ಸಾರಾಂಶ
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟಿಸಿದರು.
ಕನ್ನಡಪ್ರಭ ವಾರ್ತೆ ಸುತ್ತೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಸಾರ್ವಜನಿಕವಾಗಿ ಅವಹೇಳನಕಾರಿಯಾಗಿ ಮಾತನಾಡಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ದ ಬುಧವಾರ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟಿಸಿದರು.ವರುಣ ಕ್ಷೇತ್ರಕ್ಕೆ ಸೇರುವ ಮೇಗಳಾಪುರ ಗ್ರಾಮದ ಬಳಿ ಮೈಸೂರು ಟಿ. ನರಸೀಪುರ ಮುಖ್ಯರಸ್ತೆಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಂಸದ ಪ್ರತಾಪ್ ಸಿಂಹ ವಿರುದ್ದ ಪ್ರತಿಭಟನೆ ನಡೆಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವುದರಿಂದ ಇವರನ್ನು ಬಂಧಿಸಿ, ಗಡೀಪಾರು ಮಾಡಬೇಕೆಂದು ಮೇಗಳಾಪುರ ಪೊಲೀಸ್ ಎಸ್ಐ ಚೇತನ್ ಅವರಿಗೆ ಪ್ರತಿಭಟನಾಕಾರರು ದೂರು ನೀಡಿದರು.ಪುಟ್ಟಣ್ಣ, ಕುಮಾರ್, ಬಸವರಾಜು, ಮಹದೇವಪ್ಪ, ಕೆಂಪೀರಯ್ಯ, ಸಿದ್ದರಾಮ, ಮಹೇಶ್, ಶೇಖರ, ಚಂದ್ರಶೇಖರ್, ಮಹೇಂದ್ರ, ಶಿವಕುಮಾರ್, ವೀರೇಂದ್ರ, ರಮೇಶ್, ಚೇತನ್, ಮಹೇಶ್, ತಿಮ್ಮರಾಜು, ನಂಜುಂಡಸ್ವಾಮಿ ಇದ್ದರು.