ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಿ ನಾಲ್ಕು ಸಂಹಿತೆಗಳನ್ನೂ ರೂಪಿಸಲು ಹೊರಟಿರುವ ಬಿಜೆಪಿಯ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಎಐಯುಟಿಯುಸಿಯಿಂದ ಇದೇ ಸೆ.4ಕ್ಕೆ ದೆಹಲಿಯ ಜಂತರ ಮಂತರ್ದಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ರಾಜ್ಯ ಉಪಾಧ್ಯಕ್ಷ ಎನ್.ಎಸ್. ವೀರೇಶ ತಿಳಿಸಿದರು.
ರಾಯಚೂರು: ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಿ ನಾಲ್ಕು ಸಂಹಿತೆಗಳನ್ನೂ ರೂಪಿಸಲು ಹೊರಟಿರುವ ಬಿಜೆಪಿಯ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಎಐಯುಟಿಯುಸಿಯಿಂದ ಇದೇ ಸೆ.4ಕ್ಕೆ ದೆಹಲಿಯ ಜಂತರ ಮಂತರ್ದಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ರಾಜ್ಯ ಉಪಾಧ್ಯಕ್ಷ ಎನ್.ಎಸ್. ವೀರೇಶ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದಲೂ ಬಿಜೆಪಿ ಸರ್ಕಾರವು ಕಾರ್ಮಿಕರ ಹಕ್ಕುಗಳನ್ನು ಕಸಿದು ಕೊಳ್ಳುತ್ತಾ ಬರುತ್ತಿದೆ. ಅಷ್ಟೇ ಅಲ್ಲದೇ ಅವರ ಆಡಳಿತವು ಸಂಪೂರ್ಣವಾಗಿ ಬಂಡವಾಳ ಶಾಹಿಗಳ ಪರವಾಗಿದೆ ಎಂದು ಖಂಡನೆ ವ್ಯಕ್ತಪಡಿಸಿದರು.ಕಾರ್ಮಿಕ ಸಂಘಟನೆ ಕಟ್ಟುವುದನ್ನು ತಡೆಯುವುದು, ಇಎಸ್ಐ, ಪಿಎಫ್ ಸೌಲಭ್ಯಗಳನ್ನು ಕಸಿದುಕೊಳ್ಳಲು ಹೊರಟಿದೆ. ಹೊರಗುತ್ತಿಗೆ, ಗುತ್ತಿಗೆ ಪದ್ದತಿಯನ್ನು ಉಳಿಸಲು ಕನಿಷ್ಟ ವೇತನದಿಂದಲೂ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕರಿಗೆ ಸೇವಾ ಭದ್ರತೆಯೇ ಇಲ್ಲದೇ ಹೋಗಿದೆ. ನಿಗದಿತ ಷರತ್ತು ಉದ್ಯೋಗ ಪದ್ಧತಿಯನ್ನ ಆಳವಡಿಸಲು ಹೊರಟಿದೆ. ಕಾರ್ಮಿಕರ ಶೋಷಣೆ ಮಾಡಲು ಬೇಕಿರುವ ಕಾನೂನು ರೂಪಿಸಿಕೊಂಡು ವೇತನದಿಂದ ಹಿಡಿದ ಎಲ್ಲ ಸೌಲಭ್ಯ ಕಡಿತಗೊಳಿಸಲು ಮುಂದಾಗುತ್ತಿದೆ. ಕೆಲಸದ ಅವಧಿ ವಿಸ್ತರಣೆ, ಮಹಿಳೆಯರಿಗೂ ರಾತ್ರಿ ಪಾಳೆಯಂತ ಮಾರಕ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆ.4ಕ್ಕೆ ನಡೆಸುತ್ತಿರುವ ಪ್ರತಿಭಟನೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ನೂರಾರು ಸಂಖ್ಯೆಯಲ್ಲಿ ಕಾರ್ಮಿಕ ಮುಖಂಡರು ಸೇರಿ ಅನೇಕರು ಭಾಗವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಪದಾಧಿಕಾರಿಗಳಾದ ಮಹೇಶ ಚಿಕಪಲರ್ವಿ, ಅಣ್ಣಪ್ಪ ಶೀರಿಶ್ಯಾಡ್, ವಿಮಲಾ, ಚೈತ್ರಾ ಇದ್ದರು.