ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಸುಮಾರು 2 ಕೋಟಿಗೂ ಅಧಿಕ ಹಣವನ್ನು ಹಾಲಗಾನಹಳ್ಳಿ ಅಂಚೆ ಸಿಬ್ಬಂದಿ ರಮ್ಯ ದುರುಪಯೋಗ ಮಾಡಿರುವ ಘಟನೆ ನಡೆದು 3 ತಿಂಗಳು ನಡೆದಿದೆ. ಆದರೆ ಇಲ್ಲಿಯವರೆವಿಗೂ ಸಹ ರಮ್ಯ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಮೋಸ ಹೋದ ಗ್ರಾಹಕರು ರಮ್ಯಾ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ನಗರದ ಉಪ ಅಂಚೆ ಕಚೇರಿ ಮುಂದೆ 3ನೇ ದಿನದ ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸುತ್ತಿದ್ದಾರೆ.ಈ ನಮ್ಮ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ಜನಪ್ರಿತಿನಿಧಿಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ಸ್ಥಳಕ್ಕಾಗಲಿ ಅಥವಾ ನಮ್ಮ ಗ್ರಮಕ್ಕಾಗಲಿ ಆಗಮಿಸಿ ಬಡವರಿಗೆ ಆಗಿರುವ ಅನ್ಯಾಯದ ಬಗ್ಗೆ ಸಂಬಂಧಪಟ್ಟ ಅಂಚೆ ಕಚೇರಿಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸುವ ಧ್ವನಿ ಮಾಡಿಲ್ಲವೆಂದು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.ತದ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಅಂಚೆ ಇಲಾಖೆಯ ನಿರೀಕ್ಷಕ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿ ಜೂನ್-2025 ರಲ್ಲಿ ಈ ಕೃತ್ಯ ಬೆಳಕಿಗೆ ಬಂದಿದ್ದು 8 ತಿಂಗಳು ಕಳೆದಿದೆ. ಇಲ್ಲಿಯವರೆವಿಗೆ ನೀವು ಎಷ್ಟರಮಟ್ಟಿಗೆ ತನಿಖೆಯನ್ನು ನಡೆಸಿದ್ದೀರಿ? ತನಿಖಾ ವರದಿಯನ್ನು ಗ್ರಾಹಕರಿಗೆ ತಿಳಿಸಿ ಎಂದು ಅಧಿಕಾರಿಗನ್ನು ತರಾಟೆಗೆ ತೆಗೆದುಕೊಂಡರು. ದನ, ಕರು ಜಾನುವಾರುಗಳು ಹೂವು ಮನೆ ಬಿಟ್ಟು ಇಲ್ಲಿಗೆ ಬಂದು ಬಡವರು ಕೂರಬೇಕೆ ಎಂದರು.ಹಣ ಕಳೆದುಕೊಂಡ ಗ್ರಾಹಕರು ಉತ್ತಮ ವಕೀಲರನ್ನು ನೇಮಿಸಿಕೊಂಡು ನ್ಯಾಯಾಲಯದಿಂದ ಅತಿ ಶೀಘ್ರವಾಗಿ ತನಿಖೆ ನಡೆಸಲು ಆದೇಶ ಹೊರಡಿಸಿದಲ್ಲಿ ಮಾತ್ರ ಈ ಸಮಸ್ಯೆ ಬಗೆಹರಿಯುತ್ತದೆ. ನಿಮಗೆ ಸಾಧ್ಯವಾಗದಿದ್ದಲ್ಲಿ ನನ್ನ ಕಡೆಯಿಂದ ಉತ್ತಮ ವಕೀಲರನ್ನು ನೇಮಿಸಿ ಕೊಡುವುದಾಗಿ ಗ್ರಾಮಸ್ಥರಿಗೆ ಡಾ.ಕೆ.ಕೆಂಪರಾಜು ತಿಳಿಸಿದರು.ಗೌರಿಬಿದನೂರು ಅಂಚೆ ಇಲಾಖೆಯ ನಿರೀಕ್ಷಕ ಅಧಿಕಾರಿ ಅಲ್ಲಾಸಾಭ್ ಮಾತನಾಡಿ, ಅಂಚೆ ಕಚೇರಿಯ ಸಿಬ್ಬಂದಿ ರಮ್ಯರಿಂದ ಮೊದಲಿಗೆ 7.50ಲಕ್ಷ ರು.ಗಳನ್ನು ವಸೂಲಿ ಮತ್ತು ಅಂಚೆ ಇಲಾಖೆ ಉಳಿತಾಯ ಖಾತೆಯಿಂದ 3 ಲಕ್ಷ 40 ಸಾವಿರ ರು.ಗಳನ್ನು ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು. ತದ ನಂತರ 25 ಸಾವಿರ ರೂಗಳೊಳಗಿನ ಹಣವನ್ನು ಕೋಲಾರ ಹಿರಿಯ ಅಂಚೆ ನೀರೀಕ್ಷಕರು ವಿತರಣೆ ಮಾಡಲು ಅವಕಾಶವಿರುತ್ತದೆ. 25 ಸಾವಿರ ರು.ಗಳಿಗಿಂತ ಹೆಚ್ಚಿನ ಹಣವನ್ನು ಪಡೆಯಬೇಕಿದ್ದಲ್ಲಿ ವಲಯ ಕಚೇರಿಗೆ ವರದಿ ಸಲ್ಲಿಸಿದಲ್ಲಿ 20 ದಿನಗಳೊಳಗೆ ಹಣವನ್ನು ಉಳಿತಾಯ ಖಾತೆಗೆ ಅಥವಾ ಚೆಕ್ ಮೂಲಕ ವಿತರಿಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನೂರಾರು ಗ್ರಾಮಸ್ಥರು, ರಮೇಶ್, ಉಪ-ಅಂಚೆ ಕಛೇರಿ ನಿರೀಕ್ಷಕ ಅಲ್ಲಾಸಾಬ್, ಚಿಕ್ಕಬಳ್ಳಾಪುರ ಅಂಚೆ ಕಛೇರಿ ನಿರೀಕ್ಷಕರು ಮತ್ತಿತರರು ಇದ್ದರು.