ ಸಮುದಾಯಕ್ಕೆ ಸೇರಿದ ಸಚಿವರನ್ನು ಸಂಪುಟದಿಂದ ಕೈ ಬಿಟ್ಟಿದ್ದು, ಮರಳಿ ನಮ್ಮ ಸಮಾಜದವರನ್ನು ಸಚಿವರನ್ನಾಗಿ ಮಾಡದೆ ಅನ್ಯಾಯವೆಸಗಿದ್ದರಿಂದ ಸಮಾಜದ ಜನರು ರಾಜ್ಯವ್ಯಾಪಿ ಪ್ರತಿಭಟನೆಗಿಳಿದಿದ್ದೇವೆ. ಸಮುದಾಯಕ್ಕೆ ಆಗಿರುವ ಅನ್ಯಾಯ ಪರಿಹರಿಸಿಕೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ರಾಜವಂಶಸ್ಥ ರಾಜಾ ಶರಶ್ಚಂದ್ರ ನಾಯಕ, ಮಹಾಸಭಾದ ಅಧ್ಯಕ್ಷ ನಾಗರಾಜ ಇದ್ಲಾಪುರ, ಸಂಗಪ್ಪ ರಾಮದುರ್ಗಾ, ಶರಣಪ್ಪ ಸೋಮಸಾಗರ, ರಮೇಶ ನಾಯಕ ಹುಲಿಹೈದರ, ಪಂಪಾಪತಿ ತರ್ಲಕಟ್ಟಿ, ಗ್ಯಾನಪ್ಪ ಗಾಣದಾಳ, ರಾಮು ಆಗೋಲಿ, ರಂಗಪ್ಪ ಕೊರಗಟಗಿ, ಕರಿಯಪ್ಪ ನಾಯಕ, ಕಂಠಿರಂಗಪ್ಪ ನಾಯಕ, ಶರಣೇಗೌಡ ಹುಲಸನಹಟ್ಟಿ, ಬೆಟ್ಟಪ್ಪ ಜೀರಾಳ, ರಂಗಪ್ಪ ತಳವಾರ, ಬಸವರಾಜ ಬಿಕೆ, ನಾಗೇಂದ್ರ ನಾಯಕ ಸೇರಿ ಇತರರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))