ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಾಂಡವಪುರ ತಾಲೂಕಿನ ಚಿನಕುರಳಿಯಲ್ಲಿ ಲವ್ ಜಿಹಾದ್ ಪ್ರಕರಣ ನಡೆದಿದೆ ಎಂದು ಆರೋಪಿಸಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಪಟ್ಟಣದ ಡಿವೈಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಹಿಂದು ಜಾಗರಣ ವೇದಿಕೆ ಸಂಚಾಲಕ ಚಂದನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಚಿನಕುರುಳಿ ಗ್ರಾಮದ ಹಿಂದು ಯುವತಿ ಹಾಗೂ ಅದೇ ಗ್ರಾಮದ ಮುಸ್ಲಿಂ ಯುವಕನೊಂದಿಗೆ ಲವ್ ಜಿಹಾದ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ತಂದೆ ಶಿವಣ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ಮುಜಿದ್ ಪಾಷ ಎಂಬ ಯುವಕನ ಲವ್‌ಜಿಹಾದ್‌ಗೆ ಯುವತಿ ಬಲಿಯಾಗಿದ್ದಾರೆ ಎಂದು ಸಂಶಯ ಉಂಟಾಗಿದೆ ದೂರಿದರು.ಯುವತಿಯನ್ನು ಮುಸ್ಲಿಂ ಯುವಕನೇ ಅಪಹರಿಸಿ ಬೇರೆಡೆ ಇಟ್ಟಿರುವಂತಿದ್ದು, ಇದಕ್ಕೆ ಮುಸ್ಲಿಂ ಸಮಾಜದ ಮುಖಂಡರು ಬೆಂಬಲಿಸಿರುವ ಶಂಕೆ ವ್ಯಕ್ತವಾಗಿದೆ. ಕೂಡಲೇ ಯುವತಿಯ ತಂದೆಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಯುವತಿ ಇರುವ ಮಾಹಿತಿ ಕಲೆ ಹಾಕಿ ಪತ್ತೆಹಚ್ಚುವ ಕಾರ್ಯಕ್ಕೆ ಪೊಲೀಸರು ಮುಂದಾಗಬೇಕು. ಈ ಪ್ರಕರಣದ ತನಿಖೆಗೆ ಪೊಲೀಸರ ಒಂದು ಪ್ರತ್ಯೇಕ ತಂಡ ರಚಿಸಬೇಕು. ಯುವತಿಯನ್ನು ಪತ್ತೆ ಹಚ್ಚಿ ತಂದೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಹಿಂದು ಜಾಗರಣ ವೇದಿಕೆ ಚಂದನ್, ಚಂದಗಾಲು ಶಂಕರ್, ಶಶಾಂಕ್, ಕುದುರೆ ರಘು, ರವಿ, ಮದನ್ ಕೆ., ಸುರೇಶ್, ಅಶೋಕ್, ಗುರು ಸೇರಿದಂತೆ ಹಲವರು ಇದ್ದರು. ನಂತರ ಕಚೇರಿ ಸಹಾಯಕರಿಗೆ ದೂರಿನ ಮನವಿ ಸಲ್ಲಿಸಿದರು.
ನವೋದಯ ಕೋಚಿಂಗ್ ಸೆಂಟರ್ ಆರಂಭಕೆ.ಆರ್.ಪೇಟೆ: ತಾಲೂಕಿನ ತೆಂಡೇಕೆರೆ ಗ್ರಾಮದಲ್ಲಿ ದ ಸಿಟಿಜನ್ ಆಫ್ ಇಂಡಿಯಾ ಕ್ವಾಲಿಟಿ ಎಜುಕೇಶನ್ ಟ್ರಸ್ಟ್ ಹಾಗೂ ಕೃಷ್ಣರಾಜಪೇಟೆ ತಾಯಂದಿರ ಸ್ವಸಹಾಯ ಸಮಿತಿ ಆಶ್ರಯದಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಬಡ ವಿದ್ಯಾರ್ಥಿಗಳಿಗಾಗಿ ರೆಸಿಡೆನ್ಸಿಯಲ್ ನವೋದಯ ಕೋಚಿಂಗ್ ಸೆಂಟರ್ ಅನ್ನು ಆರಂಭಿಸಲಾಗಿದೆ. 5ನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲಕರ ರೀತಿಯಲ್ಲಿ ಕೋಚಿಂಗ್ ನೀಡಲಾಗುವುದು. ಆಸಕ್ತ ಪೋಷಕರು ಮಕ್ಕಳನ್ನು ನೋಂದಾಯಿಸಿಕೊಂಡು ಇದರ ಸದುಪಯೋಗ ಪಡೆಯಬೇಕು ಎಂದು ಸ್ಪರ್ಧಾತ್ಮಕ ಪರೀಕ್ಷೆಗಳ ಸಂಯೋಜಕ ಮಂಜುನಾಥ್ ತಿಳಿಸಿದ್ದಾರೆ. ಅನ್ನದಾಸೋಹ ನಡೆಸಿಕೊಡುವವರು ತಾಯಂದಿರ ಸ್ವಸಹಾಯ ಸಮಿತಿ ಅಧ್ಯಕ್ಷೆ ವೀಣಾ ಉಮೇಶ್ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳಿಗೆ ಅನ್ನದಾಸೋಹ ನೀಡಲಿದ್ದಾರೆ. ಆಸಕ್ತ ಪೋಷಕರು ಹೆಚ್ಚಿನ ಮಾಹಿತಿಗಾಗಿ ತಮ್ಮ ಮಕ್ಕಳೊಂದಿಗೆ ಕೋಚಿಂಗ್ ಸಂಯೋಜಕ ಮಂಜುನಾಥ್ ಅವರನ್ನುನೇರವಾಗಿ ಅಥವಾ ಮೊ ನಂ.7349279021 ಹಾಗೂ ವೀಣಾ ಉಮೇಶ್ ಮೊ-8971314976 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.